ಐಪಿಎಲ್ 2020: ಸನ್ ಬೆಳಗುತ್ತಾ, ಮುಳುಗುತ್ತಾ?

By Kannadaprabha NewsFirst Published Nov 3, 2020, 9:47 AM IST
Highlights

ಪ್ಲೇ ಆಫ್‌ ಪ್ರವೇಶಿಸಬೇಕಿದ್ದರೆ ಬಲಿಷ್ಠ ಮುಂಬೈ ವಿರುದ್ಧ ಶಾರ್ಜಾ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಶತಾಯಗತಾಯ ಗೆಲುವು ದಾಖಲಿಸಬೇಕಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಶಾರ್ಜಾ(ಅ.03): ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಸನ್‌ರೈಸರ್ಸ್ ಹೈದರಾಬಾದ್, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಪ್ಲೇ ಆಫ್‌ ಹಂತಕ್ಕೇರುವ ಲೆಕ್ಕಾಚಾರದಲ್ಲಿದೆ.

ಡೇವಿಡ್ ವಾರ್ನರ್ ತಂಡದ ಮುಂದಿರುವ ಸವಾಲು ದೊಡ್ಡದಾದರೂ ಲೆಕ್ಕಾಚಾರ ಬಹಳ ಸರಳ. ಮುಂಬೈ ಎದುರು ಗೆದ್ದರೆ ಸಾಕು ಹೈದರಾಬಾದ್‌ಗೆ ಪ್ಲೇ ಆಫ್‌ ಸ್ಥಾನ ಖಚಿತವಾಗಲಿದೆ. ಏಕೆಂದರೆ ತಂಡದ ನೆಟ್‌ ರನ್‌ರೇಟ್‌ ಅತ್ಯುತ್ತಮವಾಗಿದ್ದು, ಕೇವಲ ಒಂದು ರನ್ ಅಥವಾ ಕೇವಲ ಕೇವಲ ಒಂದು ವಿಕೆಟ್ ಅಂತರದ ಗೆಲುವು ಸಾಧಿಸಿದರೂ ಸಾಕು. ಒಂದು ವೇಳೆ ವಾರ್ನರ್ ಪಡೆ ಮುಗ್ಗರಿಸಿದರೆ ಟೂರ್ನಿಯಿಂದಲೇ ಹೊರಬೀಳಲಿದೆ.

2016ರಲ್ಲೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂತಿಮ 3 ಪಂದ್ಯಗಳನ್ನು ಗೆದ್ದು ಆ ಬಳಿಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಸಲವೂ ಪರಿಸ್ಥಿತಿ ಹಾಗೆಯೇ ಇದೆ. ಪ್ಲೇ ಆಫ್‌ ಪ್ರವೇಶಿಸಿ ಕಪ್ ಗೆಲ್ಲುವುದು ನಮ್ಮ ಗುರಿ ಎಂದು ಆರ್‌ಸಿಬಿ ವಿರುದ್ಧದ ಪಂದ್ಯದ ಬಳಿಕ ಡೇವಿಡ್ ವಾರ್ನರ್‌ ನುಡಿದಿದ್ದರು. ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಲಯದಲ್ಲಿದ್ದು, ವಾರ್ನರ್ ಮಾತು ನಿಜವಾದರೂ ಅಚ್ಚರಿ ಪಡುವಂತಿಲ್ಲ.

IPL 2020: ಡೆಲ್ಲಿ ಪ್ಲೇ ಆಫ್ ಸ್ಥಾನ ಖಚಿತ, ಸೋತ RCB ಕೂಡ ಸೇಫ್!

ಮತ್ತೊಂದೆಡೆ ಈಗಾಗಲೇ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್, ಲೀಗ್ ಹಂತದಲ್ಲಿ ಮತ್ತೊಂದು ಗೆಲುವು ದಾಖಲಿಸುವ ಮೂಲಕ ತಮ್ಮ ಜಯದ ನಾಗಾಲೋಟ ಮುಂದುವರೆಸುವ ಲೆಕ್ಕಾಚಾರದಲ್ಲಿದೆ. 

ಸಂಭಾವ್ಯ ತಂಡಗಳು ಹೀಗಿವೆ:

ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರಾನ್ ಪೊಲ್ಲಾರ್ಡ್, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್‌ಸನ್, ಜಸ್ಪ್ರೀತ್ ಬುಮ್ರಾ, ರಾಹುಲ್ ಚಹಾರ್.

ಸನ್‌ರೈಸರ್ಸ್ ಹೈದರಾಬಾದ್:ಡೇವಿಡ್ ವಾರ್ನರ್, ವೃದ್ದಿಮಾನ್ ಸಾಹಾ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಟಿ ನಟರಾಜನ್, ಸಂದೀಪ್ ಶರ್ಮಾ, ಶಾದಾಬ್ ನದೀಮ್

ಸ್ಥಳ: ಶಾರ್ಜಾ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

click me!