ಮಾರ್ಚ್ 21ಕ್ಕೆ ಯೋಗಿ ಪ್ರಮಾಣವಚನ, 45 ಸಾವಿರ ಜನ ಭಾಗಿ, 200ಕ್ಕೂ ಅಧಿಕ ವಿವಿಐಪಿಗಳಿಗೆ ಆಹ್ವಾನ

Suvarna News   | Asianet News
Published : Mar 16, 2022, 07:15 PM ISTUpdated : Mar 16, 2022, 07:47 PM IST
ಮಾರ್ಚ್ 21ಕ್ಕೆ ಯೋಗಿ ಪ್ರಮಾಣವಚನ, 45 ಸಾವಿರ ಜನ ಭಾಗಿ, 200ಕ್ಕೂ ಅಧಿಕ ವಿವಿಐಪಿಗಳಿಗೆ ಆಹ್ವಾನ

ಸಾರಾಂಶ

ಹೋಳಿ ಬಳಿಕ ಮಾರ್ಚ್ 21ಕ್ಕೆ ನಡೆಯಲಿದೆ ಯೋಗಿ ಆದಿತ್ಯನಾಥ್ ಪ್ರಮಾಣವಚನ 200ಕ್ಕೂ ಅಧಿಕ ವಿವಿಐಪಿ ಅತಿಥಿಗಳಿಗೆ ಈಗಾಗಲೇ ಆಹ್ವಾನ 45 ಸಾವಿರ ಜನರು ಭಾಗಿಯಾಗುವ ಸಾಧ್ಯತೆ

ಲಕ್ನೋ (ಮಾ. 16): ಉತ್ತರ ಪ್ರದೇಶ ಚುನಾವಣೆಯಲ್ಲಿ (Uttar Pradesh Election) ದಿಗ್ವಿಜಯ ಸಾಧಿಸಿದ ಬೆನ್ನಲ್ಲಿಯೇ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಯೋಗಿ ಆದಿತ್ಯನಾಥ್ (Yogi Adityanath) ಸಿದ್ಧತೆ ನಡೆಸುತ್ತಿದ್ದಾರೆ. ಕ್ಯಾಬಿನೆಟ್ ನಲ್ಲಿ ಯಾರೆಲ್ಲಾ ಇರಬೇಕು ಎನ್ನುವುದರ ಕುರಿತಾಗಿ ದೆಹಲಿಯಲ್ಲಿ ಸಾಲು ಸಾಲು ಸಭೆಗಳಲ್ಲಿ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದಾರೆ. ಹೋಳಿ (Holi) ಹಬ್ಬದ ಬಳಿಕ ಅಂದರೆ, ಮಾರ್ಚ್ 21 ರಂದು ಯೋಗಿ ಆದಿತ್ಯನಾಥ್ 2ನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಪ್ರಮಾಣವಚನ ಸಮಾರಂಭ ನಡೆಯಲಿದೆ.

ಪ್ರಮಾಣ ವಚನ ಸಮಾರಂಭವನ್ನು ಅದ್ದೂರಿಯಾಗಿ ನಡೆಸುವ ತೀರ್ಮಾಣ ಕೈಗೊಳ್ಳಲಾಗಿದೆ. ಲಕ್ನೋದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಎಕನಾ ಸ್ಟೇಡಿಯಂನಲ್ಲಿ (Atal Bihari Vajpayee Ekana Stadium) ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಆರಂಭವಾಗಿದೆ. 200ಕ್ಕೂ ಅಧಿಕ ವಿವಿಐಪಿಗಳಿಗೆ ಕಾರ್ಯಕ್ರಮದ ಆಹ್ವಾನ ನೀಡಲಾಗುತ್ತದೆ. 45 ಸಾವಿರಕ್ಕೂ ಅಧಿಕ ಜನರು ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. 

ಯೋಗಿ ಪ್ರಮಾಣ ವಚನ ಸಮಾರಂಭಕ್ಕೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದ ಪ್ರತಿಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗುವುದು ಎಂದು ವರದಿಯಾಗಿದೆ. ಸೋನಿಯಾ ಗಾಂಧಿ (Sonia Gandhi), ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ (akhilesh yadav), ಮಾಯಾವತಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ಕಳುಹಿಸಲಾಗುವುದು. ಇದೆಲ್ಲದರ ಹೊರತಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳಿಂದ ಲಾಭ ಪಡೆದ ರಾಜ್ಯದೆಲ್ಲೆಡೆಯ ಫಲಾನುಭವಿಗಳನ್ನೂ ಕಾರ್ಯಕ್ರಮಕ್ಕೆ ಕರೆಯಲಾಗುತ್ತದೆ ಎಂದು ಹೇಳಲಾಗಿದೆ.

ಆದರೆ ಈ ಸಮಾರಂಭಕ್ಕೂ ಮುನ್ನವೇ ‘ಸ್ಥಳ’ಕ್ಕೆ ಸಂಬಂಧಿಸಿದಂತೆ ರಾಜಕೀಯ ಶುರುವಾಗಿದೆ. ಸಮಾಜವಾದಿಗಳು ನಿರ್ಮಿಸಿದ ಕ್ರೀಡಾಂಗಣ ಬಿಟ್ಟರೆ ಪ್ರಮಾಣ ವಚನಕ್ಕೆ ಬೇರೆ ಸ್ಥಳ ಸಿಕ್ಕಿಲ್ಲ ಎಂದು ಅಖಿಲೇಶ್ ಯಾದವ್, ಯೋಗಿ ಆದಿತ್ಯನಾಥ್ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. ಈ ಕ್ರೀಡಾಂಗಣವನ್ನು ಅಖಿಲೇಶ್ ಯಾದವ್ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದೆ. ಹೊರಗಿನಿಂದ ಮೊಘಲ್ ವಾಸ್ತುಶೈಲಿಯನ್ನು ಹೊಂದಿರುವ ಈ ಕ್ರೀಡಾಂಗಣವು ಒಳಗಿನಿಂದ ಕ್ರೀಡೆಗಾಗಿ ಸಕಲ ಸೌಲಭ್ಯಗಳನ್ನು ಹೊಂದಿರುವ ವಿಶೇಷ ಕ್ರೀಡಾಂಗಣ ಎನಿಸಿದೆ.

ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಕಾರಿಗೆ ಅಡ್ಡಬಂದ ಎತ್ತು, ಟ್ವೀಟ್ ಮಾಡಿ ಹೇಳಿದ್ದು ಹೀಗೆ!
ಆದರೆ 2018 ರಲ್ಲಿ ಯೋಗಿ ಸರ್ಕಾರ ಈ ಕ್ರೀಡಾಂಗಣಕ್ಕೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಟ್ಟಿದೆ.  ಈ ಮೈದಾನದಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನೂ ಆಯೋಜಿಸಲಾಗಿದೆ. ಈ ಕ್ರೀಡಾಂಗಣದ ಸಾಮರ್ಥ್ಯ ಸುಮಾರು 50 ಸಾವಿರ ಎಂದು ಹೇಳಲಾಗಿದೆ. ಈ ಸ್ಟೇಡಿಯಂ ಈಗ ಯೋಗಿ ಆದಿತ್ಯನಾಥ್ ಅವರ 2ನೇ ಅವಧಿಯ ಉತ್ತರ ಪ್ರದೇಶ ಮುಖ್ಯಮಂತ್ರಿ ಅಧಿಕಾರಕ್ಕೆ ಸಾಕ್ಷಿಯಾಗಲಿದೆ. ಈ ಸ್ಟೇಡಿಯಂನಲ್ಲಿ ಕೇವಲ ಯೋಗಿ ಆದಿತ್ಯನಾಥ್ ಮಾತ್ರ ಪ್ರಮಾಣವಚನ ಸ್ವೀಕರಿಸುವುದಿಲ್ಲ.  ಅವರ ಇತರ ಸಂಭಾವ್ಯ ಸಚಿವರು ಕೂಡ ಇದೇ ವೇದಿಕೆಯಿಂದಲೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

2024ರ ಚುನಾವಣೆಗೆ ಬಿಜೆಪಿ ಸಿದ್ಧತೆ, ಯೋಗಿ ಸರ್ಕಾರ ಸಚಿವರ ಆಯ್ಕೆ ಹೊಣೆ ಅಮಿತ್ ಶಾ ಹೆಗಲಿಗೆ!
ಅಂದಹಾಗೆ, ಆ ಪ್ರಮಾಣ ವಚನ ಸಮಾರಂಭಕ್ಕೂ ಮುನ್ನವೇ ದೆಹಲಿಯಲ್ಲಿ ಹೊಸ ಸರ್ಕಾರದ () ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದು ದೆಹಲಿ ಬಿಜೆಪಿ ಕಚೇರಿಯಲ್ಲಿ ಈ ಕುರಿತಾಗಿ ಬೃಹತ್ ಸಭೆ ನಡೆದಿದೆ. ಸಿಎಂ ಯೋಗಿಯಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (BJP President JP Nadda) ಅವರವರೆಗೆ ಅನೇಕ ಅನುಭವಿಗಳು ಈ ವೇಳೆ ಉಪಸ್ಥಿತರಿದ್ದರು ಮತ್ತು ಎಲ್ಲರೂ ಹೊಸ ಸರ್ಕಾರ ಮತ್ತು ಅದರ ಸಂಭಾವ್ಯ ಮಂತ್ರಿಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!