ಪ್ರಧಾನಿ ಮೋದಿಯಿಂದಲೇ ನೀವಿನ್ನೂ ಜೀವಂತವಾಗಿದ್ದಿರಿ: ಬಿಜೆಪಿ ಸಚಿವ

By BK Ashwin  |  First Published Aug 2, 2022, 12:19 PM IST

ಪ್ರಧಾನಿ ಮೋದಿ ಲಸಿಕೆಯನ್ನು ಕಂಡು ಹಿಡಿದಿದ್ದಾರೆ. ಇದರಿಂದಲೆ ನೀವಿನ್ನೂ ಜೀವಂತವಾಗಿದ್ದೀರಿ ಎಂದು ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡಿದವರಿಗೆ ಬಿಹಾರದ ಸಚಿವ ಉತ್ತರಿಸಿದ್ದಾರೆ. ಅವರ ಇತ್ತೀಚಿನ ಭಾಷಣದ ವಿಡಿಯೋ ವೈರಲ್‌ ಆಗುತ್ತಿದೆ. 


ದೇಶದಲ್ಲಿ ಕೋವಿಡ್ - 19ನ (COVID - 19) ಮೊದಲ ಎರಡು ಅಲೆಗಳು ಜನರಲ್ಲಿ ತೀವ್ರ ಆತಂಕದ ಅಲೆಗಳನ್ನು ಸೃಷ್ಟಿ ಮಾಡಿದೆ. ದೇಶದಲ್ಲಿ ಲಕ್ಷಾಂತರ ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಆದರೆ, ಬಳಿಕ ಹೆಚ್ಚು ಜನ ಕೋವಿಡ್‌ - 19 ವಿರುದ್ಧದ ಲಸಿಕೆ ಪಡೆದ ವೈರಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಇದನ್ನೇ ಬಂಡವಾಳವಾಗಿಸಿಕೊಂಡ ಬಿಜೆಪಿ ಸಚಿವರೊಬ್ಬರು ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೇಳಿದರೆ ಅವರು ಕೊಟ್ಟ ಉತ್ತರ ಈಗ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಜನರು ಬಿಹಾರದ ಬಿಜೆಪಿಯ ರಾಜ್ಯ ಕಂದಾಯ ಮತ್ತು ಭೂಸುಧಾರಣಾ ಸಚಿವ ರಾಮ್ ಸೂರತ್ ರಾಯ್‌ ಅವರನ್ನು ಪ್ರಶ್ನಿಸಿದರೆ ಹಾಗೂ ಹೆಚ್ಚಿನ ಬೇಡಿಕೆಗಳನ್ನು ಕೇಳಿದರೆ, ತಮ್ಮ ಕ್ಷೇತ್ರದ ಜನರನ್ನು ಸಮಾಧಾನಪಡಿಸಲು ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಹೇಳಲಾಗಿದೆ. ಅವರು ಕಲೆದ ವಾರ ಮಾತನಾಡಿದ್ದಾರೆ ಎಂಬ ವೈರಲ್‌ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಅವರ ಭಾಷಣ ವೈರಲ್‌ ಆಗುತ್ತಿದೆ.

Tap to resize

Latest Videos

ಕೋವಿಡ್ 3ನೇ ಡೋಸ್‌ ಲಸಿಕೆ ಪಡೆದ್ರೆ ಫ್ರೀಯಾಗಿ ಸಿಗುತ್ತೆ ‘ಚೋಲೆ ಭಟುರೆ’

ತಮ್ಮ ಮುಜಾಫರ್‌ಪುರ ಜಿಲ್ಲೆಯ ಔರೈ ವಿಧಾನಸಭಾ ಕ್ಷೇತ್ರದಲ್ಲಿ ಜನರ ದೊಡ್ಡ ಗುಂಪಿಗೆ ‘’ ಪ್ರಧಾನಿ ಮೋದಿಯವರು ಕಂಡುಹಿಡಿದ ಕೋವಿಡ್ ವಿರೋಧಿ ಲಸಿಕೆ" ಯಿಂದಲೇ ನೀವಿನ್ನೂ ಬದುಕುಳಿದಿದ್ದೀರಾ. ಸಾಮೂಹಿಕವಾಗಿ ಜನರಿಗೆ ಲಸಿಕೆ ಹಾಕಿಸಿದ್ದರಿಂದಲೇ ಜನರು ಆರಾಮಾಗಿದ್ದಾರೆ, ಜೀವಂತವಾಗಿದ್ದಾರೆ ಎಂದು ಬಿಹಾರದ ಬಿಜೆಪಿ ಸಚಿವ ರಾಮ್ ಸೂರತ್ ರಾಯ್‌ ಹೇಳಿದ್ದಾರೆ. ಅಲ್ಲದೆ, ಕೋವಿಡ್-19 ವೈರಸ್ ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದ ವಿನಾಶಕ್ಕೆ ಕಾರಣವಾಯಿತು. ನೀವು ಅದನ್ನು ಟಿವಿಯಲ್ಲಿ ನೋಡಿರಬೇಕು. ಇಲ್ಲಿ ಮೋದಿ ನಿಮ್ಮ ಜೀವವನ್ನು ಉಳಿಸಿದ್ದಾರೆ. ಪ್ರಧಾನಿ ಮೋದಿಯಿಂದಾಗಿ ನೀವು ಇಂದು ಜೀವಂತವಾಗಿದ್ದೀರಿ ಎಂದು ರಾಯ್‌ ಎಂದು ತನ್ನ ಮತದಾರರಿಗೆ ಹೇಳಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ. 

"ಮೋದಿಯವರು ಲಸಿಕೆಯನ್ನು ಕಂಡುಹಿಡಿದಿಲ್ಲದಿದ್ದರೆ, ಪ್ರತಿರಕ್ಷಣೆಯೇ ಆಗುತ್ತಿರಲಿಲ್ಲ" ಎಂದು ಅವರು ಹೇಳಿದರು: "ಒಬ್ಬರು ವ್ಯಕ್ತಿ ಅಥವಾ ಸಂಬಂಧಿಕರು ಸಾಯದ ಒಂದೇ ಒಂದು ಕುಟುಂಬವಿಲ್ಲ. ನನ್ನ ಸಂಬಂಧಿಕರು ಸಹ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಲ್ಲಿ ಮೃತಪಟ್ಟಿದ್ದಾರೆ, ನೀವು ಇಂದು ಪ್ರಧಾನಿ ಮೋದಿಯವರಿಂದ ಜೀವಂತವಾಗಿದ್ದೀರಿ.
ಕೋವಿಡ್‌ ವಿರೋಧಿ ಲಸಿಕೆಯನ್ನು ಅಭಿವೃದ್ಧಿಪಡಿಸಿದವರು ಅಥವಾ ಕಂಡುಹಿಡಿದವರು  ವಿಜ್ಞಾನಿಗಳು (Scientists) ಎಂಬ ಅಂಶವನ್ನು ರಾಯ್‌ ಉಲ್ಲೇಖಿಸಲಿಲ್ಲ. ಇನ್ನು, ಕೊರೊನಾ ವೈರಸ್ ಸಾಂಕ್ರಾಮಿಕವು ಮೊದಲ ಮತ್ತು ಎರಡನೆಯ ಅಲೆಗಳಲ್ಲಿ "ಆರ್ಥಿಕತೆಯನ್ನು ಅಡ್ಡಿಪಡಿಸಿದೆ" ಎಂದು ರಾಯ್‌ ಅವರಿಗೆ ಹೇಳಿದರು. "ಈಗ, ಅಭಿವೃದ್ಧಿ ನಡೆಯುತ್ತಿದೆ, ನೀವೆಲ್ಲರೂ ಹೆಚ್ಚಿನ ಅಭಿವೃದ್ಧಿಗೆ ಒತ್ತಾಯಿಸುತ್ತಿದ್ದೀರಿ, ಆದರೆ ಸರ್ಕಾರ ಒಂದು ವ್ಯವಸ್ಥೆಯಡಿಯಲ್ಲಿ ಕೆಲಸ ಮಾಡುತ್ತದೆ. ನಿಮ್ಮ ಜೀವನವನ್ನು ಉಳಿಸಲು ಖರ್ಚು ಮಾಡಿದ ನಂತರ ಉಳಿದಿರುವ ಹಣವನ್ನು ಸರ್ಕಾರ ಅಭಿವೃದ್ಧಿ ಚಟುವಟಿಕೆಗಳಿಗೆ ಖರ್ಚು ಮಾಡುತ್ತದೆ" ಎಂದು ಸಹ ಬಿಹಾರದ ಬಿಜೆಪಿ ಸಚಿವ ರಾಯ್‌ ಹೇಳಿದರು.

ಕೋವಿಡ್‌ ಲಸಿಕೆ: ಫ್ರೀ 3ನೇ ಡೋಸ್‌ಗೆ ಭಾರೀ ಬೇಡಿಕೆ

ಸಚಿವ ರಾಯ್‌ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ರಾಜ್ಯ ಬಜೆಟ್ ಅಧಿವೇಶನದಲ್ಲಿ, ಸರ್ಕಾರಿ ಭೂಮಿಯಿಂದ ಒತ್ತುವರಿ ತೆರವು ಮಾಡಲು ಉತ್ತರ ಪ್ರದೇಶದ ಮಾದರಿಯಲ್ಲಿ "ಬುಲ್ಡೋಜರ್ ಮಾದರಿ" (Bulldozer Model) ಅನ್ನು ಬಿಹಾರದಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಅವರು ಸದನದ ಹೊರಗೆ ಘೋಷಿಸಿದ್ದರು.
ಇನ್ನೊಂದೆಡೆ, ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ (Agnipath Scheme) ವಿರುದ್ಧ ಪ್ರತಿಭಟನಾಕಾರರು ರೈಲ್ವೆ ಆಸ್ತಿಗೆ ದೊಡ್ಡ ಪ್ರಮಾಣದ ಹಾನಿಯನ್ನುಂಟುಮಾಡಿದ್ದಕ್ಕೆ ಸಂಬಂಧಿಸಿದಂತೆ, ಅವರನ್ನು "ಆಟಂಕಿ" (ಭಯೋತ್ಪಾದಕರು) ಎಂದು ಬಣ್ಣಿಸಿದ್ದರು. ಜೂನ್‌ನಲ್ಲಿ 149 ಸರ್ಕಲ್‌ ಇನ್ಸ್‌ಪೆಕ್ಟರ್‌ (ಸಿಇ) ವರ್ಗಾವಣೆಗೆ ಸಂಬಂಧಿಸಿದಂತೆ ಸಚಿವರ ಕಡತವನ್ನು ಸಿಎಂ ಕಚೇರಿಯಿಂದ ಹಿಂತಿರುಗಿಸಲಾಗಿದ್ದು, ಅದನ್ನು ಪರಿಶೀಲಿಸಲಾಗುವುದು ಎಂದು ಹೇಳಲಾಗಿತ್ತು. 

click me!