ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ನಿರಾಸೆ ಪಡಬೇಕಿಲ್ಲ.. ಡೆಲ್ಲಿ ವಿರುದ್ಧ ಮುಗ್ಗರಿಸಿದರೂ ಆರ್‌ಸಿಬಿ ಪ್ಲೇ ಆಫ್ ಸ್ಥಾನಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ 3ನೇ ಸ್ಥಾನವೋ ಅಥವಾ 4ನೇ ಸ್ಥಾನವೇ ಅನ್ನೋದು ಮುಂಬೈ-ಹೈದರಾಬಾದ್ ಪಂದ್ಯದ ಫಲಿತಾಂಶದಿಂದ ಬಯಲಾಗಲಿದೆ.
ಅಬು ಧಾಬಿ(ನ.02): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ವಿಕೆಟ್ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್ 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಮಹತ್ವದ ಪಂದ್ಯದಲ್ಲಿ ಡೆಲ್ಲಿ ದಿಟ್ಟ ಹೋರಾಟದ ಮೂಲಕ ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಂಡಿದೆ. ಇತ್ತ ಆರ್‌ಸಿಬಿ ಪ್ಲೇ ಆಫ್ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಅಧೀಕೃತವಾಗಿ ಆರ್‌ಸಿಬಿ ಪ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಡದಿದ್ದರೂ, ಪ್ಲೇ ಆಫ್ ಸುತ್ತಿಗೆ ಆರ್‌ಸಿಬಿ ಪ್ರವೇಶ ಖಚಿತವಾಗಿದೆ.
ಗೆಲುವಿಗೆ 153 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕಾರಣ ಪೃಥ್ವಿ ಶಾ ಕೇವಲ 9 ರನ್ ಸಿಡಿಸಿ ಔಟಾದರು. ಆದರೆ ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ಜೊತೆಯಾಟ, ಆರ್‌ಸಿಬಿ ತಂಡದ ತಲೆನೋವು ಹೆಚ್ಚಿಸಿತು. ರಹಾನೆ ಹಾಗೂ ಧವನ್ ಹಾಫ್ ಸೆಂಚುರಿ ಸಿಡಿಸಿದರು.
undefined
ಸತತ 4 ಪಂದ್ಯ ಸೋತಿದ್ದ ಡೆಲ್ಲಿ ಮಹತ್ವದ ಪಂದ್ಯದಲ್ಲಿ ಅಬ್ಬರಿಸಿತು. ಶಿಖರ್ ಧವನ್ 54 ರನ್ ಸಿಡಿಸಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ ಕೇವಲ 7 ರನ್ ಸಿಡಿಸಿ ಔಟಾದರು. ಇತ್ತ ದಿಟ್ಟ ಹೋರಾಟ ನೀಡಿದ ಅಜಿಂಕ್ಯ ರಹಾನೆ 60 ರನ್ ಸಿಡಿಸಿ ನಿರ್ಗಮಿಸಿದರು. ಯಾವದೇ ಒತ್ತಡವಿಲ್ಲದೆ ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದ ಡೆಲ್ಲಿ ತಂಡಕ್ಕೆ ಅಂತಿಮ ಹಂತದಲ್ಲಿ ಆತಂಕ ಹೆಚ್ಚಾಯಿತು.
ರಿಷಬ್ ಪಂತ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ನೆರವಿನಿಂದ ಡೆಲ್ಲಿ ಕ್ಯಾಪಿಲ್ಸ್ 19 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿತಲುಪಿತು. ಡೆಲ್ಲಿ ತಂಡ 2ನೇ ತಂಡವಾಗಿ ಅಧೀಕೃತವಾಗಿ ಪ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇತ್ತ ಸೋತ ಆರ್‌ಸಿಬಿ ಪ್ಲೇ ಆಫ್ ಸ್ಥಾನ ಕೂಡ ಖಚಿತವಾಗಿದೆ. 16 ಅಂಕ ಸಂಪಾದಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡೆಸಲಿದೆ.