ಐಎಸ್‌ಎಲ್‌ 7: ಬಿಎಫ್‌ಸಿಗೆ ಇಂದು ಎಟಿಕೆ ಬಗಾನ್‌ ಸವಾಲು

Suvarna News   | Asianet News
Published : Feb 09, 2021, 01:08 PM IST
ಐಎಸ್‌ಎಲ್‌ 7: ಬಿಎಫ್‌ಸಿಗೆ ಇಂದು ಎಟಿಕೆ ಬಗಾನ್‌ ಸವಾಲು

ಸಾರಾಂಶ

ಸುನಿಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಬಲಿಷ್ಠ ಎಟಿಕೆ ಮೋಹನ್‌ ಬಗಾನ್‌ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಗೋವಾ(ಫೆ.09): ಐಎಸ್‌ಎಲ್‌ 7ನೇ ಆವೃತ್ತಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಬೆಂಗಳೂರು ಎಫ್‌ಸಿ ಹೋರಾಟ ಮುಂದುವರಿಸಿದ್ದು, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಸೆಣಸಲಿದೆ. 

ಕಳೆದ 4 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಲೀಗ್‌ ಹಂತದಲ್ಲಿ ತಂಡಕ್ಕಿನ್ನು 4 ಪಂದ್ಯ ಬಾಕಿ ಇದೆ. ಸೆಮೀಸ್‌ಗೇರಲು 4 ಪಂದ್ಯಗಳಲ್ಲೂ ಸೋಲು ತಪ್ಪಿಸಿಕೊಳ್ಳಬೇಕಿದೆ. 

ಐಎಸ್‌ಎಲ್‌: 8 ಪಂದ್ಯಗಳ ಬಳಿಕ ಕೊನೆಗೂ ಗೆದ್ದ ಬಿಎಫ್‌ಸಿ..!

ಮೋಹನ್‌ ಬಗಾನ್‌ ಉತ್ತಮ ಲಯದಲ್ಲಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ತಂಡ ಈ ಆವೃತ್ತಿಯಲ್ಲಿ 20 ಗೋಲು ಬಾರಿಸಿದ್ದು, ಬಿಎಫ್‌ಸಿಗೆ ಕಠಿಣ ಸವಾಲು ಎದುರಾಗಲಿದೆ.
 

PREV
click me!

Recommended Stories

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?