ಗುಡುಗಿದ ಸರ್‌ ಜಡೇಜಾ; ಕೆಕೆಆರ್‌ ಮಣಿಸಿ ಮುಂಬೈಗೆ ಲಾಭ ಮಾಡಿದ ಸಿಎಸ್‌ಕೆ

By Suvarna NewsFirst Published Oct 29, 2020, 11:40 PM IST
Highlights

ಸಿಎಸ್‌ಕೆಗೆ ಆರು ವಿಕೆಟ್ ಗೆಲುವು/ ಕೋಲ್ಕತ್ತಾ ನೈಟ್ ರೈಡರ್ಸ್ ಮಣಿಸಿದ ಚೆನ್ನೈ/ ಕೊನೆಯ ಓವರ್ ಕೊನೆ ಎಸೆತದಲ್ಲಿ ಗೆಲುವು ದಾಖಲಿಸಿದ ಸೂಪರ್ ಕಿಂಗ್ಸ್/  ಕೊನೆಯ ಎರಡು ಓವರ್‌ಗೆ  30 ರನ್ ಬೇಕಿತ್ತು

ಅಬುದಾಬಿ(ಅ. 29)  ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚೇಸಿಂಗ್ ಮಾಡಿ ಮುಗಿಸಿದೆ. ಕೋಲ್ಕತ್ತಾ ನೀಡಿದ್ದ 173  ರನ್ ಚೇಸ್ ಮಾಡಿ ಗೆಲುವು ಸಾಧಿಸಿದೆ.

ಚೆನ್ನೈ ಪ್ಲೇ ಆಪ್ ಅವಕಾಶ ಕಳೆದುಕೊಂಡಿದೆ. ಆದರೆ ಈ ಗೆಲುವಿನೊಂದಿಗೆ ಟಾಪ್ ಸ್ಥಾನದಲ್ಲಿದ್ದ ಮುಂಬೈ ಪ್ಲೇ ಅಪ್ ಗೆ ಪ್ರವೇಶ ಪಡೆದುಕೊಂಡಿದೆ.  ಕೊನೆಯಲ್ಲಿ ಮಿಂಚಿದ ರವೀಂದ್ರ ಜಡೇಜಾ ಪಂದ್ಯದ ಹೀರೋ ಆದರು.

ಚೆನ್ನೈ ವಿರುದ್ಧ ಸೋತರೂ ಕೆಕೆಆರ್‌ಗೆ ಪ್ಲೇ ಆಪ್ ಅವಕಾಶ ಇದೇಯಾ?

ಕೆಕೆಆರ್ ಪರ ಬ್ಯಾಟ್ ಬೀಸಿದ ನೀತಿಶ್ ರಾಣಾ 87 ರನ್ ಗಳಿಸಿ ಕೋಲ್ಕತ್ತಾ ಮೊತ್ತ ಹೆಚ್ಚಲು ಕಾರಣವಾದರು. ಚೆಸಿಂಗ್ ಗೆ ಇಳಿದ ಸಿಎಸ್‌ಕೆಗೆ ರುತುರಾಜ್ ಗಾಯಕ್ವಾಡ್ ನೆರವಾಗಿ ನಿಂತರು. ಅಂತಿಮ ಹಂತದಲ್ಲಿ ಪಂದ್ಯ ಕೆಕೆಆರ್ ಪರ ವಾಲಿದಂತೆ  ಕಂಡರೂ ಕೇವಲ ಹನ್ನೊಂದು ಎಸೆತದಲ್ಲಿ  31 ರನ್ ಚಚ್ಚಿದ ರವೀಂದ್ರ ಜಡೇಜಾ ಸಿಎಸ್‌ಕೆಗೆ ಗೆಲವು ತಂದುಕೊಟ್ಟರು. ರುತುರಾಜ್ ಪಂದ್ಯ ಪುರುಷರಾದರು.  ಆರ್ ಸಿಬಿ ವಿರುದ್ಧವೂ ರುತುರಾಜ್ ಅರ್ಧ ಶತಕ ದಾಖಲಿಸಿ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡಿದ್ದರು.

ಈ ಸೋಲಿನ ಬಳೀಕ ಕೆಕೆಆರ್‌ಗೆ ಪ್ಲೇ ಅಪ್ ಆಸೆ ಬಹುತೇಕ್ ಅಂತ್ಯವಾಗಿದೆ. ಇನ್ನೊಂದು ಕಡೆ ಕೊನೆಯ ಸ್ಥಾನದಲ್ಲಿರುವ ಸಿಎಸ್‌ಕೆ ಗೆಲುವಿನ ಮೂಲಕ ಅಭಿಮಾನಿಗಳನ್ನು ರಂಜಿಸಿದೆ. 

click me!