ಮುಂಬೈ ವಿರುದ್ಧ ದೇವದತ್ ಅರ್ಧಶತಕ; ದಾಖಲೆ ಬರೆದ ಆರ್‌ಸಿಬಿ ಆರಂಭಿಕ!

By Suvarna NewsFirst Published Oct 28, 2020, 8:39 PM IST
Highlights

ಚೊಚ್ಚಲ ಐಪಿಎಲ್ ಟೂರ್ನಿ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಮುಂಬೈ ವಿರುದ್ಧ ಅಬ್ಬರಿಸಿದ ದೇವದತ್ ಮತ್ತೊಂದು ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.

ಅಬು ಧಾಬಿ(ಅ.28): ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್, ಕನ್ನಡಿಗ ದೇವದತ್ ಪಡಿಕ್ಕಲ್ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಇಷ್ಟೇ ಅಲ್ಲ ಪದಾರ್ಪಣಾ ಐಪಿಎಲ್ ಟೂರ್ನಿಯಲ್ಲಿ ನಾಲ್ಕು ಬಾರಿ 50+ ಸ್ಕೋರ್ ಸಿಡಿಸಿದ ಭಾರತೀಯ ಕ್ರೆಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕನ್ನಡಿಗ ದೇವದತ್ ಪಡಿಕ್ಕಲ್‌ ಬ್ಯಾಟಿಂಗ್ ಶೈಲಿಯನ್ನು ಮ್ಯಾಥ್ಯೂ ಹೇಡನ್‌ಗೆ ಹೋಲಿಸಿದ ಕ್ರಿಸ್ ಮೋರಿಸ್..!

ಟೀಂ ಇಂಡಿಯಾಗೆ ಆಯ್ಕೆಯಾಗೂ ಮೊದಲೇ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ ಕ್ರಿಕೆಟಿಗರ ಪೈಕಿ ಇದೀಗ ದೇವದತ್ ಪಡಿಕ್ಕಲ್ 3ನೇ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. 

ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಮನಗೆದ್ದ ದೇವದತ್ ಪಡಿಕ್ಕಲ್ ಬ್ಯಾಟಿಂಗ್..!.

ನಾಲ್ಕು 50+ ಸ್ಕೋರ್ ಸಿಡಿಸಿದ ಭಾರತೀಯ ಕ್ರಿಕೆಟರ್ಸ್( uncapped )
ಶಿಖರ್ ಧವನ್, 2008 (ಡೆಲ್ಲಿ ಡೇರ್‌ಡೆವಿಲ್ಸ್)
ಶ್ರೇಯಸ್ ಅಯ್ಯರ್, 2015 (ಡೆಲ್ಲಿ ಡೇರ್‌ಡೆವಿಲ್ಸ್)
ದೇದತ್ ಪಡಿಕ್ಕಲ್, 2020 (ಆರ್‌ಸಿಬಿ)

ಚೊಚ್ಚಲ ಐಪಿಎಲ್ ಆವೃತ್ತಿ ಆಡಿ ಆರಂಭಿಕ 4 ಪಂದ್ಯದಲ್ಲಿ 3 ಅರ್ಧಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ದೇವದತ್ ಪಡಿಕ್ಕಲ್ ಪಾತ್ರಾಗಿದ್ದಾರೆ. ಇದೀಗ ನಾಲ್ಕನೇ ಹಾಫ್ ಸೆಂಚುರಿ ಸಿಡಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ.
 

click me!