CDS Examnನಲ್ಲಿ ಚಾಲಕನ ಪುತ್ರ ದೇಶಕ್ಕೆ ಫಸ್ಟ್ ರ‍್ಯಾಂಕ್

By Suvarna NewsFirst Published Jun 5, 2022, 12:08 PM IST
Highlights

ಉತ್ತರಾಖಂಡ್‌ನ ಹಲ್ದವಾನಿಯ ಇಂಜಿನಿಯರಿಂಗ್ ಪದವೀಧರ 22 ವರ್ಷದ ಹಿಮಾಂಶು ಪಾಂಡೆ ಅವರು ಸಿಡಿಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪರ್ ಆಗಿದ್ದಾರೆ.  ಅವರ ತಂದೆ ವೃತ್ತಿಯಲ್ಲಿ ಡ್ರೈವರ್ ಆಗಿದ್ದಾರೆ.

ನವದೆಹಲಿ (ಜೂ.5): ಉತ್ತರಾಖಂಡ್‌ನ ಹಲ್ದವಾನಿಯ ಇಂಜಿನಿಯರಿಂಗ್ ಪದವೀಧರ 22 ವರ್ಷದ ಹಿಮಾಂಶು ಪಾಂಡೆ ಅವರ ತಂದೆ ವೃತ್ತಿಯಲ್ಲಿ ಡ್ರೈವರ್ ಆಗಿದ್ದಾರೆ. ಆದರೆ ಇಂದು ಆ ತಂದೆ ಮಗನ ಸಾಧನೆ ನೋಡಿ ಹೆಮ್ಮೆ ಪಡುತ್ತಿದ್ದಾರೆ.  ಕೇಂದ್ರ ಲೋಕಸೇವಾ ಆಯೋಗ ನಡೆಸಿದ  (Union Public Service Commission -UPSC) ನಡೆಸಿದ ಸಂಯೋಜಿತ ರಕ್ಷಣಾ ಸೇವೆಗಳ (Combined Defence Services-CDS) ಪರೀಕ್ಷೆಯಲ್ಲಿ ದೇಶಕ್ಕೆ ಫಸ್ಟ್ ರ‍್ಯಾಂಕ್ ಗಳಿಸಿದ್ದಾರೆ.   ಪಾಂಡೆ ಡೆಹ್ರಾಡೂನ್‌ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಗೆ (IMA) ಆಯ್ಕೆಯಾಗಿದ್ದಾರೆ. ಅಲ್ಲಿ ಅವರು ತರಭೇತಿ ಪಡೆಯಲಿದ್ದಾರೆ.

ನಾನು ಬಾಲ್ಯದಿಂದಲೂ ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ನನಗೆ ಬೇರೆ ಆಯ್ಕೆ ಇರಲಿಲ್ಲ. ನಾನು ಸಿಡಿಎಸ್ ಸಿದ್ಧತೆಗಳ ಮೇಲೆ ಮಾತ್ರ ಗಮನಹರಿಸಿದ್ದೇನೆ. ಮಾತ್ರವಲ್ಲ ಹಲವಾರು ಬಾರಿ ನಾನು ಈ ಪ್ರಯತ್ನದಲ್ಲಿ  ವಿಫಲವಾದ ನಂತರವೂ ಪ್ರಯತ್ನ ಮುಂದುವರೆಸಿದ್ದೆ ಎಂದು  ಹಿಮಾಂಶು  ಹೇಳಿದ್ದಾರೆ. ತಮ್ಮ ಸಾಧನೆಗೆ  ಹಲ್ದ್ವಾನಿಯಲ್ಲಿರುವ ಅವರ ಪೋಷಕರು ಮತ್ತು ಕೋಚಿಂಗ್ ಇನ್‌ಸ್ಟಿಟ್ಯೂಟ್ ಶಿಕ್ಷಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

Textbookಗಳ ಮರು ಮುದ್ರಣ ಇಲ್ಲ; ಸಚಿವ ಬಿಸಿ.ನಾಗೇಶ್

ಪಾಂಡೆ ಅವರ ತಂದೆ ಕಮಲ್ ಪಾಂಡೆ ಖಾಸಗಿ ವಲಯದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಾರೆ ಮತ್ತು ತಾಯಿ ದೀಪಿಕಾ ಪಾಂಡೆ ಗೃಹಿಣಿ. ಹಲ್ದವಾನಿಯ ಎಬಿಎಂ ಶಾಲೆಯಲ್ಲಿ 12 ನೇ ತರಗತಿ ಪರೀಕ್ಷೆಯಲ್ಲಿ 95% ಅಂಕಗಳನ್ನು ಪಡೆದಿರುವ ಹಿಮಾಂಶು ಪಾಂಡೆ  ಬಳಿಕ ದ್ವಾರಹತ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಮಾಡಿದ್ದಾರೆ.

 ಸಿಡಿಎಸ್‌ ಪರೀಕ್ಷೆಗೆ ಇದು  ಪಾಂಡೆಯವರ ಮೂರನೇ ಪ್ರಯತ್ನವಾಗಿತ್ತು.  2017 ರಲ್ಲಿ ಪರೀಕ್ಷೆಗೆ ತಯಾರಿ ಆರಂಭಿಸಿದ ಪಾಂಡೆ  ಮತ್ತು ಮೊದಲು ಎರಡು ಬಾರಿ ತೇರ್ಗಡೆ ಹೊಂದಿದ್ದರು, ಆದರೆ ಕೆಲವು ಹಲ್ಲಿನ ಸಮಸ್ಯೆಗಳಿಂದ ವೈದ್ಯಕೀಯ ಪರೀಕ್ಷೆಯನ್ನು ತೆರವುಗೊಳಿಸಲು ವಿಫಲರಾಗಿದ್ದರು.

ಖಾಸಗಿ ಪ್ಲೇ ಸ್ಕೂಲ್ ಗಳಿಗೆ ಸೆಡ್ಡು ಹೊಡೆದ Udupiಯ ಹವಾನಿಯಂತ್ರಿತ ಅಂಗನವಾಡಿ

ಈ ಬಾರಿ ಅವರು CDS ಮತ್ತು  ಸರ್ವಿಸ್ ಸೆಲಕ್ಷನ್ ಬೋರ್ಡ್ ಪರೀಕ್ಷೆ ಎರಡರಲ್ಲೂ ಉತ್ತೀರ್ಣರಾಗಿದ್ದಾರೆ.  IMA ನಲ್ಲಿ 24 ನೇ ರ‍್ಯಾಂಕ್  ಮತ್ತು ಭಾರತೀಯ ನೌಕಾ ಅಕಾಡೆಮಿಯಲ್ಲಿ 13 ನೇ ರ‍್ಯಾಂಕ್ ಪಡೆದಿದ್ದರು. 

ನಾನು  ದೇಶಕ್ಕೆ ಫಸ್ಟ್ ಬರುತ್ತೇನೆ ಎಂಬುದನ್ನು ನಿರೀಕ್ಷಿಸಿರಲಿಲ್ಲ, ಫಲಿತಾಂಶಗಳನ್ನು ನೋಡಿದ ನಂತರ ನಾನು ಭಾವಪರವಶನಾದೆ. ಇದು  ಸಂಘಟಿತ ಪ್ರಯತ್ನವಾಗಿದೆ. ನನಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಪ್ರತಿಯೊಬ್ಬರೂ ತಮ್ಮ ಕನಸುಗಳಲ್ಲಿ ನಂಬಿಕೆ ಇರಿಸಬೇಕು ಮತ್ತು ಅದಕ್ಕಾಗಿ ಕಠಿಣ ಶ್ರಮ ವಹಿಸಬೇಕು. ಕೆಟ್ಟ ಸನ್ನಿವೇಶದಲ್ಲಿಯೂ ಸಹ, ಒಬ್ಬ ವ್ಯಕ್ತಿಯು ಮೌಲ್ಯಯುತವಾದ ಪಾಠಗಳನ್ನು ಕಲಿಯುತ್ತಾನೆ ”ಎಂದು ಫಲಿತಾಂಶ ಬಿಡುಗಡೆಯಾದ ನಂತರ ಪಾಂಡೆ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. 

ಪ್ರತಿಷ್ಠಿತ Spelling Bee ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ಮೂಲದ ಹರಿಣಿ ಲೋಗನ್! 

ಈ ನಡುವೆ, ಪಿಥೋರಗಢ ಗ್ರಾಮದ 22 ವರ್ಷದ ವಿನಯ್ ಪುನೀತ ಸಿಡಿಎಸ್‌ನಲ್ಲಿ 10 ನೇ ರ‍್ಯಾಂಕ್ ಗಳಿಸಿದ್ದಾರೆ.  ಸ್ಥಳೀಯವಾಗಿ  ಅಂಗಡಿ ಹಾಕಿಕೊಂಡಿರುವ ಅವರ ತಂದೆ ಮನೋಜ್ ಕುಮಾರ್ ಪುನೀತ ಮತ್ತು ತಾಯಿ ಗೃಹಿಣಿ ಮಾಧವಿ ಪುನೀತ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿನಯ್ ಅವರು ಪಿಥೋರಗಢದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮತ್ತು ಲಕ್ನೋದಲ್ಲಿ ಬಿಎಸ್ಸಿ ಮಾಡಿದ್ದಾರೆ.  ತಮ್ಮ ಪದವಿ  ಓದುತ್ತಿರುವಾಗಲೇ ಸಿಡಿಎಸ್‌ಗೆ ಸಿದ್ಧರಾಗಿದ್ದರು ಮತ್ತು ಪ್ರಸ್ತುತ ದೆಹಲಿ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಲು ತರಬೇತಿ ಪಡೆಯುತ್ತಿದ್ದಾರೆ. ಪರೀಕ್ಷೆಯಲ್ಲಿ ಇದು ಅವರ ಮೊದಲ ಪ್ರಯತ್ನವಾಗಿತ್ತು. ಪುನೀತಾ ಐಎಂಎಗೂ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಐಎಂಎ, ಐಎನ್ಎ ಮತ್ತು ಏರ್ ಫೋರ್ಸ್ ಅಕಾಡೆಮಿಗೆ ಪ್ರವೇಶಕ್ಕಾಗಿ ಯುಪಿಎಸ್ಸಿ ಈ ಬಾರಿ ಒಟ್ಟು 142 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ.

click me!