2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಜಿದ್ದಾಜಿದ್ದಿನ ಹೋರಾಟ ನಡೆಸಿತು. ಆದರೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ದಾಖಲಿಸೋ ಮೂಲಕ ಫೈನಲ್‌ಗೆ ಪ್ರವೇಶ ಪಡೆದಿದೆ.
ಅಬು ಧಾಬಿ(ನ.08): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಪ್ರವೇಶಿಸಿದೆ. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ನವೆಂಬರ್ 10 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಸಲಿದೆ. ವಿಶೇಷ ಅಂದರೆ ಡೆಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿ ಫೈನಲ್ ಪ್ರವೇಶಿಸಿದೆ.
ಮಾಯಂತಿ ಲ್ಯಾಂಗರ್ - ಅರ್ಚನಾ ವಿಜಯ: ಹಾಟ್ ಮಹಿಳಾ ಕ್ರಿಕೆಟ್ anchors!
ಸನ್‌ರೈಸರ್ಸ್ ವಿರುದ್ಧ 189 ರನ್ ಸಿಡಿಸಿ ಡೆಲ್ಲಿ ಬಳಿಕ ಬೌಲಿಂಗ್‌ನಲ್ಲಿ ಹೋರಾಟ ನೀಡಿತು. ಆರಂಭಿಕ ಹಂತದಲ್ಲಿ ಸನ್‌ರೈಸರ್ಸ್ ತಂಡಕ್ಕೆ ಶಾಕ್ ನೀಡಿತು. ಡೇವಿಡ್ ವಾರ್ನರ್ ಕೇವಲ 2 ರನ್ ಸಿಡಿಸಿ ಔಟಾದರು. ಇನ್ನು ಪ್ರಿಯಂ ಗರ್ಗ್ 17 ರನ್ ಕಾಣಿಕೆ ನೀಡಿದರು.
ಮನೀಶ್ ಪಾಂಡೆ 21 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಕೇನ್ ವಿಲಿಯಮ್ಸ್ ಬ್ಯಾಟಿಂಗ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೊಸ ಚೈತನ್ಯ ನೀಡಿತು. ವಿಲಿಯಮ್ಸನ್ ಹೋರಾಟದಿಂದ ಹೈದರಾಬಾದ್ ತಂಡ ಚೇತರಿಸಿಕೊಂಡಿತು. ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಜೇಸನ್ ಹೋಲ್ಡರ್ 11 ರನ್ ಸಿಡಿಸಿ ಔಟಾದರು.
ಸೋಷಿಯಲ್ ಮೀಡಿಯಾದ ಕಾವು ಹೆಚ್ಚಿಸಿದ ಹಾರ್ದಿಕ್ ಪತ್ನಿ ನಟಾಸಾ ಲುಕ್!.
ಕೇನ್ ವಿಲಿಯಮ್ಸನ್‌ಗೆ ಉತ್ತಮ ಸಾಥ್ ನೀಡಿದ ಅಬ್ದುಲ್ ಸಮಾದ್ ಡೆಲ್ಲಿ ತಂಡಕ್ಕೆ ತಲೆನೋವಾದರು. ವಿಲಿಯಮ್ಸ್ ಹೋರಾಟದಿಂದ ಪಂದ್ಯ ಹೈದರಾಬಾದ್ ಕಡೆ ವಾಲಿತು. ಆದರೆ ವಿಲಿಯಮ್ಸ್ 67 ರನ್ ಸಿಡಿಸಿ ಔಟಾದರು. ಆದರೆ ಅಬ್ದುಲ್ ಸಮಾದ್ ಬ್ಯಾಟಿಂಗ್ ಮುಂದುವರಿಸಿದು. ಇತ್ತ ರಶೀದ್ ಖಾನ್ ಬೌಂಡರಿ ಹಾಗೂ ಸಿಕ್ಸರ್ ಮೂಲಕ ಹೈದರಾಬಾದ್‌ಗೆ ಆಸರೆಯಾದರು
ದಿಢೀರ್ ಆಗಿ ಅಬ್ದುಲ್ ಸಮಾದ್ ವಿಕೆಟ್ ಪತನಗೊಂಡಿತು. ರಶೀದ್ ಖಾನ್, ಶ್ರೀವತ್ಸ ಗೋಸ್ವಾಮಿ ವಿಕೆಟ್ ಕೈಚೆಲ್ಲಿದರು. ಅಂತಿಮ 6 ಎಸೆತದಲ್ಲಿ ಹೈದರಾಬಾದ್ ಗೆಲುವಿಗ 22 ರನ್ ಅವಶ್ಯಕತೆ ಇತ್ತು. ಅಂತಿಮವಾಗಿ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿತು. ಈ ಮೂಲಕ ಸೋಲೊಪ್ಪಿಕೊಂಡಿತು. 17 ರನ್ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿತು.