ಇಸ್ಲಾಂಗಿಂತಲೂ ಸಂಭಲ್‌ ಇತಿಹಾಸ ಹಿಂದಿನದ್ದು : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

Published : Mar 13, 2025, 09:57 AM ISTUpdated : Mar 13, 2025, 10:07 AM IST
ಇಸ್ಲಾಂಗಿಂತಲೂ ಸಂಭಲ್‌ ಇತಿಹಾಸ ಹಿಂದಿನದ್ದು : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

ಸಾರಾಂಶ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸಂಭಲ್ ಇತಿಹಾಸ ಇಸ್ಲಾಂಗಿಂತಲೂ ಹಿಂದಿನದು ಎಂದು ಹೇಳಿದ್ದಾರೆ. ಅಲ್ಲಿ ವಿಷ್ಣು ದೇವಾಲಯವಿತ್ತು, ಅದನ್ನು 1526ರಲ್ಲಿ ಕೆಡವಲಾಯಿತು ಎಂದು ತಿಳಿಸಿದ್ದಾರೆ. ಚಿಲ್ಲರೆ ಹಣದುಬ್ಬರ 7 ತಿಂಗಳ ಕನಿಷ್ಠಕ್ಕೆ ಇಳಿದಿದೆ ಮತ್ತು ಈಶ ಸಂಸ್ಥೆ ವಿರುದ್ಧದ ವಿಡಿಯೋ ತೆಗೆದುಹಾಕಲು ಯೂಟ್ಯೂಬರ್‌ಗೆ ಹೈಕೋರ್ಟ್ ಸೂಚನೆ ನೀಡಿದೆ.

ಲಖನೌ (ಮಾ.13): ‘ಇಸ್ಲಾಂಗಿಂತಲೂ ಸಂಭಲ್‌ ಇತಿಹಾಸ ಹಿಂದಿನದ್ದು. ಅಲ್ಲಿ ವಿಷ್ಣು ದೇವಾಲಯವಿತ್ತು. 1526ರಲ್ಲಿ ಕೆಡವಲಾಯಿತು. ಸಂಭಲ್ ವಿಚಾರದಲ್ಲಿ ಸತ್ಯ ತಿಳಿದಿರುವಾಗ ಒಬ್ಬರ ನಂಬಿಕೆಯನ್ನು ಬಲವಂತವಾಗಿ ಕಸಿದುಕೊಳ್ಳುವುದು ಮತ್ತು ಹೇರುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. '

ಬುಧವಾರ ಮಾತನಾಡಿದ ಅವರು, ‘5 ಸಾವಿರಗಳಷ್ಟು ಹಳೆಯದಾದ ಗ್ರಂಥಗಳಲ್ಲಿ ಸಂಭಲ್ ಬಗ್ಗೆ ಉಲ್ಲೇಖವಿದೆ. ವಿಷ್ಣುವಿನ ಭವಿಷ್ಯದ ಅವತಾರಗಳ ಬಗ್ಗೆಯೂ ಇದೆ. ಇಸ್ಲಾಂ 1400 ವರ್ಷಗಳ ಹಿಂದೆಯೇ ಇದೆ. ಆದರೆ ನಾನು ಇಸ್ಲಾಂಗಿಂತ 2 ಸಾವಿರ ವರ್ಷಕ್ಕಿಂತ ಹಿಂದಿನ ವಿಚಾರದ ಬಗ್ಗೆ ಹೇಳುತ್ತಿದ್ದೇನೆ. ಈ ವಿಚಾರಗಳಿಗೆ ಪುರಾವೆಗಳು ಶತಮಾನದಿಂದಲೂ ಅಸ್ತಿತ್ವದಲ್ಲಿವೆ. 1526ರಲ್ಲಿ ಸಂಭಾಲ್‌ನಲ್ಲಿರುವ ವಿಷ್ಣು ದೇವಾಲಯವನ್ನು ಕೆಡವಲಾಯಿತು. ಅದಾಗಿ 2 ವರ್ಷಗಳ ನಂತರ ರಾಮ ಮಂದಿರವನ್ನು ಧ್ವಂಸ ಮಾಡಲಾಯಿತು’ ಎಂದರು.

