ಮೈಕ್ರೋಸಾಫ್ಟ್‌ನ ಅಧ್ಯಯನ ವರದಿಯು AI ನಿಂದ ಅಪಾಯದಲ್ಲಿರುವ 40 ಉದ್ಯೋಗಗಳನ್ನು ಪಟ್ಟಿ ಮಾಡಿದೆ. AI ವಿರೋಧಿಸುವ ಬದಲು ಅದರೊಂದಿಗೆ ಹೇಗೆ ಕೆಲಸ ಮಾಡಬೇಕೆಂದು ಕಲಿಯುವಂತೆ ವರದಿ ಸಲಹೆ ನೀಡಿದೆ.
ನವದೆಹಲಿ: ಮೈಕ್ರೋಸಾಫ್ಟ್ ಅಧ್ಯಯನದ ವರದಿಯೊಂದು ಶಾಕಿಂಗ್ ಮಾಹಿತಿಯನ್ನು ಹೊರ ಹಾಕಿದೆ. ಈ ವರದಿಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಿಂದ ಅಪಾಯದಲ್ಲಿರುವ 40 ಉದ್ಯೋಗಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ವಿಶೇಷವಾಗಿ ಲೇಖಕರು, ಅನುವಾದಕರ ಹುದ್ದೆಗಳು ಅಪಾಯದಲ್ಲಿವೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಈ ಪಟ್ಟಿಯಲ್ಲಿ ಇತಿಹಾಸಕರು, ಸೇಲ್ಸ್ ರಿಪ್ರೆಸೆಂಟೇಟಿವ್, ಪ್ಯಾಸೆಂಜರ್ ಅಟೆಂಡರ್ ಅಂತಹ ಉದ್ಯೋಗಳು ಸೇರಿವೆ.
ಇಂದು AI ವಿಷಯ ಪ್ರಸ್ತಾಪಿಸಿದಾಗಲೆಲ್ಲಾ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿವೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಈಗಾಗಲೇ ಹಲವು ಸಾಫ್ಟ್‌ವೇರ್ ಕಂಪನಿಗಳು AI ತಂತ್ರಜ್ಞಾನ ಅಳವಡಿಸಿಕೊಂಡು ಸಾವಿರಾರು ಉದ್ಯೋಗವನ್ನು ಕಡಿತಗೊಳಿಸುತ್ತಿವೆ. ಸಾಮಾನ್ಯವಾಗಿ AIನಿಂದಾಗಿ ಐಟಿ, ಸಲಹಾ, ಸಂಶೋಧನೆ, ಬರವಣಿಗೆ ಮುಂತಾದ ಉದ್ಯೋಗಗಳು ಕಡಿತಗೊಳ್ಳುತ್ತಿವೆ ಎಂದು ಭಾವಿಸುತ್ತಾರೆ.
ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ ಮೈಕ್ರೋಸಾಫ್ಟ್‌ನ ಸಂಶೋಧನ ವರದಿ
ಇದೀಗ ಮೈಕ್ರೋಸಾಫ್ಟ್‌ನ ಸಂಶೋಧನೆಯ ವರದಿ ಹಲವು ಮಾಹಿತಿಯನ್ನು ಬಹಿರಂಗಪಡಿಸಿದ್ದು, ಅಪಾಯದಲ್ಲಿರುವ ಸುಮಾರು 40 ಉದ್ಯೋಗಗಳನ್ನು ಪಟ್ಟಿ ಮಾಡಿದೆ. ಎಐ ವಿರೋಧಿಸುವ ಬದಲಾಗಿ ಅದರೊಂದಿಗೆ ಹೇಗೆ ಕೆಲಸ ಮಾಡಬೇಕು ಅನ್ನೋದನ್ನು ಕಲಿತುಕೊಳ್ಳಬೇಕು ಎಂದು ಮೈಕ್ರೋಸಾಫ್ಟ್ ತನ್ನ ವರದಿಯಲ್ಲಿ ಸಲಹೆಯನ್ನು ನೀಡಿದೆ. AI ಸಹಯೋಗದಿಂದಾಗಿ ಕೆಲಸವನ್ನು ಸುಲಭ ಮಾಡಿಕೊಳ್ಳುವ ಅವಕಾಶ ಇದಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಯಾವೆಲ್ಲಾ ಉದ್ಯೋಗಗಳಿಗೆ AI ಎಚ್ಚರಿಕೆ ಗಂಟೆ?
