ಕ್ಲಿಕ್‌ಗಾಗಿ ಮಿಸ್‌ಲೀಡ್ ಆಗುವ ಟೈಟಲ್, ಥಂಬ್‌ನೇಲ್ ಹಾಕುವ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕಾರ್ಯಾಚರಣೆ ಶುರು ಮಾಡಿದೆ. ಭಾರತದಿಂದಲೇ ಆರಂಭವಾಗಲಿರುವ ಈ ಕಾರ್ಯಾಚರಣೆಯಲ್ಲಿ ಕ್ಲಿಕ್‌ಬೈಟ್ ಕಂಟೆಂಟ್‌ಗಳನ್ನು ಡಿಲೀಟ್ ಮಾಡಲಾಗುವುದು.
ಬೆಂಗಳೂರು (ಡಿ.21): ವಿಡಿಯೋ ಸ್ಟ್ರೀಮಿಂಗ್ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್ ಯೂಟ್ಯೂಬ್ ದೊಡ್ಡ ಘೋಷಣೆ ಮಾಡಿದೆ. ಯೂಟ್ಯೂಬ್‌ನಲ್ಲಿ ಕ್ಲಿಕ್‌ಗಾಗಿ ಮಿಸ್‌ಲೀಡ್ ಆಗುವಂಥ ಟೈಟಲ್, ಥಂಬ್‌ನೇಲ್ ಹಾಕುವ ಚಾನೆಲ್‌ಗಳ ವಿರುದ್ಧ ಕಾರ್ಯಾಚರಣೆ ಶುರು ಮಾಡಿದ್ದು, ಮುಲಾಜಿಲ್ಲದೆ ಈ ಎಲ್ಲಾ ಕಂಟೆಂಟ್‌ಗಳನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡುವುದಾಗಿ ಘೋಷಣೆ ಮಾಡಿದೆ. ಇದನ್ನು ಭಾರತದಿಂದಲೇ ಆರಂಭ ಮಾಡುವುದಾಗಿ ತಿಳಿಸಿದೆ. ಇದನ್ನು ಯೂಟ್ಯೂಬ್ ಕ್ಲಿಕ್‌ಬೈಟ್ ಟೈಟಲ್ & ಥಂಬ್‌ನೇಲ್ ಎಂದು ಪರಿಗಣನೆ ಮಾಡಲಿದ್ದು ಹೀಗಿರುವ ಎಲ್ಲಾ ಕಂಟೆಂಟ್‌ಗಳನ್ನು ಡಿಲೀಟ್ ಮಾಡುವುದಾಗಿ ತಿಳಿಸಿದೆ. ಥಂಬ್‌ನೇಲ್‌ನಲ್ಲಿ ಇರುವ ಮಾಹಿತಿಗಳು ಹಾಗೂ ಟೈಟಲ್‌ಗಳ ವಿವರ ಅದರ ಕಂಟೆಂಟ್‌ನಲ್ಲೂ ಇರಬೇಕು. ಕೇವಲ ಕ್ಲಿಕ್‌ಗಾಗಿ ಥಂಬ್‌ನೇಲ್‌ನಲ್ಲಿ ಆಕರ್ಷಕ ಟೈಟಲ್ ಹಾಗೂ ಫೋಟೋಗಳನ್ನು ಬಳಸಿದ್ದಲ್ಲಿ ಅದನ್ನು ಕ್ಲಿಕ್‌ಬೈಟ್ ಕಂಟೆಂಟ್ ಎಂದು ಯೂಟ್ಯೂಬ್ ಗಣನೆಗೆ ತೆಗೆದುಕೊಳ್ಳಲಿದ್ದು, ಅಂಥಾ ಕಂಟೆಂಟ್‌ಗಳು ಡಿಲೀಟ್ ಆಗಲಿದೆ.
ಇಂಥ ಕಂಟೆಂಟ್‌ಗಳಲ್ಲಿ ಸಾಮಾನ್ಯವಾಗಿ ಸರಿಯಾದ ಮಾಹಿತಿಗಳೇ ಇರೋದಿಲ್ಲ ಎಂದು ಯೂಟ್ಯೂಬ್ ಪರಿಗಣಿಸಿದೆ. ಥಂಬ್‌ನೇಲ್‌ಗಳಲ್ಲಿ ಮ್ಯಾನಿಪ್ಯುಲೇಟೆಡ್ ಲೈನ್‌ಗಳನ್ನು ಹಾಕುವ ಅಭ್ಯಾಸವನ್ನು ಸಾವಿರಾರು ಯೂಟ್ಯೂಬರ್‌ಗಳು ಅನುಸರಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಇದು ಕೊನೆಗೊಳ್ಳಲಿದೆ.
undefined
YouTube ತನ್ನ ವೆಬ್‌ಸೈಟ್‌ನಲ್ಲಿ 'ಅತಿಯಾದ ಕ್ಲಿಕ್‌ಬೈಟ್' ಕಂಟೆಂಟ್‌ಗೆ ಕಡಿವಾಣ ಹಾಕುವ ಪ್ರತಿಜ್ಞೆ ಮಾಡಿದೆ. ಅದರಲ್ಲೂ ಮುಖ್ಯವಾಗಿ ಬ್ರೇಕಿಂಗ್ ನ್ಯೂಸ್ ಹಾಗೂ ಕರೆಂಟ್ ಅಫೇರ್ಸ್‌ಗಳನ್ನು ತಿಳಿಸುವಂಥ ಥಂಬ್‌ನೇಲ್ ಹಾಗೂ ಲೈನ್‌ಗಳನ್ನು ಹಾಕಿದ್ದರೂ ಅದರಲ್ಲಿ ಅವುಗಳ ವಿವರಗಳೇ ಇದ್ದಿರುವುದಿಲ್ಲ ಎಂದು ತಿಳಿಸಿದೆ.
