IPL 2020: ಧೋನಿ ಮುಂದಿನ CSK ನಾಯಕನ ಬಗ್ಗೆ ಆಲೋಚಿಸುತ್ತಿದ್ದಾರೆ..!

By Suvarna NewsFirst Published Sep 8, 2020, 12:19 PM IST
Highlights

ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಸಿಎಸ್‌ಕೆ ನಾಯಕನ ಬಗ್ಗೆ ಆಲೋಚಿಸುತ್ತಿದ್ದಾರೆ ಎಂದು ವಿಂಡೀಸ್ ಅನುಭವಿ ಆಲ್ರೌಂಡರ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಸೆ.08): ಮಹೇಂದ್ರ ಸಿಂಗ್ ಧೋನಿ ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್‌)ಗೂ ವಿದಾಯ ಹೇಳುವ ಕಾಲ ದೂರವಿಲ್ಲ.

ಸದ್ಯ ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಎಂ ಎಸ್ ಧೋನಿ ಸಜ್ಜಾಗುತ್ತಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೋ ಅವರ ಪ್ರಕಾರ ಧೋನಿ ಸಿಎಸ್‌ಕೆ ತಂಡದ ಭವಿಷ್ಯದ ನಾಯಕನ ಬಗ್ಗೆ ಆಲೋಚನೆ ನಡೆಸುತ್ತಿದ್ದು, ಸುರೇಶ್ ರೈನಾ ಇಲ್ಲವೇ ಯುವ ಆಟಗಾರನಿಗೆ ನಾಯಕತ್ವ ಪಟ್ಟ ಕಟ್ಟುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರಂತೆ.

ಮುಂದಿನ ಸಿಎಸ್‌ಕೆ ನಾಯಕ ಯಾರಾಗಬೇಕು ಎನ್ನುವ ಚಿಂತನೆ ಧೋನಿ ಮನಸಿನಲ್ಲಿ ಬಂದಿದೆ ಎನ್ನುವುದು ನನಗೆ ಗೊತ್ತು. ಎಲ್ಲರು ಒಂದು ಹಂತ ತಲುಪಿದ ಮೇಲೆ ನಿವೃತ್ತಿಯಾಗಲೇಬೇಕು. ಆದರೆ ಯಾವ ಸಂದರ್ಭದಲ್ಲಿ ಕಣಕ್ಕಿಳಿಯಬೇಕು ಹಾಗೂ ಯಾರಿಗೆ ತಮ್ಮ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಬೇಕು ಎನ್ನುವುದು ಮುಖ್ಯವಾಗುತ್ತದೆ. ಅದು ಸುರೇಶ್ ರೈನಾ ಇಲ್ಲವೇ ಯುವ ಆಟಗಾರರೇ ಆಗಿರಬಹುದು ಎಂದು ಬ್ರಾವೋ ಎಬಿಪಿ ನ್ಯೂಸ್‌ಗೆ ತಿಳಿಸಿದ್ದಾರೆ.

IPL 2020: ಮತ್ತೆ CSK ತಂಡ ಕೂಡಿಕೊಳ್ಳುವ ಕನವರಿಕೆಯಲ್ಲಿದ್ದ ರೈನಾಗೆ ಬಿಸಿಸಿಐ ಶಾಕ್..?

ಅವರು ಈಗ ಕೋಟ್ಯಾಂತರ ಮಂದಿಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ಸದ್ಯ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಹೆಚ್ಚೇನೂ ಬದಲಾವಣೆ ಆಗುವುದಿಲ್ಲ ಎಂದು ವಿಂಡೀಸ್ ಆಲ್ರೌಂಡರ್ ಅಭಿಪ್ರಾಯಪಟ್ಟಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಜತೆಗೆ ಸ್ಥಿರ ಪ್ರದರ್ಶನಕ್ಕೆ ಹೆಸರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಾನಾಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಹಂತ ಪ್ರವೇಶಿಸಿದ ಏಕೈಕ ತಂಡ ಎನಿಸಿದೆ. 39 ವರ್ಷದ ಧೋನಿ 2008ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯಕ್ಕೆ ಅಬುಧಾಬಿ ಮೈದಾನ ಆತಿಥ್ಯ ವಹಿಸಲಿದೆ.

ಈ ಐವರು ಆಟಗಾರರ ಯಶಸ್ಸಿನ ಹಿಂದಿದೆ ಧೋನಿ ಪಾತ್ರ!

"

click me!