ಮುಂಬೈ ವರ್ಸಸ್ ಕೆಕೆಆರ್ ನಡುವೆ ಅಬುಧಾಬಿಯಲ್ಲಿಂದು ಬಿಗ್ ಫೈಟ್..!

By Suvarna News  |  First Published Oct 16, 2020, 1:29 PM IST

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 32ನೇ ಪಂದ್ಯದಲ್ಲಿಂದು ಬಲಿಷ್ಠ ಕೋಲ್ಕತ ನೈಟ್‌ ರೈಡರ್ಸ್ ತಂಡವು ಅಬುಧಾಬಿಯಲ್ಲಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಅಬುಧಾಬಿ(ಅ.16): ಆಡಿರುವ 7ರಲ್ಲಿ 5 ಗೆಲುವಿನೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಇಲ್ಲಿ ಶುಕ್ರವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಎದುರಾಗಲಿವೆ.

ಟೂರ್ನಿಯಲ್ಲಿ ಸತತ 4 ಪಂದ್ಯ ಗೆದ್ದಿರುವ ಮುಂಬೈ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಇದೀಗ ಕೆಕೆಆರ್‌ ವಿರುದ್ಧ ಮತ್ತೊಂದು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದೆ. ಇತ್ತ ಕೆಕೆಆರ್‌, ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 82 ರನ್‌ಗಳ ಹೀನಾಯ ಸೋಲು ಕಂಡಿದ್ದು, ಮುಂಬೈ ವಿರುದ್ಧದ ಪಂದ್ಯದಲ್ಲಿ ವಿಭಿನ್ನ ಲೆಕ್ಕಚಾರದಲ್ಲಿ ಕಣಕ್ಕಿಳಿದು ಜಯ ಸಾಧಿಸುವ ಉತ್ಸಾಹದಲ್ಲಿದೆ. ಕೆಕೆಆರ್‌ 7ರಲ್ಲಿ 4 ಗೆಲುವು ಸಾಧಿಸಿದ್ದು, 8 ಅಂಕಗಳಿಂದ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

Latest Videos

undefined

ಬಲಿಷ್ಠ ಬ್ಯಾಟಿಂಗ್‌ ಪಡೆ: ಮುಂಬೈ ತಂಡ ಅತ್ಯದ್ಭುತ ಲಯದಲ್ಲಿದೆ. 10 ಅಂಕಗಳಿಂದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಮುಂಬೈ, ಕೆಕೆಆರ್‌ ಎದುರು ದೊಡ್ಡ ಅಂತರದ ಜಯದ ವಿಶ್ವಾಸದಲ್ಲಿದೆ. ಶೇಕ್‌ ಜಾಯೆದ್‌ ಕ್ರೀಡಾಂಗಣದಲ್ಲಿ ರೋಹಿತ್‌ ಅದ್ಭುತ ಲಯ ಹೊಂದಿದ್ದಾರೆ. ರೋಹಿತ್‌ ಇದೇ ಮೈದಾನದಲ್ಲಿ 2 ಅರ್ಧಶತಕ ಸಿಡಿಸಿದ್ದಾರೆ. ಡಿಕಾಕ್‌, ಸೂರ್ಯಕುಮಾರ್‌, ಇಶಾನ್‌ ಕಿಶನ್‌ ಲಯದಲ್ಲಿದ್ದು ತಂಡಕ್ಕೆ ಹೆಚ್ಚಿನ ಬ್ಯಾಟಿಂಗ್‌ ಬಲ ನೀಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಹಾರ್ದಿಕ್‌, ಪೊಲ್ಲಾರ್ಡ್‌, ಕೃನಾಲ್‌ ದೊಡ್ಡ ಹೊಡೆತಗಳಿಂದ ತಂಡದ ಮೊತ್ತ ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದಾರೆ. ಟ್ರೆಂಟ್‌ ಬೌಲ್ಟ್‌, ಜಸ್‌ಪ್ರೀತ್‌ ಬುಮ್ರಾ, ಜೇಮ್ಸ್‌ ಪ್ಯಾಟಿನ್ಸನ್‌ ತಂಡದ ವೇಗದ ಬೌಲಿಂಗ್‌ ಶಕ್ತಿಯಾಗಿದ್ದಾರೆ. ಈ ತ್ರಿವಳಿ ಬೌಲರ್‌ಗಳು ಒಟ್ಟಾರೆ 31 ವಿಕೆಟ್‌ ಪಡೆದಿದ್ದಾರೆ.

IPL 2020: ಆರ್‌ಸಿಬಿ ಎದುರು ಕೊನೆ ಓವರ್ ಹೈಡ್ರಾಮ ಗೆದ್ದ ಪಂಜಾಬ್..!

ಆಲ್ರೌಂಡರ್‌ ರಸೆಲ್‌ ಬಲ: ಕೆಕೆಆರ್‌ ತಂಡದ ಪ್ರಮುಖ ಸ್ಪಿನ್ನರ್‌ ಸುನಿಲ್‌ ನರೈನ್‌ ಅನುಮಾನಸ್ಪದ ಬೌಲಿಂಗ್‌ನಿಂದ ಹೊರಗುಳಿದಿದ್ದಾರೆ. ಮುಂಬೈ ವಿರುದ್ಧದ ಪಂದ್ಯಕ್ಕೆ ಲಭ್ಯರಿರುವುದು ಇನ್ನು ಸ್ಪಷ್ಟವಾಗಿಲ್ಲ. ಸದ್ಯ ನರೈನ್‌ ಅಲಭ್ಯತೆಯಿಂದಾಗಿ ಕೆಕೆಆರ್‌ ಆಲ್ರೌಂಡರ್‌ ರಸೆಲ್‌ ಅವರನ್ನ ಹೆಚ್ಚಾಗಿ ನೆಚ್ಚಿಕೊಂಡಿದೆ. ಆದರೆ ರಸೆಲ್‌ ಅವರಿಂದ ಉತ್ತಮ ಆಟ ಹೊರಬಿದ್ದಿಲ್ಲ. ರಸೆಲ್‌ ಕಳೆದ 7 ಪಂದ್ಯಗಳಿಂದ 71 ರನ್‌ಗಳಿಸಿದ್ದಾರೆ. ಯುವ ಆಟಗಾರರು ಹಾಗೂ ಅನುಭವಿ ಆಟಗಾರರಿಂದ ಕೆಕೆಆರ್‌ ಸಮತೋಲನದಿಂದ ಕೂಡಿದೆ. ಶುಭ್‌ಮನ್‌ ಗಿಲ್‌, ಇಯಾನ್‌ ಮಾರ್ಗನ್‌, ನಿತೀಶ್‌ ರಾಣಾ, ನಾಯಕ ದಿನೇಶ್‌ ಕಾರ್ತಿಕ್‌ ಲಯದಲ್ಲಿದ್ದು ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಪ್ಯಾಟ್‌ ಕಮಿನ್ಸ್‌, ಪ್ರಸಿದ್ಧ್ ಕೃಷ್ಣ ತಂಡದ ಬೌಲಿಂಗ್‌ಗೆ ಬಲ ನೀಡಿದ್ದಾರೆ.

ಪಿಚ್‌ ರಿಪೋರ್ಟ್‌:

ಅಬುಧಾಬಿ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸರಾ​ಸರಿ ಸ್ಕೋರ್‌ 170-180 ರನ್‌ ಆಗಿದ್ದು, ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಹೆಚ್ಚಿನ ಲಾಭ. ಇಲ್ಲಿ ಯಾವ ತಂಡವೂ 200ಕ್ಕೂ ಹೆಚ್ಚು ರನ್‌ ದಾಖ​ಲಿ​ಸಿಲ್ಲ. ಸ್ಪಿನ್ನರ್‌ಗಳಿಗೆ ನೆರವು ಸಿಗುವ ನಿರೀಕ್ಷೆ ಇದೆ.

ಮುಖಾಮುಖಿ: 26

ಮುಂಬೈ: 20

ಕೆಕೆಆರ್‌: 06

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ರೋಹಿತ್‌ (ನಾಯಕ), ಡಿಕಾಕ್‌, ಸೂರ್ಯ, ಕಿಶನ್‌, ಹಾರ್ದಿಕ್‌, ಪೊಲ್ಲಾರ್ಡ್‌, ಕೃನಾಲ್‌, ಪ್ಯಾಟಿನ್ಸನ್‌, ಚಹರ್‌, ಬೌಲ್ಟ್‌, ಬುಮ್ರಾ.

ಕೆಕೆಆರ್‌: ಬಂಟನ್‌, ಗಿಲ್‌, ನಿತೀಶ್‌, ಮಾರ್ಗನ್‌, ಕಾರ್ತಿಕ್‌ (ನಾಯಕ), ರಸೆಲ್‌, ತ್ರಿಪಾಠಿ, ಕಮಿನ್ಸ್‌, ಕಮಲೇಶ್‌, ಚಕ್ರವರ್ತಿ, ಪ್ರಸಿದ್‌್ಧ ಕೃಷ್ಣ.

ಸ್ಥಳ: ಅಬುಧಾಬಿ, 
ಆರಂಭ: ರಾತ್ರಿ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋಟ್ಸ್‌
 

click me!