ಅಭಿಮಾನಿಗಳ ಆಕ್ರೋಶದಿಂದಾಗಿ ಥೀಮ್‌ ಸಾಂಗ್‌ಗೆ ಕನ್ನಡ ಪದ ಬಳಕೆ!

By Kannadaprabha NewsFirst Published Sep 19, 2020, 10:31 AM IST
Highlights

ಅಭಿಮಾನಿಗಳ ಆಕ್ರೋಶದಿಂದಾಗಿ ಥೀಮ್‌ ಸಾಂಗ್‌ಗೆ ಕನ್ನಡ ಪದ ಬಳಕೆ| , ಇಂಗ್ಲೀಷ್‌ ಹಾಗೂ ಹಿಂದಿ ಭಾಷೆ ಹಾಡಿನುದ್ದಕ್ಕೂ ಬಳಕೆ| ಕರ್ನಾಟಕ ಮೂಲದ ಆರ್‌ಸಿಬಿ ತಂಡ, ಥೀಮ್‌ ಸಾಂಗ್‌ನಲ್ಲಿ ಕನ್ನಡವನ್ನು ಸೂಕ್ತವಾಗಿ ಬಳಸಿಕೊಳ್ಳದ್ದಕ್ಕೆ ಫ್ಯಾನ್ಸ್‌ ಗರಂ

ನವದೆಹಲಿ(ಸೆ.19): 13ನೇ ಆವೃತ್ತಿ ಐಪಿಎಲ್‌ ಆರಂಭಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಅಭಿಮಾನಿಗಳಿಗೆ ಜೋಶ್‌ ತುಂಬಲು ಥೀಮ್‌ ಸಾಂಗ್‌ ಬಿಡುಗಡೆ ಮಾಡಿತ್ತು.

ಚೆನ್ನಾಗಿದೆ. ಆದರೆ ಹಿಂದಿ ಬದಲು ಕನ್ನಡ ಬಳಸಿದ್ರೆ ಇನ್ನೂ ಚೆನ್ನಾಗಿರೋದು https://t.co/3cDjBhzKyA

— ದೊಡ್ಡ ಗಣೇಶ್ | Dodda Ganesh (@doddaganesha)

ಈ ಹಾಡಿನಲ್ಲಿ ಕೇವಲ ಎರಡು ಕನ್ನಡದ ಸಾಲುಗಳನ್ನು ಬಳಸಿದ್ದು, ಇಂಗ್ಲೀಷ್‌ ಹಾಗೂ ಹಿಂದಿ ಭಾಷೆಯನ್ನು ಹಾಡಿನುದ್ದಕ್ಕೂ ಹೆಚ್ಚಾಗಿ ಬಳಸಲಾಗಿತ್ತು. ಇದು ಆರ್‌ಸಿಬಿಯ ಕನ್ನಡಿಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ ಮೂಲದ ಆರ್‌ಸಿಬಿ ತಂಡ, ಥೀಮ್‌ ಸಾಂಗ್‌ನಲ್ಲಿ ಕನ್ನಡವನ್ನು ಸೂಕ್ತವಾಗಿ ಬಳಸಿಕೊಳ್ಳದೇ ಅನ್ಯ ಭಾಷೆಯನ್ನು ಬಳಸಿರುವುದನ್ನು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ವಿರೋಧಿಸಿದ್ದರು.

ಇದರಿಂದಾಗಿ ಆರ್‌ಸಿಬಿ ಥೀಮ್‌ ಸಾಂಗ್‌ಗೆ ಹೆಚ್ಚಿನ ಕನ್ನಡ ಪದವನ್ನು ಬಳಸಿ 2ನೇ ಬಾರಿ ಥೀಮ್‌ ಸಾಂಗನ್ನು ಬಿಡುಗಡೆ ಮಾಡಿದೆ.

click me!