IPL 2020: ಮುಂಬೈಗೆ 163 ರನ್ ಟಾರ್ಗೆಟ್ ನೀಡಿದ ಡೆಲ್ಲಿ!

By Suvarna NewsFirst Published Oct 11, 2020, 9:21 PM IST
Highlights

ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷೆಯಂತೆ ಮುಂಬೈಗೆ 163 ರನ್ ಟಾರ್ಗೆಟ್ ನೀಡಿದೆ. ಇದೀಗ ಡೆಲ್ಲಿ ದಾಳಿಗೆ ಮುಂಬೈ ಈ ಗುರಿ ಚೇಸ್ ಮಾಡುತ್ತಾ? ಇಲ್ಲಿದೆ ವಿವರ.

ಅಬು ಧಾಬಿ(ಅ.11):  13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷೆಯಂತೆ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದೆ. ಶಿಖರ್ ಧವನ್ ಹಾಫ್ ಸೆಂಚುರಿ ಹಾಗೂ ನಾಯಕ ಶ್ರೇಯಸ್ ಅಯ್ಯರ್ 42 ರನ್ ಕಾಣಿಕೆಯಿಂದ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟಕ್ಕೆ ರನ್ ಸಿಡಿಸಿದೆ.

ಬ್ಯಾಟಿಂಗ್ ಆರಂಭಿಸಿದ ಡೆಲ್ಲಿಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಪೃಥ್ವಿ ಶಾ 4 ರನ್ ಸಿಡಿಸಿ ಔಟಾದರು. ಇತ್ತ 13ನೇ ಆವೃತ್ತಿಯಲ್ಲಿ ಮೊದಲ ಅವಕಾಶ ಪಡೆದ ಅಜಿಂಕ್ಯ ರಹಾನೆ 15 ರನ್ ಸಿಡಿಸಿ ಔಟಾದರು. ಆದರೆ ಶಿಖರ್ ಧವನ್ ಹಾಗೂ ಶ್ರೇಯಸ್ ಜೊತೆಯಾಟದಿಂದ ಡೆಲ್ಲಿ ಚೇತರಿಸಿಕೊಂಡಿತು.

ಶ್ರೇಯಸ್ ಅಯ್ಯರ್ 33 ಎಸೆತದಲ್ಲಿ 5 ಬೌಂಡರಿ ನೆರವಿನಿಂದ 42 ರನ್ ಸಿಡಿಸಿ ಔಟಾದರು. ಇತ್ತ ಧವನ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಧವನ್‌ಗೆ ಮಾರ್ಕಸ್ ಸ್ಟೊಯ್ನಿಸ್ ಉತ್ತಮ ಸಾಥ್ ನೀಡಿದರು. ಸ್ಟೊಯ್ನಿಸ್ 13 ರನ್ ಸಿಡಿಸಿ ಔಟಾದರು. 

ಧವನ್ ಅಜೇಯ 69 ರನ್ ಸಿಡಿಸಿದರೆ, ಅಲೆಕ್ಸ್ ಕ್ಯಾರಿ ಅಜೇಯ 14 ರನ್ ಸಿಡಿಸಿದರು. ಡೆಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು
 

click me!