
ನವದೆಹಲಿ(ಸೆ.06): 13ನೇ ಆವೃತ್ತಿಯ ಐಪಿಎಲ್ಗೆ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದ್ದು, ವಿವಾದಾತ್ಮಕ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್‌ರನ್ನು ಕೈಬಿಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಿಸಿಸಿಐನ ಪಟ್ಟಿಯನ್ನು ಸುನಿಲ್ ಗವಾಸ್ಕರ್, ಅಂಜುಮ್ ಚೋಪ್ರಾ, ಹರ್ಷಾ ಬೋಗ್ಲೆ, ದೀಪ್‌ದಾಸ್ ಗುಪ್ತಾ, ರೋಹನ್ ಗವಾಸ್ಕರ್, ಮುರಳಿ ಕಾರ್ತಿಕ್ ಹಾಗೂ ಲಕ್ಷ್ಮಣ್ ಶಿವರಾಮಕೃಷ್ಣನ್ ಹೆಸರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 71 ವರ್ಷ ವಯಸ್ಸಿನ ಗವಾಸ್ಕರ್ ಸೇರಿ ಎಲ್ಲರೂ ಯುಎಇಗೆ ಪ್ರಯಾಣಿಸಲಿದ್ದಾರೆ.
ಇದೇ ವರ್ಷ ಮಾಚ್‌ರ್‍ನಲ್ಲಿ ದ.ಆಫ್ರಿಕಾ ಸರಣಿ ವೇಳೆ ಮಾಂಜ್ರೇಕರ್‌ರನ್ನು ಬಿಸಿಸಿಐ ತನ್ನ ವೀಕ್ಷಕ ವಿವರಣೆಗಾರರ ತಂಡದಿಂದ ಕೈಬಿಟ್ಟಿತ್ತು. ಮಾಂಜ್ರೇಕರ್ 2 ಬಾರಿ ಕ್ಷಮೆ ಕೋರಿ ಬಿಸಿಸಿಐಗೆ ಪತ್ರ ಬರೆದಿದ್ದರು. ಆದರೂ ಅವರನ್ನು ಐಪಿಎಲ್ಗೆ ಆಯ್ಕೆ ಮಾಡದಿರುವುದು ಅಚ್ಚರಿ ಮೂಡಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.