IPL 2020: ದೇವದತ್ ಸ್ಫೋಟಕ ಬ್ಯಾಟಿಂಗ್, ಮುಂಬೈಗೆ ಸ್ಪರ್ಧಾತ್ಮಕ ಗುರಿ ನೀಡಿದ RCB!

Published : Oct 28, 2020, 09:09 PM IST
IPL 2020: ದೇವದತ್ ಸ್ಫೋಟಕ ಬ್ಯಾಟಿಂಗ್, ಮುಂಬೈಗೆ ಸ್ಪರ್ಧಾತ್ಮಕ ಗುರಿ ನೀಡಿದ RCB!

ಸಾರಾಂಶ

13ನೇ ಆವೃತ್ತಿ IPL ಟೂರ್ನಿಯ 48ನೇ ಲೀಗ್ ಪಂದ್ಯ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಗೆದ್ದ ತಂಡ ಐಪಿಎಲ್ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಹೀಗಾಗಿ ಮಹತ್ವದ ಹೋರಾಟದಲ್ಲಿ ಆರ್‌ಸಿಬಿ ಅಬ್ಬರಿಸಲು ವಿಫಲವಾಗಿದೆ.

ಅಬು ಧಾಬಿ(ಅ.28): ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ  ದೇವದತ್ ಪಡಿಕ್ಕಲ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು  6 ವಿಕೆಟ್ 164 ನಷ್ಟಕ್ಕೆ ರನ್ ಸಿಡಿಸಿದೆ. ಮುಂಬೈ ಬ್ಯಾಟಿಂಗ್ ಶಕ್ತಿಗೆ ಇದು ಬೃಹತ್ ಮೊತ್ತವಲ್ಲ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿಗೆ ಉತ್ತಮ ಆರಂಭ ಪಡೆಯಿತು. ಜೊಶ್ ಫಿಲಿಪ್ ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್‌ಗೆ 71 ರನ್ ಜೊತೆಯಾಟ ನೀಡಿದರು. ಜೋಶ್ ಫಿಲಿಪ್ 33 ರನ್ ಸಿಡಿಸಿ ಔಟಾದರು. ಇತ್ತ ದೇವದತ್ ಪಡಿಕ್ಕಲ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು.

ನಾಯಕ ವಿರಾಟ್ ಕೊಹ್ಲಿ ಕೇವಲ 9 ರನ್ ಸಿಡಿಸಿ ಔಟಾದರು. ಎಬಿ ಡಿವಿಲಿಯರ್ಸ್ 15 ರನ್ ಕಾಣಿಕೆ ನೀಡಿದರು. ಶಿವಂ ದುಬೆ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು. ಅಬ್ಬರಿಸಿದ ದೇವದತ್ ಪಡಿಕ್ಕಲ್ 74 ರನ್ ಸಿಡಿಸಿ ಔಟಾದರು.

ಬೃಹತ್ ಮೊತ್ತದ ನಿರೀಕ್ಷೆಯಲ್ಲಿದ್ದ ಆರ್‌ಸಿಬಿಗೆ ದೇವದತ್ ಪಡಿಕ್ಕಲ್ ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್ ಅಬ್ಬರಿಸಲಿಲ್ಲ. ಹೀಗಾಗಿ ಆರ್‌ಸಿಬಿ ವಿಕೆಟ್ 6 ನಷ್ಟಕ್ಕೆ 164 ರನ್ ಸಿಡಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI