
ದುಬೈ(ಆ.27): ಕಳೆದ ವಾರ ಯುಎಇ ತಲುಪಿದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು ಬುಧವಾರ ಅಭ್ಯಾಸ ಆರಂಭಿಸಿದರು.
6 ದಿನಗಳ ಹೋಟೆಲ್ ಕ್ವಾರಂಟೈನ್ ಮುಕ್ತಾಯಗೊಳಿಸಿದ ಆಟಗಾರರು, ಮೈದಾನಕ್ಕಿಳಿದು ಬೆವರು ಹರಿಸಿದರು. ಮೊದಲ, 3ನೇ ಹಾಗೂ 5ನೇ ದಿನದಂದು ಆಟಗಾರರು, ಸಹಾಯಕ ಸಿಬ್ಬಂದಿಯ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ ಎಂದು ಐಪಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದಿನಿಂದ ಆರ್‌ಸಿಬಿ ಅಭ್ಯಾಸ ಆರಂಭ
ದುಬೈ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗುರುವಾರದಿಂದ ಇಲ್ಲಿನ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಆರಂಭಿಸಲಿದೆ. ಆ.21ರಂದು ದುಬೈಗೆ ಬಂದಿಳಿದಿದ್ದ ಆಟಗಾರರು, 6 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಪಟ್ಟಿದ್ದರು.
IPL ವೇಳಾಪಟ್ಟಿ ಬಿಡುಗಡೆ ತಡವಾಗುತ್ತಿರುವುದೇಕೆ? ಬಯಲಾಯ್ತು ಸೀಕ್ರೇಟ್
ಬುಧವಾರ ಕ್ವಾರಂಟೈನ್ ಮುಕ್ತಾಯಗೊಂಡಿದೆ. ‘ಆಟಗಾರರು ಕಳೆದ ಕೆಲ ತಿಂಗಳುಗಳನ್ನು ವಿವಿಧ ವಾತಾವರಣದಲ್ಲಿ ಕಳೆದಿದ್ದಾರೆ. ಹಲವು ಫಿಟ್ನೆಸ್ ವಿಧಾನಗಳನ್ನು ಅನುಸರಿಸಿದ್ದಾರೆ. ಹೀಗಾಗಿ ಏಕಾಏಕಿ ಒಂದೇ ಮಾದರಿಯ ಅಭ್ಯಾಸಕ್ಕೆ ಮುಂದಾಗುವುದಿಲ್ಲ. ಎಲ್ಲರಿಗೂ ಅನುಕೂಲವಾಗುವಂತಹ ಶಿಬಿರವನ್ನು ಆಯೋಜಿಸಲಾಗುತ್ತಿದೆ. 3 ವಾರಗಳ ಅಭ್ಯಾಸ ಶಿಬಿರದೊಂದಿಗೆ ಟೂರ್ನಿಗೆ ಸಕಲ ಸಿದ್ಧತೆ ನಡೆಸಲಿದ್ದೇವೆ’ ಎಂದು ತಂಡದ ಕ್ರಿಕೆಟ್ ವ್ಯವಹಾರಗಳ ನಿರ್ದೇಶಕ ಮೈಕ್ ಹೆಸನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.