ಆಪಲ್ ಕಂಪನಿಯು ತನ್ನ ಕೂಪರ್ಟಿನೋ ಕೇಂದ್ರ ಕಚೇರಿಯಿಂದ 185 ಉದ್ಯೋಗಿಗಳನ್ನು ವಜಾ ಮಾಡಿದೆ, ಹೆಚ್ಚಿನವರು ಭಾರತೀಯರು. ಹಣಕಾಸಿನ ವಂಚನೆ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ನ್ಯೂಯಾರ್ಕ್ (ಜ.9): ವಿಶ್ವದ ಅತ್ಯಂತ ಶ್ರೀಮಂತ ಕಂಪನಿಗಳಲ್ಲಿ ಒಂದಾದ ಆಪಲ್ ಅಂದಾಜು 185 ಉದ್ಯೋಗಿಗಳನ್ನು ತಮ್ಮ ಕೂಪರ್ಟಿನೋ ಕೇಂದ್ರ ಕಚೇರಿಯಿಂದ ವಜಾ ಮಾಡಿದೆ ಎಂದು ವರದಿಯಾಗಿದೆ. ಇದರಲ್ಲಿ ಹೆಚ್ಚಿನವರು ಭಾರತೀಯರು ಎಂದು ಹೇಳಲಾಗಿದೆ. ಸಈ ಎಲ್ಲಾ ಉದ್ಯೋಗಿಗಳು ಭಾಗಿಯಾಗಿರುವ ಹಣಕಾಸಿನ ವಂಚನೆ ಹಗರಣ ಬಹಿರಂಗವಾದ ಬೆನ್ನಲ್ಲಿಯೇ ಇವರನ್ನು ವಜಾ ಮಾಡಲಾಗಿದೆ. ಈ ಉದ್ಯೋಗಿಗಳು ಆಪಲ್‌ನ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಲಿಟಿ ಅಂದರೆ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು ಎನ್ನಲಾಗದೆ. ಈ ಯೋಜನೆಯ ಪ್ರಕಾರ, ಆಪಲ್ ಲಾಭರಹಿತ ಸಂಸ್ಥೆಗಳಿಗೆ ಉದ್ಯೋಗಿ ದೇಣಿಗೆಗಳನ್ನು ಹೊಂದಿಸುತ್ತದೆ. ಅಂದರೆ ಲಾಭರಹಿತ ಸಂಸ್ಥೆಗಳಿಗೆ ದುಪ್ಪಟ್ಟು ಮೊತ್ತ ಸಿಗುತ್ತದೆ.ಆದರೆ, ಆಪಲ್‌ನ ಉದ್ಯೋಗಿಗಳು ಈ ಲಾಭರಹಿತ ಸಂಸ್ಥೆಗಳೊಂದಿಗೆ ಕೈಜೋಡಿಸಿಕೊಂಡು, ತಮ್ಮ ವೇತನದ ಹಣವನ್ನು ವಾಪಾಸ್ ಪಡೆದುಕೊಳ್ಳುತ್ತಿದ್ದರು. ಇನ್ನೊಂದೆಡೆ, ಕಂಪನಿಯಿಂದ ಬರುವ ಹಣವನ್ನು ಅವರೇ ಇರಿಸಿಕೊಳ್ಳುತ್ತಿದ್ದರು.ಈ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಆರು ಉದ್ಯೋಗಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ವಜಾ ಆಗಿರುವ 185 ಉದ್ಯೋಗಿಗಳ ಪೈಕಿ ಹೆಚ್ಚಿನವರು ಭಾರತೀಯರಾಗಿದ್ದಾರೆ. ಅಮೆರಿಕದಲ್ಲಿ ತೆಲುಗು ದತ್ತಿ ಸಂಸ್ಥೆಗಳನ್ನು ತಮ್ಮ ಹಣಕಾಸಿನ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ. ಸಾಂತಾ ಕ್ಲಾರಾ ಕೌಂಟಿ ಜಿಲ್ಲಾ ಅಟಾರ್ನಿ ಕಚೇರಿಯ ಪ್ರಕಾರ, ಆಪಲ್ ಮೂರು ವರ್ಷಗಳಲ್ಲಿ ಸುಮಾರು $152,000 (ಸುಮಾರು 1.26 ಕೋಟಿ ರೂ.) ವಂಚನೆಗೊಳಗಾಗಿದೆ.
