IPL 2020: ಡೆಲ್ಲಿ ಮಣಿಸಿ ಪ್ಲೇ ಆಫ್ ರೇಸ್ ರೋಚಕವಾಗಿಸಿದ ಸನ್‌ರೈಸರ್ಸ್!

Published : Oct 27, 2020, 11:00 PM ISTUpdated : Oct 27, 2020, 11:04 PM IST
IPL 2020: ಡೆಲ್ಲಿ ಮಣಿಸಿ ಪ್ಲೇ ಆಫ್ ರೇಸ್ ರೋಚಕವಾಗಿಸಿದ ಸನ್‌ರೈಸರ್ಸ್!

ಸಾರಾಂಶ

ಸನ್‌ರೈಸರ್ಸ್ ಹೈದರಾಬಾದ್ ಅಬ್ಬರದ ಮುಂದೆ ಡೆಲ್ಲಿ ಕ್ಯಾಪಿಟಲ್ಸ್ ಮಕಾಡೆ ಮಲಗಿದೆ. ಡೆಲ್ಲಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ಅವಕಾಶವನ್ನು ಮುಂದೂಡಿದ್ದರೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ರೇಸ್‌ ರೋಚಕತೆ ಹೆಚ್ಚಿಸಿದೆ.   

ದುಬೈ(ಅ.27) ಪ್ಲೇ ಆಫ್ ರೇಸ್ ಹೋರಾಟ ತಂಡಗಳಿಗೆ ಮತ್ತಷ್ಟು ಕಠಿಣಗೊಂಡಿದ್ದರೆ, ಟೂರ್ನಿಯ ರೋಚಕತೆಯನ್ನು ಹೆಚ್ಚಿಸಿದೆ. ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಸನ್‌ರೈಸರ್ಸ್ ಹೈದರಾಬಾದ್ ಇದೀಗ ಪ್ಲೇ ಆಫ್ ಸ್ಥಾನಕ್ಕೇರುವ  ವಿಶ್ವಾಸ ಹೊಂದಿದೆ. ಎಲ್ಲವೂ ಹೈದರಾಬಾದ್ ಅಂದುಕೊಂಡಂತೆ ನಡೆದರೆ, ಪ್ಲೇ ಆಫ್ ಅವಕಾಶ ಒಲಿದರೂ ಅಚ್ಚರಿಯಿಲ್ಲ.

ಡೆಲ್ಲಿ ತಂಡದಲ್ಲಿ ಹಿಂದಿನ ಆರ್ಭಟ ಕಾಣುತ್ತಿಲ್ಲ. ಹೀಗಾಗಿ 220 ರನ್ ಟಾರ್ಗೆಟ್ ಅಸಾಧ್ಯವಾಗಿ ಪರಿಣಮಿಸಿತು. ಇದಕ್ಕೆ ತಕ್ಕಂತೆ ಶಿಖರ್ ಧವನ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಬಹುಬೇಗನೆ ಪೇವಿಲಿಯನ್ ಸೇರಿಕೊಂಡರು. ಶಿಮ್ರೊನ್ ಹೆಟ್ಮೆಯಲ್ 16 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ ಹೋರಾಟ ಸಾಕಾಗಲಿಲ್ಲ. 

ರಹಾನೆ 26 ರನ್ ಕಾಣಿಕೆ ನೀಡಿದರು. ಶ್ರೇಯಸ್ ಅಯ್ಯರ್ ಹಾಗೂ ಅಕ್ಸರ್ ಪಟೇಲ್ ಕೂಡ ಅಬ್ಬರಿಸಲಿಲ್ಲ. ರಿಷಬ್ ಪಂತ್ ಹೋರಾಟ ನೀಡಿದರೂ, ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಪಂತ್ 36 ರನ್ ಕಾಣಿಕೆ ನೀಡಿದರು. 

19 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 131  ರನ್‌ಗೆ ಆಲೌಟ್ ಆಯಿತು. 88 ರನ್ ಭರ್ಜರಿ ಗೆಲುವು ದಾಖಲಿಸಿದೆ ಸನ್‌ರೈಸರ್ಸ್ ಹೈದರಾಬಾದ್ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇಷ್ಟೇ ಅಲ್ಲ ಹೈದರಾಬಾದ್ ತಂಡದ ಅತ್ಯುತ್ತಮ ರನ್‌ರೈಟ್ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಿದ್ದೆಗೆಡಿಸಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI