ಬಿಎಫ್‌ಸಿಗೆ ಹೈದ್ರಾಬಾದ್‌ ಸವಾಲು; ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಚೆಟ್ರಿ ಪಡೆ

Kannadaprabha News   | Asianet News
Published : Nov 28, 2020, 09:54 AM IST
ಬಿಎಫ್‌ಸಿಗೆ ಹೈದ್ರಾಬಾದ್‌ ಸವಾಲು; ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಚೆಟ್ರಿ ಪಡೆ

ಸಾರಾಂಶ

ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಫುಟ್ಬಾಲ್ ತಂಡ ಹೈದ್ರಾಬಾದ್ ತಂಡವನ್ನು ಎದುರಿಸಲಿದೆ. ಚೆಟ್ರಿ ಪಡೆ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಕುರಿತಾದ ಒಂದು ರಿಪೋರ್ಟ್

ಮಾರ್ಗೋ(ನ.28): ಟೂರ್ನಿಯಲ್ಲಿ ತಲಾ ಒಂದೊಂದು ಪಂದ್ಯವನ್ನಾಡಿರುವ ಬೆಂಗಳೂರು ಎಫ್‌ಸಿ ಹಾಗೂ ಹೈದ್ರಾಬಾದ್‌ ಎಫ್‌ಸಿ, ಶನಿವಾರ ಇಲ್ಲಿ ನಡೆಯಲಿರುವ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿಯ 9ನೇ ಪಂದ್ಯದಲ್ಲಿ ಎದುರಾಗಲಿವೆ. 

ಮೊದಲ ಪಂದ್ಯದಲ್ಲಿ ಬಿಎಫ್‌ಸಿ, ಗೋವಾ ವಿರುದ್ಧ ಸಮಬಲ ಸಾಧಿಸಿ ಅಂಕ ಹಂಚಿಕೊಂಡಿದ್ದರೆ, ಹೈದ್ರಾಬಾದ್‌ ಮೊದಲ ಪಂದ್ಯದಲ್ಲಿ ಒಡಿಶಾ ಎದುರು ಗೆಲುವು ಸಾಧಿಸಿದ್ದು, ಆತ್ಮವಿಶ್ವಾಸದ ಅಲೆಯಲ್ಲಿದೆ. ಫತ್ರೋಡಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ಪಡೆ ಗೆಲುವಿನ ಖಾತೆ ತೆರೆಯುವ ಉತ್ಸಾದಲ್ಲಿದೆ. ಇದರೊಂದಿಗೆ ಹೈದ್ರಾಬಾದ್‌ ತಂಡಕ್ಕೆ ಪ್ರಬಲ ಪೈಪೋಟಿಯ ನಿರೀಕ್ಷೆಯಲ್ಲಿದೆ. 

ಕೋಲ್ಕತಾ ಡರ್ಬಿ: ಈಸ್ಟ್ ಬೆಂಗಾಲ್‌ಗೆ ಸೋಲುಣಿಸಿದ ಮೋಹನ್ ಬಾಗನ್!

ಆರಂಭದಲ್ಲೇ 2 ಗೋಲು ಬಾರಿಸಿ ಮುನ್ನಡೆ ಕಾಯ್ದುಕೊಂಡಿದ್ದ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಫುಟ್ಬಾಲ್ ತಂಡ ಆ ಬಳಿಕ ಗೋವಾ ಮೇಲೆ ಹಿಡಿತ ಸಾಧಿಸಲು ವಿಫಲವಾಯಿತು. ಹೀಗಾಗಿ ಡ್ರಾಗೆ ಬೆಂಗಳೂರು ತಂಡ ತೃಪ್ತಿಪಟ್ಟುಕೊಂಡಿತು.

ಇಂದಿನ ಪಂದ್ಯಕ್ಕೆ ಬಿಎಫ್‌ಸಿ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ. ಆದರೆ ಹೈದ್ರಾಬಾದ್‌ ಆಟಗಾರ ಫ್ರಾನ್ಸಿಸ್ಕೋ ಸಂತಾಜ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ.

ಸ್ಥಳ: ಮಾರ್ಗೋ, 
ಆರಂಭ: ರಾತ್ರಿ 7.30ಕ್ಕೆ
 

PREV
click me!

Recommended Stories

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?