6 ವರ್ಷದಲ್ಲಿ  ದೇಶ ನಿಜಕ್ಕೂ ಕಳೆದುಕೊಂಡ ಉದ್ಯೋಗ ಎಷ್ಟು? ಬೆಚ್ಚಿ ಬೀಳಿಸುವ ಸರ್ವೇ!

By Web DeskFirst Published Nov 1, 2019, 4:54 PM IST
Highlights

ಯಾರಿಗೆ ಬಂದಿದೆ ಅಚ್ಛೆ ದಿನ್?/ ಉದ್ಯೋಗ ಅವಕಾಶಗಳಗಳಲ್ಲಿ ಗಣನೀಯ ಕುಸಿತ/ ಅಜೀಮ್ ಪ್ರೇಮ್ ಜೀ ವಿಶ್ವವಿದ್ಯಾನಿಲಯದಿಂದ ಅಧ್ಯಯನ

ಬೆಂಗಳೂರು(ನ.01)  ದೇಶದಲ್ಲಿ ಉದ್ಯೋಗ ಅವಕಾಶಗಳು ಕಡಿಮೆ ಆಗುತ್ತಿವೆ. ಕೇಂದ್ರ  ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಎಲ್ಲಿಗೆ ಬಂದಿದೆ ಅಚ್ಛೆ ದಿನ್? ಯಾರಿಗೆ ಬಂದಿದೆ ಒಳ್ಳೆಯ ದಿನಗಳು ಎಂದು ವಿಪಕ್ಷಗಳು ಮೇಲಿಂದ ಮೇಲೆ ಪ್ರಶ್ನೆ ಮಾಡುತ್ತಲೇ ಇವೆ. ಇದೆಲ್ಲದರ ನಡುವೆಯೇ ನಡೆದ ಅಧ್ಯಯನವೊಂದು ಅನೇಕ ಸಂಗತಿಗಳನ್ನು ತೆರೆದಿರಿಸಿದೆ.

ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಅಳೆಯುವ ಮಾನದಂಡವನ್ನಾಗಿ ಈ ಅಧ್ಯಯನ ಪರಿಗಣಿಸಬಹುದೋ ಗೊತ್ತಿಲ್ಲ! ಆದರೆ ಪ್ರತಿಯೊಂದು ಅಂಶಗಳನ್ನು ಗಮನವಿಟ್ಟು ನೋಡಲೇಬೇಕು.

2011-12 ರಿಂದ 2017-18 ರ ಅವಧಿಯಲ್ಲಿ ಬರೋಬ್ಬರಿ 2.6 ಮಿಲಿಯನ್ (26 ಲಕ್ಷ) ಉದ್ಯೋಗ ಅವಕಾಶಗಳು ಕಡಿತವಾಗಿವೆ ಎಂಬ ಆತಂಕದ ಸಂಗತಿಯನ್ನು ಈ ಅಧ್ಯಯನ ತೆರೆದಿರಿಸಿದೆ. 

ಕನ್ನಡಿಗರಿಗೆ ಯಾವಾಗ ಉದ್ಯೋಗ ಸಿಗುತ್ತೆ?

ಅಜಿಮ್ ಪ್ರೇಮ್‍ಜಿ ಯುನಿವರ್ಸಿಟಿಯ ಸೆಂಟರ್ ಆಫ್ ಸಸ್ಟೆನೇಬಲ್ ಎಂಪ್ಲಾಯ್ ಮೆಂಟ್ ಈ ಸಮೀಕ್ಷೆ ಮಾಡಿದೆ. ಐಟಿ ಇಂಡಸ್ಟ್ರಿ ಅತಿ ಹೆಚ್ಚಿನ ಉದ್ಯೋಗ ಅವಕಾಶ ಕಳೆದುಕೊಂಡಿದೆ. ಅಮೆರಿಕನ್ ಬೇಸ್ಡ್ ಸಂಸ್ಥೆಯೊಂದೆ 6000 ಜನರನ್ನು ಕೆಲಸದಿಂದ ತೆಗೆದುಹಾಕಿದೆ.

13 ಸಾವಿರ ನೌಕರರು ನನ್ನವರಲ್ಲ ಎಂದ ಕಾಗ್ನಿಜೆಂಟ್: ಉದ್ಯೋಗ ಕಡಿತದ ಸ್ಟಂಟ್!...

ಐಟಿಯಲ್ಲಿ ಮಾತ್ರವಲ್ಲ, ಆಟೋಮೋಬೈಲ್ ಕ್ಷೇತ್ರದಲ್ಲಿಯೂ ಅನೇಕ ಸಾವಿರ ಸಂಖ್ಯೆಯ ಉದ್ಯೋಗ ಕಡಿತವಾಗಿದೆ. ಮಾರುತಿ ಸುಜುಕಿ ಒಂದೇ ಮೂರು ಸಾವಿರ ಕೆಲಸಗಾರರನ್ನು ಕಳೆದುಕೊಂಡಿದೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಸವಾಲುಗಳು ಪ್ರತಿದಿನ ಉದ್ಭವಿಸುತ್ತಲೇ ಇವೆ. ನಿರಂತರವಾಗಿ ಒಂಭತ್ತನೇ ತಿಂಗಳಿನಲ್ಲಿಯೂ ಮಾರಾಟ ಕುಸಿದಿದೆ. 

click me!