ದಿನಕ್ಕೆ 36 ಸಾವಿರ ಸಂಬಳ... ಆದರೂ ಈ ಕೆಲ್ಸ ಮಾಡೋಕೆ ಜನ ಇಲ್ಲ.!

By Anusha KbFirst Published Feb 20, 2023, 1:34 PM IST
Highlights

ಗ ಸ್ಕಾಟ್‌ಲೆಂಡ್‌ನ ಸಂಸ್ಥೆಯೊಂದು ದಿನಕ್ಕೆ 36 ಸಾವಿರ ರೂಪಾಯಿ ಸಂಬಳದ ಆಫರ್ ನೀಡಿದ್ದು, ಆ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವರೇ ಇಲ್ಲವಾಗಿದ್ದಾರೆ. 

ದಿನಕ್ಕೆ 2 ಗಂಟೆ ದುಡಿರಿ ಎರಡು ಸಾವಿರ ಸಂಪಾದಿಸಿ, ವಾರಕ್ಕೆ 10 ಗಂಟೆ ದುಡಿರಿ 20 ಸಾವಿರ ಸಂಪಾದಿಸಿ ಇತ್ಯಾದಿ ಜಾಹೀರಾತುಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗದ ಸೈಟ್‌ಗಳಲ್ಲಿ ನೋಡುತ್ತಿರುತ್ತೀರಿ. ಉದ್ಯೋಗ ಅರಸುವ ಅನೇಕರು ಈ ಜಾಹೀರಾತಿಗೆ ಮರಳಾಗಿ ಹಣ ಕಳೆದುಕೊಂಡಿದ್ದು ಇದೆ. ಆದರೆ ಈಗ ಸ್ಕಾಟ್‌ಲೆಂಡ್‌ನ ಸಂಸ್ಥೆಯೊಂದು ದಿನಕ್ಕೆ 36 ಸಾವಿರ ರೂಪಾಯಿ ಸಂಬಳದ ಆಫರ್ ನೀಡಿದ್ದು, ಆ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವರೇ ಇಲ್ಲವಾಗಿದ್ದಾರೆ. 

ಕೈ ತುಂಬಾ ಸಂಬಳ ಇರಬೇಕು. ಆಕರ್ಷಕ ಸವಲತ್ತುಗಳು ಬೇಕು, ಕೆಲಸ ಆರಾಮದಾಯಕವಾಗಿರೇಕು ಎಂದು ಬಹುತೇಕರು ಬಯಸುತ್ತಾರೆ.  ಉದ್ಯೋಗ ಭದ್ರತೆಯೊಂದಿಗೆ ಉತ್ತಮ ಸಂಬಳವನ್ನು ನೀಡುವ ಕೆಲಸದ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ನಮ್ಮಲ್ಲಿ ಹಲವರು ಅಂತಹ  ಒಳ್ಳೆ ಉದ್ಯೋಗದ ನಿರೀಕ್ಷೆಯಲ್ಲೇ ಇಡೀ ಜೀವನವನ್ನು ಕಳೆಯುತ್ತಾರೆ. ಅದೇ ರೀತಿಯ ಜನ ಬಯಸಿದ ಸೌಕರ್ಯ ನೀಡುವ ಕೈ ತುಂಬ ಸಂಬಳ ನೀಡುವ ಉದ್ಯೋಗವೊಂದಿದೆ. ಆದರೆ ಇದನ್ನು ಮಾಡುವವರೇ ಇಲ್ಲ ಎಂದರೆ ನಿಮಗೆ ಅಚ್ಚರಿ ಆಗಬಹುದು. ಆದರೂ ಸತ್ಯ.  ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಸಂಬಳ ನೀಡುವ ಈ ಉದ್ಯೋಗದ ಹೆಸರು ಆಪ್‌ಶೋರ್ ರಿಗ್ಗರ್. 

ಫೇಸ್‌ಬುಕ್‌ ಉದ್ಯೋಗಿಗಳ ವಜಾ ಬೆನ್ನಲ್ಲೇ ಜುಕರ್‌ಬರ್ಗ್‌ ಭದ್ರತಾ ವೆಚ್ಚದಲ್ಲಿ 82 ಕೋಟಿ ಏರಿಕೆ!

ದಿ ಸನ್ ಪ್ರಕಾರ, ಸ್ಕಾಟ್ಲೆಂಡ್‌ನ ( Scotland) ಅಬರ್ಡೀನ್ ಕರಾವಳಿಯ ( coast of Aberdeen) ಉತ್ತರ ಸಮುದ್ರದಲ್ಲಿ ನೆಲೆಗೊಂಡಿರುವ ಕಡಲಾಚೆಯ ರಿಗ್ಗರ್‌ ಕೆಲಸದ ಹುದ್ದೆಗಾಗಿ  ಜಾಹೀರಾತು ನೀಡಲಾಗಿದೆ.  ಕಡಲಾಚೆಯ ರಿಗ್ ಎಂಬುದು ನೀರಿನಲ್ಲಿ ಅಥವಾ ಬಾವಿಗಳನ್ನು ಕೊರೆಯಲು, ತೈಲ ಮತ್ತು ಅನಿಲವನ್ನು ಹೊರತೆಗೆಯಲು ಮತ್ತು ಸಂಸ್ಕರಿಸಲು ಮತ್ತು ಅದನ್ನು ಭೂ ಪ್ರದೇಶಕ್ಕೆ ಸಾಗಿಸುವವರೆಗೆ ಸಂಗ್ರಹಿಸಲು ಬಳಸಲಾಗುವ ಒಂದು ದೊಡ್ಡ ರಚನೆಯಾಗಿದೆ. ಇದರಲ್ಲಿ ಕೆಲಸ ಮಾಡಲು ಅರ್ಜಿ ಆಹ್ವಾನಿಸಲಾಗಿದೆಯಂತೆ. 

