Har Ghar Tiranga ಚೀನಾ ಬದಲು ಮೇಡ್ ಇನ್ ಇಂಡಿಯಾ ಧ್ವಜ ಬಳಸಲು ಮನವಿ!

By Suvarna NewsFirst Published Aug 2, 2022, 11:28 AM IST
Highlights

ಅಜಾದಿಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗ ಅಭಿಯಾನ ಆರಂಭಿಸಿದ್ದಾರೆ. ಮನೆ ಮನೆಯಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಲು ಮನವಿ ಮಾಡಿದ್ದಾರೆ. ಆದರೆ ಧ್ವಜಾರೋಹಣಕ್ಕೆ ಭಾರತದಲ್ಲಿ ತಯಾರಿಸಿದ ತಿರಂಗ ಬಳಸಿ, ಮೇಡ್ ಇನ್ ಚೀನಾ ಧ್ವಜ ಬಳಸಬೇಡಿ ಎಂದು ಮನವಿ ಮಾಡಿದ್ದಾರೆ.
 

ನವದೆಹಲಿ(ಆ.02):  ಸ್ವಾತಂತ್ರ್ಯ ದಿನಚಾರಣೆಗೆ ಭಾರತ ಸಕಲ ರೀತಿಯಲ್ಲು ಸಜ್ಜಾಗುತ್ತಿದೆ. ಅಜಾದಿ ಕಾ ಅಮೃತಮಹೋತ್ಸವ ಸಂಭ್ರಮದಲ್ಲಿರುವ ಭಾರತ ವಿಶೇಷ ಹಾಗೂ ಸ್ಮರಣೀಯವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಭಾರತ ಮುಂದಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದ್ದಾರೆ. ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಅಭಿಯಾನ ಇದಾಗಿದೆ. ಆದರೆ ಇದರ ನಡುವೆ ಆತಂಕವೂ ಎದುರಾಗಿದೆ. ಹರ್ ಘರ್ ತಿರಂಗಾ ಅಭಿಯಾನದಿಂದ ಭಾರತದಲ್ಲಿ ರಾಷ್ಟ್ರಧ್ವಜಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಚೀನಾ ಇದೀಗ ಭಾರತದ ರಾಷ್ಟ್ರಧ್ವಜ ಮಾರಾಟ ಮಾಡಲು ಮುಂದಾಗಿದೆ. ಹೀಗಾಗಿ ಹಲವು ಸ್ವಯಂ ಸೇವಕರು ಇದೀಗ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪ್ರತಿ ಮನೆಯಲ್ಲಿ ಧ್ವಜಾರೋಹಣಕ್ಕೆ ಚೀನಾದಲ್ಲಿ ತಯಾರಿಸಿದ ಧ್ವಜ ಬಳಸಬೇಡಿ. ಭಾರತದಲ್ಲೇ ಉತ್ಪಾದಿಸಿರುವ ಧ್ವಜ ಬಳಸಿ ಎಂದು ಸ್ವಯಂ ಸೇವಕರು ಮನವಿ ಮಾಡಿದ್ದಾರೆ. ಮೇಡ್ ಇನ್ ಇಂಡಿಯಾ ಧ್ವಜದ ಬೆಲೆ ಕೇವಲ 30 ರೂಪಾಯಿ. ಹೀಗಾಗಿ ಧ್ವಜ ಬಳಸುವಾಗ ಅಚಾತುರ್ಯ ಬೇಡ ಎಂದು ಮನವಿ ಮಾಡಲಾಗಿದೆ.

