2020ರ ಐಪಿ​ಎಲ್‌ಗಷ್ಟೇ ಡ್ರೀಮ್‌ 11 ಪ್ರಾಯೋ​ಜ​ಕತ್ವ

Suvarna News   | Asianet News
Published : Aug 20, 2020, 02:52 PM IST
2020ರ ಐಪಿ​ಎಲ್‌ಗಷ್ಟೇ ಡ್ರೀಮ್‌ 11 ಪ್ರಾಯೋ​ಜ​ಕತ್ವ

ಸಾರಾಂಶ

2020ನೇ ಆವೃತ್ತಿಯ ಐಪಿಎಲ್‌ ಟೈಟಲ್ ಪ್ರಾಯೋಜಕತ್ವ ಮಾತ್ರ ಡ್ರೀಮ್‌11 ಹೊಂದಲಿದೆ ಎಂದು ಬಿಸಿಸಿಐ ಖಚಿತ ಪಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 


ನವ​ದೆ​ಹ​ಲಿ(ಆ.20): 2020ರ ಐಪಿ​ಎಲ್‌ಗೆ ಮಾತ್ರ ಟೈಟಲ್‌ ಪ್ರಾಯೋ​ಜ​ಕತ್ವ ಹಕ್ಕನ್ನು ಡ್ರೀಮ್‌ ಇಲೆ​ವೆನ್‌ ಸಂಸ್ಥೆಗೆ ಮಾರಾಟ ಮಾಡಿ​ರು​ವು​ದಾಗಿ ಬುಧ​ವಾರ ಬಿಸಿ​ಸಿಐ ಸ್ಪಷ್ಟ​ಪ​ಡಿ​ಸಿದೆ. 

2021, 2022ರ ಐಪಿ​ಎಲ್‌ ಪ್ರಾಯೋ​ಜ​ಕತ್ವ ಹಕ್ಕಿಗೆ ಹೊಸ​ದಾಗಿ ಬಿಡ್ಡಿಂಗ್‌ ನಡೆ​ಸ​ಲಿ​ರುವ ಬಿಸಿ​ಸಿಐ, ಹೆಚ್ಚಿ​ನ ಮೊತ್ತಕ್ಕೆ ಬಿಡ್‌ ಸಲ್ಲಿಸುವಂತೆ ಸಂಸ್ಥೆಗೆ ತಿಳಿ​ಸಿದೆ ಎಂದು ಮಾಧ್ಯ​ಮ​ಗಳು ವರದಿ ಮಾಡಿದೆ. 2021ರ ಜನ​ವ​ರಿ​ಯಲ್ಲಿ ಬಿಡ್ಡಿಂಗ್‌ ಪ್ರಕ್ರಿಯೆ ನಡೆ​ಯ​ಲಿದೆ ಎನ್ನ​ಲಾ​ಗಿದೆ. 

ಐಪಿಎಲ್ ಟೈಟಲ್‌ ಪ್ರಾಯೋಕತ್ವ ಪಡೆಯುವಲ್ಲಿ Dream11 ಯಶಸ್ವಿ..!

ಈ ಹಿಂದೆ ಚೀನಾದ ಮೊಬೈಲ್‌ ಸಂಸ್ಥೆ ವಿವೋ ವಾರ್ಷಿಕ 440 ಕೋಟಿ ರು. ಒಪ್ಪಂದ ಮಾಡಿ​ಕೊಂಡಿತ್ತು. ಹೆಚ್ಚೂ ಕಡಿಮೆ ಅದೇ ಮೊತ್ತವನ್ನು ಮುಂದಿನ ವರ್ಷದ ಐಪಿ​ಎಲ್‌ನಲ್ಲಿ ಬಿಸಿ​ಸಿಐ ನಿರೀಕ್ಷೆ ಮಾಡು​ತ್ತಿದೆ ಎನ್ನ​ಲಾ​ಗಿದೆ. ಬೈಜೂಸ್, ಅನ್‌ಅಕಾಡಮಿ ಹಾಗೂ ಟಾಟಾ ಗ್ರೂಪ್ ಅವರನ್ನು ಹಿಂದಿಕ್ಕಿ ಮಂಗ​ಳ​ವಾರವಷ್ಟೇ ಡ್ರೀಮ್‌ ಇಲೆ​ವೆನ್‌ ಸಂಸ್ಥೆ 222 ಕೋಟಿ ರುಪಾಯಿಗೆ ಪ್ರಾಯೋ​ಜ​ಕ​ತ್ವ ಹಕ್ಕು ಖರೀ​ದಿ​ಸಿತ್ತು.

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಕೊರೋನಾ ಭೀತಿಯಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿಯು ಯುಎಯನಲ್ಲಿ ನಡೆಯಲಿದೆ. ಅಬುದಾಬಿ, ಶಾರ್ಜಾ ಹಾಗೂ ದುಬೈನಲ್ಲಿ ಪಂದ್ಯಗಳು ಜರುಗಲಿದ್ದು, ಅಧಿಕೃತ ವೇಳಾಪಟ್ಟಿ ಇನ್ನು ಪ್ರಕಟವಾಗಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?
ಜಡ್ಡು ಬಿಟ್ಟುಕೊಟ್ಟು ಮರಿ ಜಡೇಜಾಗೆ 14.2 ಕೋಟಿ ಖರ್ಚು ಮಾಡಿದ ಸಿಎಸ್‌ಕೆ! ಯಾರು ಈ ಪ್ರಶಾಂತ್ ವೀರ್?