AI ತಂತ್ರಜ್ಞಾನದಿಂದಾಗಿ ಗ್ರಾಹಕ ಪ್ರತಿನಿಧಿಗಳು (Customer Representative) ಉದ್ಯೋಗಗಳು ಅತಿದೊಡ್ಡ ಅಪಾಯದಲ್ಲಿವೆ. ಸುಮಾರು 2.86 ಮಿಲಿಯನ್ ಜನರು ಈ ಉದ್ಯೋಗದಲ್ಲಿದ್ದಾರೆ. ರಹಗಾರರು, ಪತ್ರಕರ್ತರು, ಸಂಪಾದಕರು, ಅನುವಾದಕರು ಮತ್ತು ಪ್ರೂಫ್ ರೀಡರ್ ಉದ್ಯೋಗಗಳಿಗೆ AI ಎಚ್ಚರಿಕೆ ಗಂಟೆಯನ್ನು ನೀಡುತ್ತಿದೆ. ವೆಬ್ ಡೆವಲಪರ್‌ಗಳು, ಡೇಟಾ ವಿಜ್ಞಾನಿಗಳು, PR ವೃತ್ತಿಪರರು, ವ್ಯಾಪಾರ ವಿಶ್ಲೇಷಕರ ಕ್ಷೇತ್ರಗಳಲ್ಲಿ ದೀರ್ಘಕಾಲೀನ ಉದ್ಯೋಗ ಭದ್ರತೆ ಬಗ್ಗೆಯೂ ಪ್ರಶ್ನೆಗಳು ಮೂಡುತ್ತಿವೆ. ಈಗಾಗಲೇ ಈ ಕ್ಷೇತ್ರಗಳಲ್ಲಿ ChatGPT ಮತ್ತು Copilot ನಂತಹ AI ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ.
AI ನಿಂದ ಹೆಚ್ಚು ಪರಿಣಾಮ ಬೀರುವ ಉದ್ಯೋಗಗಳು
ವ್ಯಾಖ್ಯಾನಕಾರರು ಮತ್ತು ಅನುವಾದಕರು (ಇಂಟರ್‌ಪ್ರೆಟರ್ಸ್ ಆಂಡ್ ಟ್ರಾನ್ಸ್‌ಲೇಟರ್)
ಸಮಾಜ ವಿಜ್ಞಾನ ಸಂಶೋಧನಾ ಸಹಾಯಕ (ಸೋಶಿಯಲ್ ಸೈನ್ಸ್ ರೀಸರ್ಚ್ ಅಸಿಸ್ಟಂಟ್)
ಇತಿಹಾಸಕಾರ
ಸಮಾಜಶಾಸ್ತ್ರಜ್ಞ (ಸೋಶಿಯಲಿಸ್ಟ್)
ರಾಜಕೀಯ ವಿಜ್ಞಾನಿ (ಫೊಲಿಟಿಕಲ್ ಸೈಂಟಿಸ್ಟ್)
ಮಧ್ಯವರ್ತಿಗಳು ಮತ್ತು ಸಂಧಾನಕಾರರು (ಮೀಡಿಯೇಟರ್ಸ್ ಆಂಡ್ ಸಜೇಶನ್ ಗಿವರ್)
ಸಾರ್ವಜನಿಕ ಸಂಪರ್ಕ ತಜ್ಞರು (ಪಬ್ಲಿಕ್ ರಿಲೇಶನ್ ಸ್ಪೆಷಲಿಸ್ಟ್)
ಸಂಪಾದಕರು (ಎಡಿಟರ್ಸ್)
ಕ್ಲಿನಿಕಲ್ ಡೇಟಾ ಮ್ಯಾನೇಜರ್
ವರದಿಗಾರರು ಮತ್ತು ಪತ್ರಕರ್ತರು (ರಿಪೋರ್ಟಸ್, ಜರ್ನಲಿಸ್ಟ್ )