ಅಬ್ಬಬ್ಬಾ..ಜಸ್ಟ್ ನಾಯಿ ನೋಡಿಕೊಳ್ಳೋದಷ್ಟೇ ಕೆಲ್ಸ, ತಿಂಗಳಿಗೆ ಭರ್ತಿ 1 ಕೋಟಿ ರೂ.ಸಂಬಳ!

By Vinutha Perla  |  First Published Jun 24, 2023, 8:41 AM IST

ಜಗತ್ತಿನಲ್ಲಿ ಕೆಲವು ವಿಚಿತ್ರ ಕೆಲಸಗಳಿಗೆ ಲಕ್ಷಗಟ್ಟಲೆ, ಕೋಟಿಗಟ್ಟಲೆ ಸ್ಯಾಲರಿ ನಿಗದಿಪಡಿಸಿರುತ್ತಾರೆ. ಇದು ಸಹ ಅಂಥದ್ದೇ ಒಂದು ವಿಚಿತ್ರ ಜಾಬ್‌. ಜಸ್ಟ್‌ ನಾಯಿಯನ್ನು ನೋಡ್ಕೊಂಡ್ರೆ ಸಾಕು ತಿಂಗಳಿಗೆ 1 ಕೋಟಿ ರೂ. ಸಂಬಳ ಕೊಡ್ತಾರೆ. ಕೇಳೋಕೆ ಅಚ್ಚರಿ ಎನಿಸಿದರೂ ಇದು ನಿಜ.


ಜಗತ್ತಿನಲ್ಲಿ ಅದೆಷ್ಟು ಚಿತ್ರವಿಚಿತ್ರವಾದ ಆಸಕ್ತಿಕರ ಉದ್ಯೋಗಗಳಿವೆ.  ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಅಚ್ಚರಿಯಾಗೋದು ಖಂಡಿತ. ಇಡೀ ದಿನಾ ಟಿವಿ ನೋಡುವುದು, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕೆಲಸ ಮಾಡಿಕೊಳ್ಳುವುದು, ಸುಮ್ಮನೆ ಸೂಟ್ ಹಾಕಿಕೊಂಡು ಓಡಾಡುವುದಕ್ಕೆ ಕೂಡಾ ಸಂಬಳ ಕೊಡೋ ವಿಚಾರಗಳ ಬಗ್ಗೆ ನೀವು ಈ ಹಿಂದೆ ಕೇಳಿದ್ದೀರಿ. ಇಂಥಾ ಕೆಲವು ವಿಚಿತ್ರ ಕೆಲಸಗಳಿಗೆ ಲಕ್ಷಗಟ್ಟಲೆ, ಕೋಟಿಗಟ್ಟಲೆ ಸ್ಯಾಲರಿ ನಿಗದಿಪಡಿಸಿರುತ್ತಾರೆ. ಇದು ಸಹ ಅಂಥದ್ದೇ ಒಂದು ವಿಚಿತ್ರ ಜಾಬ್‌. ಜಸ್ಟ್‌ ನಾಯಿಯನ್ನು ನೋಡ್ಕೊಂಡ್ರೆ ಸಾಕು ತಿಂಗಳಿಗೆ 1 ಕೋಟಿ ರೂ. ಸಂಬಳ ಕೊಡ್ತಾರೆ. ಕೇಳೋಕೆ ಅಚ್ಚರಿ ಎನಿಸಿದರೂ ಇದು ನಿಜ.

ಅಮೆರಿಕದ ಶ್ರೀಮಂತ ಕುಟುಂಬದವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇವರ ಮನೆಯಲ್ಲಿ ಒಂದು ನ್ಯಾನ್ಸಿ ಎಂಬ ನಾಯಿ (Dog) ಸಾಕಿದ್ದಾರೆ. ಇದನ್ನು ಅವರು ನೋಡಿಕೊಳ್ಳಲು ಕಷ್ಟಅಂತೆ. ಅದಕ್ಕಾಗಿ ನಾಯಿಯ ಸಂಪೂರ್ಣ ಆಹಾರ ಕ್ರಮಗಳು (Food habit) ತಿಳಿದಿರುವವರು, ನಾಯಿ ಬಗ್ಗೆ ಅಡಿಯಿಂದ ಮುಡಿವರೆಗೆ ತಿಳಿದಿರುವವರು ಅರ್ಜಿ ಸಲ್ಲಿಸಬಹುದಂತೆ. ಇದಕ್ಕೆ ಈಗಾಗಲೇ 300 ಅರ್ಜಿಗಳು ಬಂದಿದೆಯಂತೆ. ಒಬ್ಬ ವ್ಯಕ್ತಿಯನ್ನು ಅವರೇ ಆಯ್ಕೆ ಮಾಡುತ್ತಾರೆ. ಆದರೆ ಅದಕ್ಕೆ ಆಯ್ಕೆಯಾಗುವವರು ತಮ್ಮ ವೈಯಕ್ತಿಕ ಜೀವನ (Personal life) ತೊರೆಯಬೇಕು ಎಂದು ತಿಳಿಸಿದೆ. ಆನ್‌ಲೈನ್‌ನಲ್ಲಿ ಈ ಕುರಿತಾದ ಜಾಹೀರಾತನ್ನು (Advertisement) ಬಿಡುಗಡೆ ಮಾಡಿದೆ. ಈ ಕುಟುಂಬ ಉದ್ಯೋಗಕ್ಕಾಗಿ ನೇಮಕವಾಗುವ ವ್ಯಕ್ತಿ ತುಂಬಾ ಕಾಳಜಿಯಿಂದ (Care) ನಾಯಿಗಳನ್ನು ನೋಡಿಕೊಳ್ಳಬೇಕು ಎಂದು ತಿಳಿಸಿದೆ. 

Tap to resize

Latest Videos

ಛೀ! ಈ ವಾಸನೆ ತಗೊಂಡ್ರೆ ತಿಂಗಳಿಗೆ 1.5 ಲಕ್ಷ ರೂ. ಸಂಬಳ ಕೊಡ್ತಾರಂತೆ...

ಡಾಗ್‌ ಕೇರ್ ವಹಿಸೋದಷ್ಟೇ ಕೆಲಸ, ವರ್ಷಕ್ಕೆ ಆರೇ ದಿನ ರಜೆ
ಮಾತ್ರವಲ್ಲ ನಿಯೋಜನೆಗೊಂಡ ವ್ಯಕ್ತಿ ನಾಯಿಯ ಎಲ್ಲಾ ಕೆಲಸದ ಅವಶ್ಯಕತೆಗಳನ್ನು ಪೂರೈಸಬೇಕು, ಅವನು/ಅವಳು ಸೆಂಟ್ರಲ್ ಲಂಡನ್‌ನ ನೈಟ್ಸ್‌ಬ್ರಿಡ್ಜ್‌ನಲ್ಲಿ ಕುಟುಂಬದೊಂದಿಗೆ ಇರಬೇಕಾಗುತ್ತದೆ. ಆದರೆ ಕುಟುಂಬವು ಪ್ರಯಾಣಿಸಿದಾಗಲೆಲ್ಲ ಮುದ್ದು ಸಾಕುಪ್ರಾಣಿಗಳೊಂದಿಗೆ ಆಕೆಯೂ ಪ್ರಯಾಣಿಸಬೇಕು. ನಾಯಿಗಳಿಗೆ ಆಹಾರ ಸರಬರಾಜು, ವೆಟ್ ಅಪಾಯಿಂಟ್‌ಮೆಂಟ್‌ಗಳು ಮತ್ತು ಅವರ ಆರೋಗ್ಯದ ವಿವರವಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ. ಈ ಎಲ್ಲಾ ಅವಶ್ಯಕತೆಗಳ ಹೊರತಾಗಿ, ಕೆಲಸವು ವರ್ಷಕ್ಕೆ ಆರು ವಾರಗಳ ರಜೆಯನ್ನು ಹೊಂದಿದೆ ಎಂದು ತಿಳಿಸಲಾಗಿದೆ.

