IPL 2020: ಮತ್ತೆ CSK ತಂಡ ಕೂಡಿಕೊಳ್ಳುವ ಕನವರಿಕೆಯಲ್ಲಿದ್ದ ರೈನಾಗೆ ಬಿಸಿಸಿಐ ಶಾಕ್..?

Suvarna News   | Asianet News
Published : Sep 07, 2020, 10:24 AM IST
IPL 2020: ಮತ್ತೆ CSK ತಂಡ ಕೂಡಿಕೊಳ್ಳುವ ಕನವರಿಕೆಯಲ್ಲಿದ್ದ ರೈನಾಗೆ ಬಿಸಿಸಿಐ ಶಾಕ್..?

ಸಾರಾಂಶ

ಅನಿರೀಕ್ಷಿತವಾಗಿ ಸಿಎಸ್‌ಕೆ ಕ್ಯಾಂಪ್‌ ತೊರೆದು ಭಾರತಕ್ಕೆ ಮರಳಿರುವ ರೈನಾ ಇದೀಗ ಮತ್ತೆ ಚೆನ್ನೈ ತಂಡ ಕೂಡಿಕೊಳ್ಳುವ ಬಗ್ಗೆ ಆಶಾವಾದ ಹೊಂದಿದ್ದಾರೆ. ಇದರ ಬೆನ್ನಲ್ಲೇ ರೈನಾ ಬಗ್ಗೆ ಬಿಸಿಸಿಐ ಅಧಿಕಾರಿಗಳು ಮಾತನಾಡಿದ್ದಾರೆ. ಅಷ್ಟಕ್ಕೂ ರೈನಾ ಬಗ್ಗೆ ಬಿಸಿಸಿಐ ಅಧಿಕಾರಿಗಳು ಹೇಳೋದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ನವದೆಹಲಿ(ಸೆ.07): 13ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಂದು ಅಚ್ಚರಿ ಮೂಡಿಸಿರುವ ಸುರೇಶ್‌ ರೈನಾ, ಕೊರೋನಾ ಪರಿಸ್ಥಿತಿ ಸುಧಾರಿಸಿದರೆ ಯುಎಇಗೆ ವಾಪಸಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅವರು ಯುಎಇಗೆ ತೆರಳಲು ಅವಕಾಶ ಸಿಗಲಿದೆಯೇ ಎನ್ನುವ ಪ್ರಶ್ನೆಗೆ ಬಿಸಿಸಿಐ ಅಧಿಕಾರಿಗಳ ಬಳಿಯೇ ಉತ್ತರವಿಲ್ಲ. 

ರೈನಾ, ಭಾರತಕ್ಕೆ ಹಿಂದಿರುಗಿದ್ದೇಕೆ ಎನ್ನುವ ಬಗ್ಗೆ ಬಿಸಿಸಿಐಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ರೈನಾ ಐಪಿಎಲ್‌ನಲ್ಲಿ ಆಡಲು ಇಚ್ಛಿಸಿದರೆ ತಾವು ಭಾರತಕ್ಕೆ ವಾಪಸ್ಸಾಗಿದ್ದೇಕೆ ಎನ್ನುವುದಕ್ಕೆ ವಿವರಣೆ ನೀಡಬೇಕಿದೆ. ಅವರ ವಿವರಣೆ ಸಮಾಧಾನ ತರದಿದ್ದರೆ ಬಿಸಿಸಿಐ ಅವಕಾಶ ನಿರಾಕರಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಂದೊಮ್ಮೆ ಅವಕಾಶ ಸಿಕ್ಕರೂ, ಕ್ವಾರಂಟೈನ್‌ ಹಾಗೂ ಹಲವು ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಿದೆ. ಅಲ್ಲದೆ ಅವರನ್ನು ಪುನಃ ತಂಡಕ್ಕೆ ಸೇರಿಸಿಕೊಳ್ಳಲು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಒಪ್ಪಿಕೊಳ್ಳಬೇಕಿದೆ.

IPL ಸಂಪೂರ್ಣ ವೇಳಾಪಟ್ಟಿ ಬಿಡುಗಡೆ: ಮೊದಲ ಪಂದ್ಯದಲ್ಲಿ CSK-MI ಹೋರಾಟ!

ಒಟ್ಟಿನಲ್ಲಿ ಸುರೇಶ್ ಸಿಎಸ್‌ಕೆ ತಂಡವನ್ನು ಕೂಡಿಕೊಳ್ಳಬೇಕಿದ್ದರೆ ಮತ್ತೆ ಸಾಕಷ್ಟು ಕಸರತ್ತು ಪಡಬೇಕಿದೆ. ಬಹುನಿರೀಕ್ಷಿತ 13ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!