
ಅಬುದಾಬಿ(ಸೆ. 23) ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಮಕಾಡೆ ಮಲಗಿದೆ.. ಮುಂಬೈ ನೀಡಿದ್ದ ಬೃಹತ್ ಮೊತ್ತವನ್ನು ಯಾವ ಸಂದರ್ಭದಲ್ಲಿಯೂ ತಲುಪುವ ಶಕ್ತಿಯನ್ನು ತೋರಲೇ ಇಲ್ಲ.
ಮುಂಬೈ ಇಂಡಿಯನ್ಸ್ 49 ರನ್ ಗಳ ಭರ್ಜರಿ ಜಯ ದಾಖಲಿಸಿತು. ರೋಹಿತ್ ಶರ್ಮಾ ಬ್ಯಾಟಿಂಗ್ ಗೆ ಬಡವಾಗಿದ್ದ ಕೆಕೆಆರ್ ತಾನು ಬ್ಯಾಟಿಂಗ್ ಮಾಡುವಲ್ಲಿ ಸಂಪೂರ್ಣ ವಿಫಲವಾಗಿ 9 ವಿಕೆಟ್ ನಷ್ಟಕ್ಕೆ 146ರನ್ ಗಳಿಸಲು ಶಕ್ತವಾಯಿತು.
ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಬುಧವಾರ ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ತಂಡ ಆರ್ಭಟಿಸಲು ದಾರಿ ಮಾಡಿಕೊಟ್ಟಿತು. ಕೋಲ್ಕತ್ತಾದ ಯಾವ ಬ್ಯಾಟ್ಸಮನ್ ಗಳು ಪ್ರಭಾವ ತೋರಲೇ ಇಲ್ಲ.
ರಾಜಸ್ಥಾನ ಚೆನ್ನೈ ವಿರುದ್ಧ ಜಯಗಳಿಸಿದ್ದು ಹೇಗೆ?
ಮೊದಲ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಅನುಭವಿಸಿದ ಸೋಲಿನಿಂದ ಪಾಠ ಕಲಿತಿರುವ ಮುಂಬೈ ಇಂಡಿಯನ್ಸ್, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದರೂ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್‌ಗಳಿಸಿ ಎದುರಾಳಿಗೆ 196 ರನ್‌ಗಳ ದೊಡ್ಡ ಗುರಿ ನೀಡಿತ್ತು.
ನಾಯಕ ರೋಹಿತ್ ಶರ್ಮಾ 54 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಒಳಗೊಂಡ 80 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ 47 ರನ್ ಕೊಡುಗೆ ನೀಡಿದರು.
ಕೋಲ್ಕತ್ತಾ ಪರ ದಿನೇಶ್ ಕಾರ್ತಿಕ್, ಗಿಲ್, ಮಾರ್ಗನ್ ಅಬ್ಬರಿಸಲೇ ಇಲ್ಲ. ಕೊನೆಯಲ್ಲಿ ಕಮಿನ್ಸ್ ಬುಬ್ರಾ ಓವರ್ ನಲ್ಲಿ 28 ರನ್ ಚಚ್ಚಿ ಒಂದಿಷ್ಟು ಹುರುಪು ತುಂಬಿದರು. ರೋಹಿತ್ ಶರ್ಮಾ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.