ನೇಮಕಾತಿದಾರ ಜಾರ್ಜ್ ಡನ್ ಪ್ರಕಾರ, ಏಜೆನ್ಸಿಯು ನಾಯಿ-ದಾದಿಯ ಕೆಲಸವನ್ನು ಪೋಸ್ಟ್ ಮಾಡಿರುವುದು ಇದೇ ಮೊದಲು. ಅವರು ಈ ಉದ್ಯೋಗ ಜಾಹೀರಾತನ್ನು ಪೋಸ್ಟ್ ಮಾಡಿದ ನಂತರ, ಪೋಸ್ಟ್ ಈಗಾಗಲೇ ಸುಮಾರು 400 ಸಂಭಾವ್ಯ ಅಭ್ಯರ್ಥಿಗಳಿಂದ ಅರ್ಜಿಯನ್ನು ಪಡೆದುಕೊಂಡಿದೆ. 'ನಾವು ಈ ರೀತಿಯ ಜಾಬ್ ಆಫರ್‌ ಮೊದಲ ಬಾರಿ ನೀಡಿದ್ದೇವೆ. ಇದಕ್ಕೆ ಆಫರ್ ಮಾಡಿರೋ ಸಂಬಳವು (Salary) ಅಧಿಕವಾಗಿರುವ ಕಾರಣ ಜನರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು ಹೇಳಿದ್ದಾರೆ. 'ಪಶುವೈದ್ಯರಾಗಿಯೂ ಸಹ, ನೀವು ಅಷ್ಟು ಸಂಬಳವನ್ನು ಪಡೆಯಲು ಸಾಧ್ಯವಿಲ್ಲ' ಎಂದು ಜಾಬ್ ಆಫರ್ ಮಾಡಿದ ಸಂಸ್ಥೆ ತಿಳಿಸಿದೆ.

ಚೀಸ್ ತಿಂದು ಮಲಗೋ ಕೆಲಸಕ್ಕೆ ಸಿಗ್ತಿದೆ 81 ಸಾವಿರ ರೂ ವೇತನ!

ದಿನವಿಡೀ ಸುಮ್ನೆ ಕ್ಯಾಂಡಿ ತಿನ್ತಿದ್ರೆ ಸಾಕು, ವರ್ಷಕ್ಕೆ 61 ಲಕ್ಷ ರೂ. ಸ್ಯಾಲರಿ !
ಸಿಹಿ ತಿನ್ನೋಕೆ ಎಲ್ರೂ ಇಷ್ಟಪಡ್ತೀವಿ. ಎಷ್ಟು ದುಡ್ಡು ಕೊಟ್ಟಾದ್ರೂ ವೆರೈಟಿ ವೆರೈಟಿ ಚಾಕ್ಲೇಟ್ ತಿನ್ತೀವಿ. ಆದ್ರೆ ಸಿಹಿ ತಿಂದು ದುಡ್ಡು ಮಾಡ್ಬೋದು ಅನ್ನೋ ಯೋಚ್ನೆ ಯಾವತ್ತಾದ್ರೂ ನಿಮ್ಗೆ ಬಂದಿದ್ಯಾ ? ಕೆನಡಾದ ಕಂಪನಿಯು ಕ್ಯಾಂಡಿ ತಿನ್ನೋ ಹುದ್ದೆಯೊಂದನ್ನು ಸೃಷ್ಟಿಸಿದ್ದು, ಕ್ಯಾಂಡಿ ಅಧಿಕಾರಿಗೆ ವರ್ಷಕ್ಕೆ ಭರ್ತಿ  61.14 ಲಕ್ಷ ರೂ. ಆಫರ್ ಮಾಡಿದೆ. ಜುಲೈನಲ್ಲಿ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಲಾದ ವೇಕೆನ್ಸಿಯಲ್ಲಿ ಚೀಫ್‌ ಕ್ಯಾಂಡಿ ಟೇಸ್ಟರ್‌ ಹುದ್ದೆಗೆ ಆಹ್ವಾನಿಸಲಾಗಿದೆ. ಹೆಚ್ಚುವರಿಯಾಗಿ, ಪೋಷಕರ ಅನುಮತಿಯೊಂದಿಗೆ ಐದು ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ಸ್ಥಾನವು ತೆರೆದಿರುತ್ತದೆ. ಸದ್ಯ ಈ ಹುದ್ದೆಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ಬರ್ತಿರೋದಾಗಿ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಮಿಲ್ ಹೆಜಾಜಿ ಹೇಳಿದ್ದಾರೆ.

click me!