ಅತ್ಯಲ್ಪ ಮೊತ್ತ ದಾಖಲಿಸಿದ ಚೆನ್ನೈ, ಮುಂಬೈಗೆ ಸುಲಭ ಟಾರ್ಗೆಟ್!

Published : Oct 23, 2020, 09:20 PM ISTUpdated : Oct 23, 2020, 09:21 PM IST
ಅತ್ಯಲ್ಪ ಮೊತ್ತ ದಾಖಲಿಸಿದ ಚೆನ್ನೈ, ಮುಂಬೈಗೆ ಸುಲಭ ಟಾರ್ಗೆಟ್!

ಸಾರಾಂಶ

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ತಂಡಕ್ಕೆ ಗೆಲುವು ಮಾತ್ರವಲ್ಲ, ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಹೋರಾಟದಲ್ಲಿ ಚೆನ್ನೈ ಕೇವಲ 114 ರನ್ ದಾಖಲಿಸಿದೆ.

ಶಾರ್ಜಾ(ಅ.23):  ತಂಡದಲ್ಲಿ 3 ಬದಲಾವಣೆ, ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲೇಬೇಕೆಂಬ ಚಲದೊಂದಿಗೆ ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ಭಾರಿ ಮುಖಭಂಕಕ್ಕೆ ಒಳಗಾಗಿದೆ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಸಿಎಸ್‌ಕೆ ತಂಡ ಅತೀ ಕಡಿಮೆ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಗಿದೆ. ಮುಂಬೈ ಇಂಡಿಯನ್ಸ್ ದಾಳಿಗೆ ನಲುಗಿದೆ ಧೋನಿ ಪಡೆ ಕೇವಲ 114 ರನ್ ಸಿಡಿಸಿದೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಾಖಲಿಸಿದ 2ನೇ ಅತೀ ಕಡಿಮೆ ಮೊತ್ತ ಇದಾಗಿದೆ. ಇದಕ್ಕೂ ಮೊದಲು ಮುಂಬೈ ವಿರುದ್ಧ 2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 79 ರನ್ ಸಿಡಿಸಿ ಆಲೌಟ್ ಆಗಿತ್ತು. ಮೊದಲು ಬ್ಯಾಟಿಂಗ್ ಇಳಿದ ಚೆನ್ನೈ ತಂಡ ರನ್ ಮಾತ್ರವಲ್ಲ ವಿಕೆಟ ಉಳಿಸಿಕೊಳ್ಳಲು ಪರದಾಡಿದೆ. ರುತರಾಜ್ ಗಾಯ್ಕವಾಡ್, ಫಾಫ್ ಡುಪ್ಲೆಸಿಸ್, ಅಂಬಾಟಿ ರಾಯುಡು, ಎನ್ ಜಗದೀಶನ್ ಬಂದ ರೀತಿ ವಾಪಸ್ ಆದರು. ಇನ್ನು ನಾಯಕ ಧೋನಿ 16 ರನ್ ಸಿಡಿಸಿ ಔಟಾದರು.

ರವೀಂದ್ರ ಜಡೇಜಾ 7, ಸ್ಯಾಮ್ ಕುರನ್ ಹೋರಾಟ ಮುಂದುವರಿಸಿದರು. ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ಕೂಡ ಆಸರೆಯಾಗಲಿಲ್ಲ. ಸ್ಯಾಮ್ ಕುರನ್ ಹೋರಾಟದಿಂದ ಚೆನ್ನೈ 100 ರನ್ ಗಡಿ ದಾಟಿತು.  ಕುರನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಸ್ಯಾಮ್ ಕುರನ್ 52 ರನ್ ಸಿಡಿಸಿ ಔಟಾದರು. ಇಮ್ರಾನ್ ತಾಹಿಯಾ ಅಜೇಯ 13 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟ್ ನಷ್ಟಕ್ಕೆ 114 ರನ್ ಸಿಡಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI