IPL 2020: KKR ವಿರುದ್ಧ ಟಾಸ್ ಗೆದ್ದ SRH ಬ್ಯಾಟಿಂಗ್ ಆಯ್ಕೆ; ತಂಡದಲ್ಲಿ ಮಹತ್ವದ ಬದಲಾವಣೆ

Suvarna News   | Asianet News
Published : Sep 26, 2020, 07:11 PM ISTUpdated : Sep 26, 2020, 07:14 PM IST
IPL 2020: KKR ವಿರುದ್ಧ  ಟಾಸ್ ಗೆದ್ದ SRH ಬ್ಯಾಟಿಂಗ್ ಆಯ್ಕೆ; ತಂಡದಲ್ಲಿ ಮಹತ್ವದ ಬದಲಾವಣೆ

ಸಾರಾಂಶ

ಕೆಕೆಆರ್ ವಿರುದ್ಧ ಟಾಸ್‌ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳಲ್ಲೂ ಮೇಜರ್ ಸರ್ಜರಿ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಬುಧಾಬಿ(ಸೆ.26): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 8ನೇ ಪಂದ್ಯದಲ್ಲಿ ಕೋಲ್ಕತ ನೈಟ್‌ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದಾರಾಬಾದ್ ತಂಡಗಳು ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದ  ತಂಡ ಆಯ್ದುಕೊಂಡಿದೆ.

ಉಭಯ ತಂಡಗಳಲ್ಲೂ ಮೇಜರ್ ಸರ್ಜರಿ ಮಾಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಆಲ್ರೌಂಡರ್ ಮಿಚೆಲ್ ಮಾರ್ಷ್ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಮೊಹಮ್ಮದ್ ನಬೀ, ವಿಜಯ್ ಶಂಕರ್ ಸ್ಥಾನಕ್ಕೆ ವೃದ್ದಿಮಾನ್ ಸಾಹ ಹಾಗೂ ಸಂದೀಪ್ ಶರ್ಮಾ ಬದಲಿಗೆ ಖಲೀಲ್ ಅಹಮ್ಮದ್ ತಂಡ ಕೂಡಿಕೊಂಡಿದ್ದಾರೆ.
ಇನ್ನು ಕೆಕೆಆರ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಸಂದೀಪ್ ಶರ್ಮಾ ಹಾಗೂ ನಿಖಿಲ್ ನಾಯ್ಕ್ ಬದಲಿಗೆ ನಾಗರಕೋಟಿ ಹಾಗೂ ವರುಣ್ ಚಕ್ರವರ್ತಿ ತಂಡ ಕೂಡಿಕೊಂಡಿದ್ದಾರೆ

ಉಭಯ ತಂಡಗಳು ತಾವಾಡಿದ ಮೊದಲ ಪಂದ್ಯದಲ್ಲಿ ಸೋಲಿನ ಕಹಿಯುಂಡಿದ್ದು, ಇದೀಗ ಈ ಆವೃತ್ತಿಯಲ್ಲಿ ಮೊದಲ ಗೆಲುವನ್ನು ದಾಖಲಿಸಲು ಎದುರು ನೋಡುತ್ತಿವೆ. ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 10 ರನ್‌ಗಳ ಸೋಲು ಅನುಭವಿಸಿತ್ತು. ಇನ್ನು ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ ನೈಟ್‌ರೈಡರ್ಸ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಶರಣಾಗಿತ್ತು.

 
ತಂಡಗಳು ಹೀಗಿವೆ:

ಸನ್‌ರೈಸರ್ಸ್ ಹೈದರಾಬಾದ್:

ಕೋಲ್ಕತ ನೈಟ್‌ ರೈಡರ್ಸ್

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಗಲ್ಲ ಅಂತ ಗೊತ್ತಿದ್ರೂ ಕ್ಯಾಮರೋನ್‌ ಗ್ರೀನ್‌ಗೆ ಮುಂಬೈ ಬಿಡ್‌ ಮಾಡಿದ್ದೇಕೆ? ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಆಕಾಶ್ ಅಂಬಾನಿ!
IPL 2026 RCB Full Squad: ಸತತ ಎರಡನೇ ಬಾರಿಗೆ ಕಪ್ ಗೆಲ್ಲಲು ಆರ್‌ಸಿಬಿ ಸಜ್ಜು! ಹರಾಜಿನ ಬಳಿಕ ತಂಡ ಹೀಗಿದೆ