ಕೊಹ್ಲಿ, ಫಿಂಚ್‌ ದಾಖಲೆ ಸರಿಗಟ್ಟಿದ ಬಾಬರ್‌

By Suvarna NewsFirst Published Sep 1, 2020, 9:35 AM IST
Highlights

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಫಿಂಚ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಸೆ.01): ಪಾಕಿಸ್ತಾನ ಟಿ20 ತಂಡದ ನಾಯಕ ಬಾಬರ್‌ ಅಜಂ ಭಾರತದ ವಿರಾಟ್‌ ಕೊಹ್ಲಿ ಹಾಗೂ ಆಸ್ಪ್ರೇಲಿಯಾದ ಆ್ಯರೋನ್‌ ಫಿಂಚ್‌ ಅವರ ಟಿ20 ಕ್ರಿಕೆಟ್‌ನ ದಾಖಲೆಯನ್ನು ಸರಿಗಟ್ಟಿದ್ದಾರೆ. 

ಇಂಗ್ಲೆಂಡ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಬಾಬರ್‌ ಈ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವೇಗದ 1500 ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಬಾಬರ್‌ ಸ್ಥಾನ ಪಡೆದಿದ್ದಾರೆ. 

ಎರಡನೇ ಟಿ20 ಪಂದ್ಯ ಆರಂಭಕ್ಕೂ ಮುನ್ನ 1500 ರನ್ ಪೂರೈಸಲು ಬಾಬರ್ ಅಜಂ ಅವರಿಗೆ 29 ರನ್‌ಗಳ ಅಗತ್ಯವಿತ್ತು. ಆದರೆ ಇಂಗ್ಲೆಂಡ್‌ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಒಂದೂವರೆ ಸಾವಿರ ರನ್ ಪೂರೈಸುವಲ್ಲಿ ಅಜಂ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆ್ಯರೋನ್ ಫಿಂಚ್‌ ಈ ಸಾಧನೆಗಾಗಿ 39 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. ಬಾಬರ್‌ ಕೂಡಾ 39 ಇನ್ನಿಂಗ್ಸ್‌ಗಳಲ್ಲಿ 1,500 ರನ್‌ ದಾಖಲಿಸಿದ್ದಾರೆ.

2ನೇ ಟಿ20: ಪಾಕ್‌ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಟಿ20 ಕ್ರಿಕೆಟ್‌ ಮಾದರಿಯಲ್ಲಿ ಗರಿಷ್ಠ ರನ್ ಬಾರಿಸಿರುವ ದಾಖಲೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ. 82 ಪಂದ್ಯಗಳನ್ನಾಡಿರುವ ಕೊಹ್ಲಿ 2794 ರನ್ ಬಾರಿಸಿದ್ದಾರೆ. ಇನ್ನು 108 ಟಿ20 ಪಂದ್ಯಗಳನ್ನಾಡಿ 2773 ರನ್ ಬಾರಿಸಿರುವ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಆನಂತರದ ಮೂರು ಸ್ಥಾನಗಳಲ್ಲಿ ಮಾರ್ಟಿನ್ ಗಪ್ಟಿಲ್, ಶೊಯೇಬ್ ಮಲಿಕ್ ಹಾಗೂ ಡೇವಿಡ್ ವಾರ್ನರ್ ಇದ್ದಾರೆ.

click me!