ಸುರೇಶ್‌ ರೈನಾ ನನ್ನ ಮಗ ಇದ್ದಂತೆ ಆದರೆ ಸಿಎಸ್‌ಕೆಗೆ ಮತ್ತೆ ಕರೆಯುವುದಿಲ್ಲ: ಶ್ರೀನಿವಾಸನ್‌

Suvarna News   | Asianet News
Published : Sep 03, 2020, 11:24 AM IST
ಸುರೇಶ್‌ ರೈನಾ ನನ್ನ ಮಗ ಇದ್ದಂತೆ ಆದರೆ ಸಿಎಸ್‌ಕೆಗೆ ಮತ್ತೆ ಕರೆಯುವುದಿಲ್ಲ: ಶ್ರೀನಿವಾಸನ್‌

ಸಾರಾಂಶ

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದ ಸುರೇಶ್ ರೈನಾ ಬಗ್ಗೆ ಸಿಎಸ್‌ಕೆ ತಂಡ ಸಹ ಮಾಲೀಕ ಎನ್‌ ಶ್ರೀನಿವಾಸನ್ ಮತ್ತೊಮ್ಮೆ ಮಾತನಾಡಿದ್ದಾರೆ. ಏನಂದ್ರು ಶ್ರೀನಿ ನೀವೇ ನೋಡಿ

ನವದೆಹಲಿ(ಸೆ.03): ಕ್ರಿಕೆಟಿಗ ಸುರೇಶ್‌ ರೈನಾ ನನ್ನ ಮಗನಿದ್ದಂತೆ. ಆದರೆ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ)ಗೆ ಮತ್ತೆ ಕರೆತರುವ ಕೆಲಸವನ್ನು ನಾನು ಮಾಡಲಾರೆ. ಆ ಕುರಿತು ಧೋನಿ ನೇತೃತ್ವದ ಸಿಎಸ್‌ಕೆ ಆಡಳಿತ ನಿರ್ಧರಿಸಬೇಕು ಎಂದು ಚೆನ್ನೈ ತಂಡದ ಮಾಲೀಕ ಎನ್‌. ಶ್ರೀನಿವಾಸನ್‌ ಹೇಳಿದ್ದಾರೆ. 

ಆಟಗಾರರ ವಿಚಾರದಲ್ಲಿ ಫ್ರಾಂಚೈಸಿ ಯಾವತ್ತೂ ಮೂಗು ತೂರಿಸಿಲ್ಲ. ಸಿಎಸ್‌ಕೆ ಯಶಸ್ಸಿಗೆ ಇದೇ ಕಾರಣ ಎಂದು ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸುರೇಶ್ ರೈನಾ ಅವರ ಹೆಸರೆತ್ತದೆಯೇ ಕೆಲ ಆಟಗಾರರಿಗೆ ಯಶಸ್ಸಿನ ಅಮಲು ನೆತ್ತಿಗೇರಿದೆ ಎಂದು ಶ್ರೀನಿವಾಸನ್ ಕಿಡಿಕಾರಿದ್ದರು. 

CSK ತಂಡ ಕೂಡಿಕೊಳ್ಳುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ..!

ಈ ನಡುವೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರೈನಾ, ಐಪಿಎಲ್‌ನಿಂದ ಹೊರಬರಲು ಕುಟುಂಬದ ಮೇಲಿನ ಕಾಳಜಿಯೇ ಕಾರಣ ಎಂದಿದ್ದಾರೆ. ಸಿಎಸ್‌ಕೆ ತಂಡ ನನ್ನ ಕುಟುಂಬ ಇದ್ದಂತೆ. ಧೋನಿ ಭಾಯ್‌ ನನಗೆ ಬಹಳ ಮುಖ್ಯ. ಹೀಗಾಗಿ ಐಪಿಎಲ್‌ನಿಂದ ಹೊರಬರುವ ನಿರ್ಧಾರ ಕಠಿಣವಾಗಿತ್ತು ಎಂದು ಹೇಳಿದ್ದಾರೆ.

ಆಗಸ್ಟ್ 29ರಂದು ಸುರೇಶ್ ರೈನಾ ದಿಢೀರ್ ಎನ್ನುವಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ಭಾರತಕ್ಕೆ ಬಂದಿದ್ದರು. ವೈಯುಕ್ತಿಕ ಸಮಸ್ಯೆಯ ಕಾರಣ ನೀಡಿ ರೈನಾ ತವರಿಗೆ ಮರಳಿದ್ದರು. ಇದರ ಬೆನ್ನಲ್ಲೇ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡಿದ್ದವು.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!