Viral Video: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲೇ ಮಹಿಳೆಯ ಜೊತೆ ಸೆ*ಕ್ಸ್‌, ಬಿಜೆಪಿ ನಾಯಕನ ವಿರುದ್ಧ ಕೇಸ್‌!

Published : May 23, 2025, 10:06 PM ISTUpdated : May 23, 2025, 10:10 PM IST
BJP Leadar

ಸಾರಾಂಶ

ಬಿಜೆಪಿ ನಾಯಕ ಮನೋಹರ್ ಲಾಲ್ ಧಕಾಡ್ ಅವರು ಮಹಿಳೆಯೊಂದಿಗೆ ಬಿಳಿ ಕಾರಿನಿಂದ ಇಳಿದ ನಂತರ ಆಕ್ಷೇಪಾರ್ಹ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. 

ನವದೆಹಲಿ (ಮೇ.23): ಮಹಿಳೆಯ ಜೊತೆ ನಡು ರಸ್ತೆಯಲ್ಲಿನ ಅಶ್ಲೀಲ ವಿಡಿಯೋ ವೈರಲ್ ಆದ ನಂತರ ಬಿಜೆಪಿ ನಾಯಕ ಮನೋಹರ್ ಲಾಲ್ ಧಕಾಡ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ. ಮಧ್ಯಪ್ರದೇಶದ ಮಂದ್ಸೌರ್‌ನ ಮನೋಹರ್ ಲಾಲ್ ಧಕಾಡ್ ದೆಹಲಿ-ಮುಂಬೈ 8 ಲೇನ್ ಎಕ್ಸ್‌ಪ್ರೆಸ್‌ವೇಯಲ್ಲಿ ಮಹಿಳೆಯ ಜೊತೆ ಸೆ*ಕ್ಸ್‌ ನಡೆಸಿದ್ದರು. ಈ ವೇಳೆ ಮಹಿಳೆ ಸಂಪೂರ್ಣವಾಗಿ ಬೆತ್ತಲಾಗಿದ್ದು ಕಂಡು ಬಂದಿತ್ತು. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ವಿವಾದಕ್ಕೆ ಕಾರಣವಾಗಿದೆ.

ಮೇ 13ರ ಸಿಸಿಟಿವಿ ಫೂಟೇಜ್‌ ಇದಾಗಿದ್ದು, ಧಾಕಡ್‌ ಅವರ ಅರಿವಿಗೆ ಬರದಂತೆ ಸೆರೆಯಾಗಿದೆ. ತಮ್ಮ ಬಿಳಿ ಬಣ್ಣದ ಕಾರ್‌ನಿಂದ ಧಾಕಡ್‌ ಮಹಿಳೆಯ ಜೊತೆ ಇಳಿದಿದ್ದು ಕಂಡು ಬಂದಿದೆ. ಅಷ್ಟು ಮಾತ್ರವಲ್ಲದೆ, ಮಹಿಳೆಯ ಜೊತೆ ನಡುರಸ್ತೆಯಲ್ಲಿಯೇ ಅವರು ಲೈಂಗಿಕ ಕಾರ್ಯ ಮಾಡಿರುವುದು ದಾಖಲಾಗಿದೆ. ಧಕಾಡ್ ಅವರ ಪತ್ನಿ ಮಂದ್ಸೌರ್‌ನ ಬನಿ ಗ್ರಾಮದ ವಾರ್ಡ್ ಸಂಖ್ಯೆ 8 ರ ಚುನಾಯಿತ ಜಿಲ್ಲಾ ಪಂಚಾಯತ್ ಸದಸ್ಯೆ.

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ಧಕಾಡ್ ಮಹಾಸಭಾ ಯುವ ಸಂಘ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದೆ. ಬಿಜೆಪಿ ಕೂಡ ಧಕಾಡ್‌ನಿಂದ ದೂರ ಸರಿದಿದೆ. ಅವರು ಪಕ್ಷದ ಪ್ರಾಥಮಿಕ ಸದಸ್ಯರಲ್ಲ ಮತ್ತು ಆನ್‌ಲೈನ್ ನೋಂದಣಿ ಮೂಲಕ ಸೇರಿದ್ದಾರೆ ಎಂದು ಪಕ್ಷ ಹೇಳಿದೆ.

 

 

 

PREV
Read more Articles on
click me!

Recommended Stories

ಸಂತ ಕಬೀರ ನಗರದಲ್ಲಿ ಯೋಗಿ ಭರ್ಜರಿ ಘೋಷಣೆ
ಗಢ ಗಢ ನಡುಗಿದ ಅನುಭವ; ನೋಡಿದ್ರೆ ಕುಸಿದ ಬಾವಿ, ವಿಡಿಯೋ ವೈರಲ್