ಈ ಉದ್ಯೋಗಿಗಳು ಲಾಭರಹಿತ ಸಂಸ್ಥೆಗಳಿಗೆ ನಕಲಿ ದೇಣಿಗೆ ನೀಡಿದ್ದರು. ಇವರು ನೀಡಿದ್ದಷ್ಟೇ ಮೊತ್ತವನ್ನು ಆಪಲ್ ಕಂಪನಿ ಕೂಡ ಅದೇ ಸಂಸ್ಥೆಗಳಿಗೆ ನೀಡುತ್ತಿತ್ತು. ಈ ಲಾಭರಹಿತ ಸಂಸ್ಥೆಗಳಲ್ಲಿ ಅಮೇರಿಕನ್ ಚೈನೀಸ್ ಇಂಟರ್ನ್ಯಾಷನಲ್ ಕಲ್ಚರಲ್ ಎಕ್ಸ್ಚೇಂಜ್ (ACICE) ಮತ್ತು Hop4Kids ಸೇರಿವೆ. ಈ ಸಂಸ್ಥೆಗಳು ಉದ್ಯೋಗಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಆಪಲ್ ಆರೋಪಿಸಿವೆ. ಒಮ್ಮೆ ಆಪಲ್ ಕಂಪನಿಯಿಂದ ಈ ಸಂಸ್ಥೆಗಳಿಗೆ ಹಣ ಬಂದ ಬಳಿಕ ಉದ್ಯೋಗಿ ನೀಡಿದ್ದ ದೇಣಿಗೆಯನ್ನು ಅವರಿಗೆ ವಾಪಾಸ್ ನೀಡುತ್ತಿದ್ದವು. ವರದಿಗಳ ಪ್ರಕಾರ, Hop4Kids ನ CEO ಮತ್ತು ACICE ನ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿದ ಸಿಯು ಕೀ (ಅಲೆಕ್ಸ್) ಕ್ವಾನ್ ಈ ಹಗರಣದ ಲೀಡರ್ ಎನ್ನಲಾಗಿದೆ.
ಒಂದು ತಿಂಗಳ ಕಾಲ ಮಹಾಕುಂಭ ಮೇಳದಲ್ಲಿ ಭಾಗಿಯಾಗಲಿರುವ ದಿ. ಸ್ಟೀವ್ ಜಾಬ್ ಪತ್ನಿ
ಆರೋಪ ಹೊರಿಸಲಾದ ಆರು ವ್ಯಕ್ತಿಗಳಲ್ಲಿ ಕ್ವಾನ್, ಯಾಥೇಯಿ (ಹೇಸನ್) ಯುಯೆನ್, ಯಾಟ್ ಸಿ (ಸನ್ನಿ), ನಗ್, ವೆಂಟಾವೊ (ವಿಕ್ಟರ್) ಲಿ, ಲಿಚಾವೊ ನಿ ಮತ್ತು ಝೆಂಗ್ ಚಾಂಗ್ ಸೇರಿದ್ದಾರೆ. ಈಗ ಅವರು ದೇಣಿಗೆಗಳನ್ನು ಸುಳ್ಳು ಮಾಡಿದ ಮತ್ತು ತೆರಿಗೆ ವಿನಾಯಿತಿಗಾಗಿ ಈ ಫೇಕ್ ವಹಿವಾಟುಗಳನ್ನು ಬಳಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದು ಕಾರ್ಪೊರೇಟ್ ನೀತಿಗಳು ಮತ್ತು ಯು.ಎಸ್. ತೆರಿಗೆ ಕಾನೂನುಗಳನ್ನು ಉಲ್ಲಂಘಿಸುತ್ತದೆ. ವಜಾಗೊಳಿಸಿದ ಅನೇಕ ಉದ್ಯೋಗಿಗಳು ಭಾರತೀಯ ಸಮುದಾಯಕ್ಕೆ ಸಂಬಂಧಿಸಿದ ಲಾಭರಹಿತ ಸಂಸ್ಥೆಗಳೊಂದಿಗೆ ಸಹಕರಿಸಿದ್ದಾರೆ ಎಂದು ವರದಿಗಳು ಬಹಿರಂಗಪಡಿಸಿವೆ. ಈ ಬಗ್ಗೆ ಆಪಲ್ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಭಾರತೀಯ ಮೂಲದ ಕೆವನ್ ಪರೇಖ್ ಆಪಲ್‌ನ ನೂತನ ಸಿಎಫ್‌ಓ, ಸ್ಯಾಲರಿ ಕೂಡ ರಿವಿಲ್!