ಭಾರತ್ ಫ್ಲ್ಯಾಗ್ ಫೌಂಡೇಷನ್ ಸ್ವಯಂ ಸೇವಕರು ಈ ವಿಶೇಷ ಮನವಿ ಮಾಡಿದೆ. ಪುಣೆ ನಿವಾಸಿಗಳಿಗೆ ಸ್ವಯಂ ಸೇವಕರು ಕರಪತ್ರಗಳನ್ನು ಹಂಚುತ್ತಿದ್ದಾರೆ. ಪ್ರತಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.  ಚೀನಾ ಈಗಾಗಲೇ ಭಾರತದ ಮಾರುಕಟ್ಟೆಗೆ ಧ್ವಜಗಳನ್ನು ರವಾನಿಸಿದೆ. ಹೀಗಾಗಿ ಭಾರತೀಯರು ಧ್ವಜ ಖರೀದಿ ವೇಳೆ ಅತೀವ ಎಚ್ಚರಿಕೆ ವಹಿಸಬೇಕು. ಚೀನಾ ಧ್ವಜ ಬಳಸಬೇಡಿ. ಭಾರತದಲ್ಲೇ ಉತ್ಪಾದಿಸಿರುವ ಮೇಡ್ ಇನ್ ಇಂಡಿಯಾ ಧ್ವಜ ಬಳಸಿ ಎಂದು ಭಾರತ್ ಫ್ಲ್ಯಾಗ್ ಫೌಂಡೇಷನ್ ಕಾರ್ಯಕಾರಿ ಅಧ್ಯಕ್ಷ ರಾಹುಲ್ ಭಲೆರಾವ್ ಮನವಿ ಮಾಡಿದ್ದಾರೆ.

Latest Videos

India@75: ಹರ್‌ ಘರ್‌ ತಿರಂಗಾಕ್ಕೆ 7 ತಿಂಗಳು ಮೊದಲೇ ಸಲಹೆ ಕೊಟ್ಟಿದ್ದ ಕನ್ನಡಿಗ..!

ಭಾರತದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರ ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ಜಾರಿ ಮಾಡಿದೆ. ಇದರಲ್ಲಿ ಹರ್ ಘರ್ ತಿರಂಗಾ ಕೂಡ ಒಂದಾಗಿದೆ. ಆಗಸ್ಟ್ 13 ರಿಂದ ಆಗಸ್ಟ್ 15ರ ವರೆಗೆ ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸಲು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.  ಇದರಿಂದ ಆಗಸ್ಟ್ ತಿಂಗಳ ಆರಂಭದಲ್ಲೇ ರಾಷ್ಟ್ರ ಧ್ವಜಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಮಾರಾಟ ಬಲು ಜೋರಾಗಿದೆ. ಆದರೆ ಖರೀದಿ ವೇಳೆ ಎಚ್ಚರ ವಹಿಸಬೇಕು. ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಮೇಡ್ ಇನ್ ಇಂಡಿಯಾ ಧ್ವಜ ಬಳಸುವುದರಿಂದ ಹೆಮ್ಮೆಯ ಜೊತೆಗೆ ಹಲವು ಉಪಯೋಗಗಳು ಇವೆ.  ಇದರಿಂದ ಭಾರತೀಯ ಆರ್ಥಿಕತೆಗೆ ಹೊಸ ವೇಗ ಸಿಗಲಿದೆ. ಚೀನಾ ಧ್ವಜ ತಿರಸ್ಕರಿಸುವ ಮೂಲಕ ಚೀನಾ ಆದಾಯ ಹರಿಯುವುದು ನಿಲ್ಲಲಿದೆ. ಇಷ್ಟೇ ಅಲ್ಲ ಭಾರತದ ಹಬ್ಬ ಹರಿದಿನಗಳನ್ನು ಬಳಸಿಕೊಳ್ಳುವ ಚೀನಾಗೆ ತಕ್ಕ ತಿರುಗೇಟು ಸಿಗಲಿದೆ ಎಂದು ರಾಹುಲ್ ಭಲೆರಾವ್ ಹೇಳಿದ್ದಾರೆ.

