ದೀಪಾವಳಿ ಹಬ್ಬದಂದು ರಾತ್ರಿ 11 ಗಂಟೆಯವರೆಗೆ ಕೆಲಸ ಮಾಡಿದ Zomato ಡೆಲಿವರಿ ಬಾಯ್ ರಿತಿಕ್ ತೋಮರ್ 6 ಗಂಟೆಗಳ ಕಾಲ ಕೆಲಸ ಮಾಡಿ ಗಳಿಸಿರುವ ಹಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ನವದೆಹಲಿ: ದೀಪಾವಳಿ ಹಬ್ಬ ಮುಗಿದು ನಾಲ್ಕೈದು ದಿನಗಳಾಗಿದ್ದು, ಜನರು ಸಂಭ್ರಮದ ಕ್ಷಣಗಳನ್ನು ಮೆಲಕು ಹಾಕುತ್ತಿದ್ದಾರೆ. ಹಬ್ಬದ ದಿನದಂಡು ವಿಶೇಷ ಅಡುಗೆ ತಯಾರಿಸಲು ಸಾಧ್ಯವಾಗದವರ ಮನೆಯ ಸಿಹಿ ತಲುಪಿಸಿದ್ದು ಫುಡ್ ಡೆಲಿವರಿ ಬಾಯ್‌ಗಳು. ಹೌದು, ನಗರ ಪ್ರದೇಶದ ಜನರ ಸ್ವಿಗ್ಗಿ, ಜೊಮ್ಯಾಟೋ ಅಂತಹ ಆಪ್‌ಗಳ ಮೇಲೆ ಅವಲಂಬಿತರಾಗಿದ್ದು, ಬೇಕು ಅಂದಾಗ ತಮ್ಮಿಷ್ಟದ ಆಹಾರವನ್ನು ಬುಕ್ ಮಾಡುತ್ತಾರೆ. ಮಳೆ-ಚಳಿ ಇರಲಿ ನಿಮ್ಮ ಆರ್ಡರ್‌ನ್ನು ಡೆಲಿವರಿ ಬಾಯ್‌ಗಳು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೇವಲ ಪುರುಷರು ಮಾತ್ರವಲ್ಲ ಹಲವು ಯುವತಿಯರು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹಬ್ಬದ ದಿನದಂದು ಸಹ ಅನೇಕರು ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ.
ಇದೀಗ ದೀಪಾವಳಿ ಹಬ್ಬದಂದು ರಾತ್ರಿ 11 ಗಂಟೆಯವರೆಗೆ ಕೆಲಸ ಮಾಡಿದ್ದ ಡೆಲಿವರಿ ಬಾಯ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಹಬ್ಬ ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ದೀಪಾವಳಿಯಂದು ಯುವಕ ಬರೋಬ್ಬರಿ 6 ಗಂಟೆ ಕೆಲಸ ಮಾಡಿದ್ದರಿಂದ ಆತನಿಗೆ ಸಿಕ್ಕ ಹಣವೆಷ್ಟು ಎಂಬುದನ್ನು ವಿಡಿಯೋದಲ್ಲಿ ಗಮನಿಸಬಹುದು.