'ವಿಡಿಯೋದ ಟೈಟಲ್ ಅಥವಾ ಥಂಬ್‌ನೇಲ್‌ಗಳು ವೀಕ್ಷಕರಿಗೆ ಯಾವುದೋ ಸುದ್ದಿಯನ್ನು ನೀಡಬೇಕಿರುತ್ತದೆ. ಅಂಥ ಮಾಹಿತಿ ನೀಡದೇ ಇರುವ ವಿಡಿಯೋ' ವನ್ನು ಅತಿಯಾದ ಕ್ಲಿಕ್‌ಬೈಟ್ ಕಂಟೆಂಟ್ ಎಂದು ಪರಿಗಣನೆ ಮಾಡಲಿದೆ. ಈ ವೀಡಿಯೋಗಳು ವೀಕ್ಷಕರಿಗೆ 'ಮೋಸ, ಹತಾಶೆ ಅಥವಾ ದಾರಿತಪ್ಪಿಸುವ ಭಾವನೆ'ಯನ್ನು ನೀಡುತ್ತದೆ ಎಂದು YouTube ಹೇಳಿದೆ.. ಅನೇಕ ವೀಕ್ಷಕರು ಇದೀಗ ಕ್ಲಿಕ್‌ಬೈಟ್ ಅನ್ನು ಗುರುತಿಸಲು ಮತ್ತು ಬಿಟ್ಟುಬಿಡಲು ತಮ್ಮನ್ನು ತಾವು ತರಬೇತಿ ಮಾಡಿಕೊಂಡಿದ್ದಾರೆ, ಆದರೂ ಕಾನೂನುಬದ್ಧ ಮತ್ತು ಕ್ಲಿಕ್‌ಬೈಟ್ ವಿಷಯದ ನಡುವಿನ ವ್ಯತ್ಯಾಸವನ್ನು ತಿಳಿದಿಲ್ಲದ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ.
'ನನ್ನ ಗರ್ಲ್‌ಫ್ರೆಂಡ್ ನಿಂಗೆ, ನಿಂದು ನನಗೆ..' ಬೆಂಗ್ಳೂರಲ್ಲಿ ಹೊಸ ವರ್ಷಕ್ಕೆ ನಡೀತಾ ಇದೆ ಸ್ವ್ಯಾಪಿಂಗ್ ದಂಧೆ!
ವೆಬ್‌ಸೈಟ್ ಭಾರತದಲ್ಲಿ ಕ್ಲಿಕ್‌ಬೈಟ್ ವೀಡಿಯೊಗಳನ್ನು ಡಿಲೀಟ್ ಮಾಡಲು ಮೊದಲು ಪ್ರಾರಂಭಿಸುತ್ತದೆ. ಸ್ಟ್ರೈಕ್‌ಗಳನ್ನು ನೀಡದೆಯೇ ಈ ನೀತಿಯನ್ನು ಉಲ್ಲಂಘಿಸುವ ಯಾವುದೇ ವೀಡಿಯೊವನ್ನು ಅಳಿಸಿ ಹಾಕಲಿದೆ. ಮೊದಲಿಗೆ ಹಳೆಯ ವಿಡಿಯೋಗಳ ಮೇಲೆ ಪ್ರಹಾರ ಆರಂಭವಾಗಲಿದ್ದರೆ, ನಂತರ ಹೊಸ ಅಪ್‌ಲೋಡ್‌ಗಳ ಕ್ಲಿಕ್‌ಬೈಟ್ ಕಂಟೆಂಟ್‌ಗಳಿಗೂ ಕಡಿವಾಣ ಹಾಕಲಿದೆ. ಕ್ಲಿಕ್‌ಬೈಟ್ ಅಭ್ಯಾಸವನ್ನು ಮುಚ್ಚುವ ಹೊಸ ನೀತಿಯಿಂದ ಎಷ್ಟು ಯೂಟ್ಯೂಬ್ ಚಾನೆಲ್‌ಗಳು ಪರಿಣಾಮ ಬೀರುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕೊಬ್ಬರಿ ಬೆಂಬಲ ಬೆಲೆ ಏರಿಸಿದ ಕೇಂದ್ರ ಸರ್ಕಾರ, 2025ರಲ್ಲಿ ಕ್ವಿಂಟಾಲ್‌ಗೆ 12,100 ರೂಪಾಯಿ!