ಈ ಹುದ್ದೆಗೆ ನೇಮಕಗೊಂಡವರನ್ನು ಒಂದೇ ಬಾರಿಗೆ ಒಂದರಿಂದ ಆರು ತಿಂಗಳ ಅವಧಿಗೆ ಸಮುದ್ರದಲ್ಲಿರುವ ರಿಗ್‌ಗೆ ಕಳುಹಿಸಲಾಗುತ್ತದೆ ಮತ್ತು ಅವರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಅವರಿಗೆ ದಿನಕ್ಕೆ ರೂ 36,000 ಮೂಲ ವೇತನವನ್ನುನೀಡಲಾಗುತ್ತದೆ ಎಂದು ನೇಮಕಾತಿ ಸಂಸ್ಥೆ ಎಂಡಿಇ ಕನ್ಸಲ್ಟೆಂಟ್ಸ್ ಹೇಳಿದೆ. ಈ ಕೆಲಸಕ್ಕೆ ಆಸಕ್ತಿ ಇದ್ದ ವ್ಯಕ್ತಿ  2 ವರ್ಷಗಳ ಕಾಲ ಇಲ್ಲಿಯೇ ಇದ್ದು, ತಲಾ 6 ರಿಂದ 6 ತಿಂಗಳ 2 ಶಿಫ್ಟ್‌ಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ನಂತರ ಇವರ ಸಂಬಳವೂ  £95,420 ಆಗುತ್ತದೆ ಅಂದರೆ ಸುಮಾರು 1 ಕೋಟಿ ರೂ. ಅಂತೆ ಆದರೆ ಈ ಉದ್ಯೋಗದ ಆಫರ್ ನೀಡಿದವರ ಹೆಸರು ಮಾತ್ರ ತಿಳಿದಿಲ್ಲ. ಆದರೆ ಈ ಜಾಹೀರಾತಿನಲ್ಲಿರುವಂತೆ ಈ ಜಾಹೀರಾತು ನೀಡಿದ ಸಂಸ್ಥೆಯೂ ಇಂಧನ ಮಾರುಕಟ್ಟೆಯಲ್ಲಿ ದೊಡ್ಡ ದೈತ್ಯ ಎಂದು ಹೇಳಿಕೊಂಡಿದೆ.  ಅಲ್ಲದೇ ಇದು ರಜಾ ದಿನಕ್ಕೂ  3,877  ರೂಪಾಯಿ ನೀಡುವುದು ಎಂದು ಹೇಳಿಕೊಂಡಿದೆ ಅಲ್ಲದೇ  ಒಂದು ವಾರದವರೆಗೆ ಅನಾರೋಗ್ಯಕ್ಕೀಡಾದರೆ ಅದಕ್ಕೂ ಆರೋಗ್ಯ ರಕ್ಷಣಾ ಸೌಲಭ್ಯವಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. 

Udupi: ವಿದೇಶದಲ್ಲಿ ಉದ್ಯೋಗ ಪಡೆಯೋ ಕನಸಿದ್ಯಾ..? ಹಾಗಿದ್ರೆ, ಇಲ್ಲಿದೆ ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ

ಆದರೆ ಈ ಉದ್ಯೋಗಕ್ಕೆ ನೀವು ಸೇರಬೇಕು ಎಂದು ಬಯಸಿ, ಬ್ಯಾಗ್ ಮಾಡುವ ಮುನ್ನ ಇದನ್ನೂ ಓದಿ. ಈ ಉದ್ಯೋಗಕ್ಕೂ ತಾಂತ್ರಿಕ ಅರ್ಹತೆಯನ್ನು ಕೇಳಿದೆ ಸಂಸ್ಥೆ. ಈ ಹುದ್ದೆ ಪಡೆಯಲು ನೀವು BOSIET(Basic Offshore Safety Induction and Emergency Training), ಮುಂದು ಕಡಲಾಚೆಯ ತುರ್ತು ತರಬೇತಿ ( FOET), ಸಂಕುಚಿತ ವಾಯು ತುರ್ತು ಉಸಿರಾಟದ ವ್ಯವಸ್ಥೆ( CA-EBS) ಹಾಗೂ  ವೈದ್ಯಕೀಯ ತರಬೇತಿ ಸೇರಿದಂತೆ ತಾಂತ್ರಿಕ ಮತ್ತು ಸುರಕ್ಷತಾ ತರಬೇತಿಯನ್ನು ಪಡೆದಿರಬೇಕು.  24 ದಿನಗಳ ಹಿಂದೆಯೇ ಅರ್ಜಿ ಸಲ್ಲಿಸುವ ದಿನಾಂಕ ಮೀರಿದ್ದರು ಐದು ಹುದ್ದೆಗಳು ಇನ್ನು ಖಾಲಿ ಉಳಿದಿವೆ ಎಂದು ತಿಳಿದು ಬಂದಿದೆ. 

click me!