ಗ್ಯಾನೇಶ್​ ಕುಮಾರ್​ ಯಾರೋ ಗೊತ್ತಿಲ್ಲ, ರಾಜೀನಾಮೆ ಬೇಕಷ್ಟೇ: ಪ್ರತಿಭಟನೆಯಲ್ಲಿ ಲೇಡಿ ಜಿರಳೆ ಮಾತಿಗೆ ದೀಪ್ಕೆ ಸುಸ್ತು

Published : Oct 18, 2026, 04:31 PM IST
CJP Protest

ಸಾರಾಂಶ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಹಣ ಕೊಟ್ಟು ಜನರನ್ನು ಕರೆತರಲಾಗುತ್ತಿದೆ ಎಂಬ ಸತ್ಯವನ್ನು ಯೂಟ್ಯೂಬರ್‌ಗಳು ಬಯಲಿಗೆಳೆಯುತ್ತಿದ್ದಾರೆ. ಪ್ರತಿಭಟನಾಕಾರರಿಗೆ ತಾವು ಏಕೆ ಬಂದಿದ್ದೇವೆ ಮತ್ತು ಯಾರ ವಿರುದ್ಧ ಹೋರಾಡುತ್ತಿದ್ದೇವೆ ಎಂಬುದೇ ತಿಳಿದಿಲ್ಲ. ಇಲ್ಲೊಬ್ಬ ಪ್ರತಿಭಟನಾಕಾರಳಿಗೆ ಗ್ಯಾನೇಶ್​ ಕುಮಾರ್​ ಯಾರೆಂದೇ ಗೊತ್ತಿಲ್ಲ, ರಾಜೀನಾಮೆ ಬೇಕೆಂದಿದ್ದಾಳೆ.

ದೆಹಲಿ: ಈ ಹಿಂದೆ ಶಿಕ್ಷಣದ ಸುಧಾರಣೆ ಹೆಸರಲ್ಲಿ, ಈಗ SIR ವಿರೋಧಿಸಿ ಕಾಕ್ರೋಚ್​ ಜನತಾ ಪಕ್ಷ (SIR) ಮಾಡುತ್ತಿರುವ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರ ಮರ್ಯಾದೆ ತೆಗೆಯುತ್ತಿದ್ದಾರೆ Gen Zಗಳು. ಕೆಲವರು ಓಪನ್ ಆಗಿಯೇ ನಮಗೆ ದುಡ್ಡು ಕೊಟ್ಟಿದ್ದಕ್ಕೆ ಬಂದಿರೋದು, ಇಲ್ಲಿ ಏನು ನಡೀತಿದೆ ಎಂದು ಗೊತ್ತಿಲ್ಲ. ಇಂಥ ಜಾಗಕ್ಕೆ ಬನ್ನಿ ಎಂದು ಕ್ಯಾಷ್​ ಕೊಟ್ಟರು, ನಾವು ಬಂದ್ವಿ ಎನ್ನುತ್ತಿದ್ದರೆ, ಮತ್ತೆ ಕೆಲವರು ಏನೋ ಗಲಾಟೆ ನಡೀತಾ ಇತ್ತು, ಮಜಾ ಮಾಡಲು ಬಂದ್ವಿ ಎಂದಿದ್ದರೆ, ಬೆಂಗಳೂರಿನಲ್ಲಿಯೇ ಕೆಲವು ಮಹಿಳೆಯರು, ಪ್ರತಿಭಟನೆಗೆ ಬಂದ್ರೆ ಮನೆ ಕೊಡುತ್ತೇವೆ ಎಂದ್ರು, ಅದ್ಕೇ ಬಂದ್ವಿ ಎಂದು ಯುಟ್ಯೂಬರ್ಸ್, ಮಾಧ್ಯಮಗಳ ಮುಂದೆ ಹೇಳಿ ಜಿರಳೆಗಳ ಮಾನ ಹರಾಜು ಹಾಕುತ್ತಿದ್ದಾರೆ. ಅಷ್ಟಕ್ಕೂ ಪ್ರತಿಭಟನೆಗೆ ಬಂದವರ ಪೈಕಿ ಮುಕ್ಕಾಲು ಮಂದಿಗೆ ತಾವ್ಯಾಕೆ ಇಲ್ಲಿ ಬಂದಿದ್ದು ಎಂದೇ ಗೊತ್ತಿರಲ್ಲ, ಇದೇ ಯುಟ್ಯೂಬರ್​ ಬಂಡವಾಳ ಕೂಡ. ಇದೇ ಕಾರಣಕ್ಕೆ ಕಂಡ ಕಂಡವರ ಮುಂದೆ ಮೈಕ್​ ಹಿಡಿದು, ಅವರು ಹೇಳುವ ಮಾತುಗಳು ಟ್ರೋಲ್​ ಆಗುತ್ತಿವೆ.

ಅವರು ಯಾರೋ, ರಾಜೀನಾಮೆ ಬೇಕಷ್ಟೇ

ಇದೀಗ ದೆಹಲಿಯಲ್ಲಿ ಲೇಡಿ ಜಿರಳೆಯೊಬ್ಬಳು ಪ್ರತಿಭಟನೆಯಲ್ಲಿ ಭಾಗವಹಿಸಿ, ಮತ್ತೆ ಕಾಕ್ರೋಚ್​ ಜನತಾ ಪಕ್ಷದ ಮರ್ಯಾದೆ ತೆಗೆದಿದ್ದಾಳೆ. ನೀವು ಇಲ್ಲಿ ಏಕೆ ಬಂದಿದ್ದು ಎಂದು ಕೇಳಿದಾಗ, ಗ್ಯಾನೇಶ್​ ಕುಮಾರ್​ ರಾಜೀನಾಮೆ ಬೇಕೆಂದು ಎಂದಿದ್ದಾರೆ. ಗ್ಯಾನೇಶ್​ ಕುಮಾರ್​ ಅಂದ್ರೆ ಯಾರು ಎಂದು ಕೇಳಿದಾಗ, ಆಂ.... ಗ್ಯಾನೇಶ್​..... ಎಂದು ಕಕ್ಕಾಬಿಕ್ಕಿಯಾಗಿದ್ದಾಳೆ. ಅವರು ಅದೇ ವೋಟ್​ ಚೋರಿ ಮಾಡಿದವರು ಎಂದಿದ್ದಾಳೆ. ವೋಟ್​ ಚೋರಿ ಸರಿ, ಅವರು ಈಗ ಏನಾಗಿದ್ದಾರೆ, ಯಾವ ಹುದ್ದೆಯಲ್ಲಿ ಇದ್ದಾರೆ, ಅವರ ವಿರುದ್ಧ ನೀವು ಬಂದಿದ್ದು ಏಕೆ ಎಂದು ಪ್ರಶ್ನಿಸಿದಾಗ... ಅದೇ ಅವರು ಎಲೆಕ್ಷನ್​ನಲ್ಲಿ ಏನೋ ಒಂದು ಇದ್ದಾರೆ... ಅದೆಲ್ಲಾ ನನಗೆ ಗೊತ್ತಿಲ್ಲ... ಒಟ್ನಲ್ಲಿ ಅವರ ರಾಜೀನಾಮೆಗೆ ನಾನಿಲ್ಲಿ ಬಂದಿರೋದು ಎಂದು ಹೇಳುವ ಮೂಲಕ, ಇಡೀ ಪ್ರತಿಭಟನೆಯ ಹಿಂದಿರುವ ವಾಸ್ತವವನ್ನು ಜನರ ಎದುರು ತೆರೆದಿಟ್ಟಿದ್ದಾಳೆ!

ಯುಟ್ಯೂಬರ್ಸ್​ಗೆ ಹಬ್ಬ

manojmuntashir ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ. ಈ ವಿಡಿಯೋ ಒಂದೇ ಅಲ್ಲ. ಬೆಂಗಳೂರು, ದೆಹಲಿ ಸೇರಿದಂತೆ ಎಲ್ಲೆಲ್ಲಿ ಪ್ರತಿಭಟನೆ ನಡೆದಿದ್ಯೋ, ಅಲ್ಲಿ ಬಂದವರ ಎದುರು ಮೈಕ್​ ಹಿಡಿದು ಯುಟ್ಯೂಬರ್ಸ್​ ತಮ್ಮ ಯುಟ್ಯೂಬ್​ ಚಾನೆಲ್​ ಫೇಮಸ್​ ಮಾಡಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿಜೆಪಿಯ ಪ್ರತಿಭಟನೆ ಹಲವಾರು ಯುಟ್ಯೂಬರ್​ಗೆ ಒಳ್ಳೆಯ ದಾರಿ ಮಾಡಿಕೊಟ್ಟಿದೆ ಬಿಟ್ಟರೆ, ಈ ವಿಡಿಯೋ ನೋಡಿದವರಿಗೆ ಸಿಜೆಪಿಯ ಪ್ರತಿಭಟನೆಯ ಹಿನ್ನೆಲೆ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಇದಾಗಲೇ ಅಮೆರಿಕ, ಜರ್ಮನಿಯಿಂದ ಭಾರತಕ್ಕೆ ಬಂದು ಪ್ರತಿಭಟನೆ ಮಾಡುತ್ತಿರುವವರಿಗೆ ಫಂಡಿಂಗ್​ ಎಲ್ಲಿಂದ ಆಗುತ್ತಿದೆ ಎನ್ನುವ ಬಗ್ಗೆ ಇದಾಗಲೇ ತನಿಖೆ ಶುರು ಮಾಡುವಂತೆ ಹಲವರು ಮನವಿ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ರೂಪಾಯಿ ಸುರಿದು ವಿಮಾನದ ಐಷಾರಾಮಿ ಕ್ಲಾಸ್​ನಲ್ಲಿ ಅಮೆರಿಕದಿಂದ ಬರುವ ಅಭಿಜೀತ್​ ದೀಪ್ಕೆ, ಜರ್ಮನಿಯಿಂದ ಬರುವ ಧ್ರುವ್​ ರಾಠೆ ಅವರ ಅಸಲಿಯತ್ತು ಏನು ಎನ್ನುವ ಬಗ್ಗೆ ಮೂಲ ಸಹಿತ ತನಿಖೆ ಆಗಬೇಕು ಎಂದು ಹಲವರು ಬೇಡಿಕೆ ಇಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೊನ್ನೆ ಲೇಡಿ ಪೊಲೀಸ್ ಮೇಲೆ ಹಲ್ಲೆ: ಇಂದು ಲೇಡಿ ಯೋಧೆ ಕೆನ್ನೆಗೆ ಹೊಡೆದ ಜಿರಳೆ- ವಿಡಿಯೋ ವೈರಲ್​
Solo Trip: ಬಂಗಾಳ ಕೊಲ್ಲಿ To ಅರಬ್ಬೀ ಸಮುದ್ರ, ಏಕಾಂಗಿಯಾಗಿ ಹೆಣ್ಣು ಆಮೆಯ 3500KM ನಿಗೂಢ ಪಯಣ!