undefined
ಅಕ್ಟೋಬರ್ 31ರಂದು ಭಾರತದಲ್ಲಿ ಜನರು ಸಂಭ್ರಮ ಸಡಗರದಿಂದ ಹಬ್ಬ ಆಚರಣೆ ಮಾಡಿದ್ದಾರೆ. ಆದ್ರೆ ಈ ಡೆಲಿವರಿ ಬಾಯ್ ರಿತಿಕ್ ತೋಮರ್, ಹಬ್ಬದಂದು ಕುಟುಂಬಸ್ಥರ ಬಳಿ ಹೋಗದೇ ಆಹಾರ ಸರಬರಾಜು ಮಾಡುವ ಕೆಲಸಕ್ಕೆ ಹಾಜರಾಗಿದ್ದಾರೆ. ಆ ದಿನ ಸ್ವೀಕರಿಸಿದ ಮೊದಲ ಮತ್ತು ಕೊನೆಯ ಆರ್ಡರ್ ಬಂದಿರುವ ಎಲ್ಲಾ ಮಾಹಿತಿಯನ್ನು ರಿತಿಕ್ ರೆಕಾರ್ಡ್ ಮಾಡಿದ್ದಾರೆ. ಅಕ್ಟೋಬರ್ 31ರಂದು ರಿತಿಕ್ ತೋಮರ್ ಸಂಜೆ 5 ರಿಂದ ರಾತ್ರಿ 11 ಗಂಟೆಯವರೆಗೆ ಡೆಲಿವರಿ ಬಾಯ್ ಆಗಿ 6 ಗಂಟೆ ಕೆಲಸ ಮಾಡಿ 317 ರೂಪಾಯಿ ಹಣ ಗಳಿಸಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಆನ್‌ಲೈನ್ ಫುಡ್ ಡೆಲಿವರಿ ಕಂಪನಿಗಳು ಹಬ್ಬದ ಸಂದರ್ಭದಲ್ಲಿ ವಿಶೇಷ ಕೊಡುಗೆಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, Zomato ಏಜೆಂಟ್‌ಗೆ ಒಂದು ಆರ್ಡರ್‌ಗೆ 40 ರೂಪಾಯಿ ನೀಡುತ್ತದೆ. ರಿತಿಕ್ ರಾತ್ರಿ 11 ಗಂಟೆಯರೆಗೂ ಒಟ್ಟು 8 ಆರ್ಡರ್ ನೀಡಿ 317 ರೂಪಾಯಿ ಗಳಿಸಿದ್ದಾರೆ.
ಇದನ್ನೂ ಓದಿ: ಸೈಕಲ್‌ನಲ್ಲಿ ಪಾರ್ಸೆಲ್ ತಂದ ಡೆಲಿವರಿ ಬಾಯ್‌ಗೆ ಗ್ರಾಹಕ ಮಾಡಿದ್ದೇನು? ನೆಟ್ಟಿಗರು ಭಾವುಕ
ಈ ವಿಡಿಯೋವನ್ನು ರಿತಿಕ್ ತೋಮರ್ (Ritik tomar) ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು ದೀಪಾವಳಿಯಂದು ಜೊಮ್ಯಾಟೋ ಕೆಲಸ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ 50 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿವೆ. 6 ಗಂಟೆಯವರೆಗೆ ಕೆಲಸ ಮಾಡಿದ್ದಕ್ಕೆ ಕೇವಲ 317 ರೂಪಾಯಿ ಸಿಕ್ಕಿದ್ದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ದೀಪಾವಳಿಯಂದು ಸಹ ಕೆಲವರು ಒಂದು ಹೊತ್ತಿನ ಊಟಕ್ಕೂ ಸಂಘರ್ಷ ನಡೆಸುತ್ತಿರುತ್ತಾರೆ. ಒಂದಿಷ್ಟು ಮಂದಿ ಬೆಳಕಿನ ಹಬ್ಬದಂದು ಜೀವನಕ್ಕಾಗಿ ಕೆಲಸ ಮಾಡುತ್ತಾರೆ. ಇದು ಒಂದು ರೀತಿ ಸಂಘರ್ಷದ ಬದುಕು ಎಂದು ಓರ್ವ ನೆಟ್ಟಿಗ ಬರೆದುಕೊಂಡಿದ್ದಾರೆ.
ಬಹುತೇಕರು ನಿಮಗೆ ಕೆಲಸ ಮಾಡುವ ಶಕ್ತಿ ಆ ದೇವರು ನೀಡಲಿ. ಸತತ ಪರಿಶ್ರಮವಿದ್ರೆ ಮಾತ್ರ ಯಶಸ್ಸು ಸಿಗುತ್ತದೆ. ಹಾಗಾಗಿ ಕೆಲಸ ಮಾಡುತ್ತಿರಬೇಕು. ಹಾಗೆಯೇ ಜೊಮ್ಯಾಟೋ ಸಹ ತನ್ನ ಸಿಬ್ಬಂದಿಗೆ ನೀಡುವ ಹಣದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಡೆಲಿವರಿ ಬಾಯ್ ಕಣ್ಣೀರಿಗೆ ಕರಗಿದ ಕಟುಕರ ಮನಸ್ಸು, ದೋಚಿದ ವಸ್ತುಗಳಿಂದ ಮಾಡಿದ್ದೇನು?