ನಿಮಿಷಕ್ಕೆ 4100 ಫುಡ್ ಆರ್ಡರ್: ಝೊಮೆಟೋ CEO ಶಾಕ್

By Suvarna News  |  First Published Jan 1, 2021, 3:29 PM IST

ಹೊಸ ವರ್ಷದ ಹಿಂದಿನ ದಿನ ಹೋಟೆಲ್ ಊಟಕ್ಕೆ ಮೊರೆ ಹೋದ ಜನ | ನಿಮಿಷಕ್ಕೆ 4100 ಆರ್ಡರ್ ನೋಡಿ ಝೊಮೆಟೋ ಸಿಇಒ ಶಾಕ್


ಹೊಸ ವರ್ಷದ ಸಂಭ್ರಮಾಚರಣೆಯಂದು ಕೊರೋನಾದಿಂದಾಗಿ ಜನರು ಮನೆಯಲ್ಲೇ ಸಂಭ್ರಮಿಸಿದ್ದಾರೆ. ಯಾರೂ ಹೊರಗೆ ಓಡಾಡದೆ ಎಲ್ಲರೂ ಕುಳಿತಲ್ಲೇ ನ್ಯೂ ಇಯರ್ ಡಿನ್ನರ್ ಮಾಡಿದ್ದಾರೆ.

ಫುಡ್‌ ಡೆಲಿವರಿ ಎಪ್ಲಿಕೇಷನ್‌ಗಳು ಹಠಾತ್ ಬೇಡಿಕೆಯ ಹೆಚ್ಚಸಿಕೊಂಡಿವೆ. ಜೊಮಾಟೊದಲ್ಲಿ ಹೊಸ ವರ್ಷದ ಮುನ್ನ ದಿನ ಸಂಜೆ ನಿಮಿಷಕ್ಕೆ 3,200 ಕ್ಕಿಂತ ಹೆಚ್ಚಾಗಿತ್ತು. ಸಿಕ್ಕಾಪಟ್ಟೆ ಆರ್ಡರ್ಸ್‌ ಬಂದಿದ್ದವು.

Tap to resize

Latest Videos

ಹಿಂದೂ ಮಹಾಸಾಗರದಲ್ಲಿ ಡ್ರೋಣ್ ಮೂಲಕ ಚೀನಾ ಬೇಹುಗಾರಿಕೆ

ನಮ್ಮ ಆರ್ಡರ್ ಸ್ಪೀಡ್ ನಾವು ಇಲ್ಲಿಯವರೆಗೆ ನಮ್ಮ ಜೀವನದಲ್ಲಿ ಕಂಡ ಅತಿ ಹೆಚ್ಚು (ನಿಮಿಷಕ್ಕೆ ಸರಿಸುಮಾರು 2500 ಆದೇಶಗಳು (ಒಪಿಎಂ) ಆರ್ಡರ್‌ ಎಂದು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಡಿಸೆಂಬರ್ 31 ಮತ್ತು ಜನವರಿ 1 ರಂದು ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ರಿಂದ ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಲು ಆದೇಶಿಸಿದೆ. ಒಡಿಶಾ ಸರ್ಕಾರ ರಾತ್ರಿ 10 ರಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಿದೆ.

ಚಟ್ನಿ ಎಂದು ಮೂಗು ಮುರಿಯಬೇಡಿ... ಇದರಿಂದ ಎಷ್ಟೊಂದು ಪ್ರಯೋಜನಗಳಿವೆ ತಿಳಿಯಿರಿ..

2020 ರಲ್ಲಿ ಪ್ರತಿ ನಿಮಿಷಕ್ಕೆ 22 ಬಿರಿಯಾನಿ ಡೆಲಿವರಿ ಮಾಡಿದ್ದಾಗಿ ಝೊಮೆಟೊ ತಿಳಿಸಿದೆ. ಝೊಮಾಟೊ ಮೇ ತಿಂಗಳಲ್ಲಿ 4.5 ಲಕ್ಷ ಪಿಜ್ಜಾ ಆರ್ಡರ್ ಬಂದಿದ್ದರೆ ನವೆಂಬರ್‌ನಲ್ಲಿ 17 ಲಕ್ಷಕ್ಕೂ ಹೆಚ್ಚಿನ ಆರ್ಡರ್ ಬಂದಿತ್ತು.

click me!