ನಮ್ಮಲ್ಲಿ 20,000 ಸಣ್ಣ ಹಾಗೂ ಮಧ್ಯಮ ಗಾತ್ರದ ಧ್ವಜಗಳಿವೆ. ಇದರ ಜೊತೆಗೆ ಭಾರತೀಯ ಉಡುಗೆ, ಸ್ವಾತಂತ್ರ್ಯ ದಿನಾಚರಣೆಗೆ ಬೇಕಾದ ಎಲ್ಲಾ ಸಲಕರಣಗಳು ಇವೆ. ಎಲ್ಲವೂ ಭಾರತದಲ್ಲೇ ಉತ್ಪಾದಿಸಿರುವ ಉತ್ಪನ್ನಗಳಾಗಿವೆ. ಪ್ರತಿ ಉತ್ಪನ್ನ ತಯಾರಾಗಿರುವ ವಿಳಾಸಗಳು ನಮೂದಿಸಲಾಗಿದೆ. ಸದ್ಯ ಧ್ವಜದಲ್ಲಿ ಯಾವುದೇ ಕೊರತೆ ಇಲ್ಲ. ಹೆಚ್ಚಿನ ಬೇಡಿಕೆ ಬಂದರೆ ತಕ್ಷಣವೇ ಪೂರೈಸಲಾಗುತ್ತದೆ ಎಂದು ಭಾರತ್ ಫ್ಲ್ಯಾಗ್ ಫೌಂಡೇಶ್ ಸಂಸ್ಥಾಪಕ ಗಿರೀಶ್ ಮುರುಡ್ಕರ್ ಹೇಳಿದ್ದಾರೆ.

Har Ghar Tiranga: 1 ಕೋಟಿ ರಾಷ್ಟ್ರಧ್ವಜ ಹಾರಾಟ ಗುರಿ: ಸಿಎಂ ಬೊಮ್ಮಾಯಿ

ಪ್ರಧಾನಿ ನರೇಂದ್ರ ಮೋದಿ  ಮನವಿ ಬೆನ್ನಲ್ಲೇ ರಾಷ್ಟ್ರಧ್ವಜಕ್ಕೆ ಬೇಡಿಕೆ ಹೆಚ್ಚಾಗಿದೆ. ಇದುವರೆಗೆ 50 ರಿಂದ 60 ಸಾವಿರ ಧ್ವಜಗಳನ್ನು ಮಾರಾಟ ಮಾಡಲಾಗಿದೆ. ಹೆಚ್ಚಿನ ಬೇಡಿಕೆ ಇದ್ದರೂ ಪೂರೈಸಲಾಗುತ್ತದೆ. ಹೀಗಾಗಿ ಎಲ್ಲರೂ ಸ್ಥಳೀಯವಾಗಿ ನಿರ್ಮಿಸಿರುವ ರಾಷ್ಟ್ರಧ್ವಜ ಬಳಸಲು ಗಿರೀಶ್ ಮನವಿ ಮಾಡಿದ್ದಾರೆ.

ಭಾರತದ ಎಲ್ಲಾ ಪ್ರಜೆಗಳಲ್ಲೂ ರಾಷ್ಟ್ರಪ್ರೇಮ ಮತ್ತು ರಾಷ್ಟ್ರಭಕ್ತಿಯನ್ನು ಇಮ್ಮಡಿಗೊಳಿಸುವ ಈ ಅಭಿಯಾನದಲ್ಲಿ ಸಾರ್ವಜನಿಕರೂ ಕೂಡಾ ಕೈಮಗ್ಗ ಅಥವಾ ವಿದ್ಯುತ್‌ ಮಗ್ಗದಿಂದ ಹತ್ತಿ, ಪಾಲಿಯೆಸ್ಟರ್‌, ಉಣ್ಣೆ ರೇಷ್ಮೆ ಅಥವಾ ಖಾದಿಯಲ್ಲಿ ತಯಾರಿಸಿರುವ ರಾಷ್ಟ್ರಧ್ವಜವನ್ನು ಆಗಸ್ಟ್‌ 13ರಿಂದ 15 ರವರೆಗೆ ಮೂರು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ ಇರುವ ಕೋಟಿಗೂ ಹೆಚ್ಚು ಮನೆಗಳ ಮೇಲೆ ಹಾರಿಸಿ ದೇಶ ಪ್ರೇಮ ಮೆರೆಯಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಇದಕ್ಕಾಗಿ ಎಲ್ಲಾ ರಾಜ್ಯಗಳಲ್ಲಿ ತಯಾರಿ ಆರಂಭಗೊಂಡಿದೆ. ಹಲವು ಸಂಘ ಸಂಸ್ಥೆಗಳು ಉಚಿತವಾಗಿ ರಾಷ್ಟ್ರಧ್ವಜ ನೀಡುವ ಕಾರ್ಯದಲ್ಲೂ ತೊಡಗಿದೆ.

click me!