ಚಿಲ್ಲರೆ ಹಣದುಬ್ಬರ 7 ತಿಂಗಳ ಕನಿಷ್ಠ: ಫೆಬ್ರವರಿಯಲ್ಲಿ ಶೇ.3.61ಕ್ಕೆ ಇಳಿಕೆ

ನವದೆಹಲಿ: ತರಕಾರಿ ಮತ್ತು ಪ್ರೋಟೀನ್‌ಯುಕ್ತ ವಸ್ತುಗಳ ಬೆಲೆ ಇಳಿಕೆಯಾಗಿರುವ ಕಾರಣ, ದೇಶದ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಶೇ.3.61ಕ್ಕೆ ಇಳಿಕೆಯಾಗಿದೆ. ಇದು 7 ತಿಂಗಳ ಕನಿಷ್ಠವಾಗದೆ.ಹಣದುಬ್ಬರ ಇಳಿಕೆಯಾದ ಕಾರಣ ಏ.9ರಂದು ಆರ್‌ಬಿಐ ತನ್ನ ದ್ವೈಮಾಸಿಕ ಸಾಲ ನೀತಿ ಪ್ರಕಟಿಸುವ ವೇಳೆ ಸತತ 2ನೇ ಸಲ ಸಾಲದ ಬಡ್ಡಿದರವನ್ನು ಇಳಿಸುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಚಿಲ್ಲರೆ ಹಣದುಬ್ಬರವು 2024ರ ಜನವರಿಯಲ್ಲಿ ಶೇ.4.26 ಮತ್ತು ಫೆಬ್ರವರಿ ಶೇ.5.09ರಷ್ಟಿತ್ತು. ಜನವರಿ 2025ಕ್ಕೆ ಹೋಲಿಸಿದರೆ ಫೆಬ್ರವರಿ 2025ರಲ್ಲಿ ಆಹಾರ ಹಣದುಬ್ಬರದಲ್ಲಿ 222 ಬೇಸಿಸ್ ಪಾಯಿಂಟ್‌ಗಳ ತೀವ್ರ ಕುಸಿತ ಕಂಡುಬಂದಿದೆ. ಮೇ 2023ರ ನಂತರ ಇದು ಅತ್ಯಂತ ಕಡಿಮೆ.

ಹೋಳಿ ಹಬ್ಬಕ್ಕೂ ಮೊದಲೇ ₹1,890 ಕೋಟಿ ಸಬ್ಸಿಡಿ ಕೊಡುಗೆ ನೀಡಿದ ಸಿಎಂ ಯೋಗಿ

ಈಶ ಸಂಸ್ಥೆ ವಿರುದ್ಧದ ವಿಡಿಯೋ ತೆಗೆದುಹಾಕಲು ಯೂಟ್ಯೂಬರ್‌ ಶ್ಯಾಮ್‌ಗೆ ದೆಹಲಿ ಹೈ ಸೂಚನೆ

ನವದೆಹಲಿ: ಧಾರ್ಮಿಕ ಗುರು ಸದ್ಗುರು ಅವರ ಈಶ ಸಂಸ್ಥೆಯ ಬಗ್ಗೆ ಯೂಟ್ಯೂಬರ್‌ ಶ್ಯಾಮ್‌ ಮೀರಾ ಸಿಂಗ್‌ ಮಾಡಿದ್ದ ವೀಡಿಯೋ ಮಾನಹಾನಿಕರವಾಗಿದ್ದು, ಅದನ್ನು ಆನ್‌ಲೈನ್‌ ವೇದಿಕೆಗಳಿಂದ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ.‘ಸಿಂಗ್‌ ಸಂಪೂರ್ಣವಾಗಿ ಪರಿಶೀಲಿಸದ ವಿಷಯಗಳ ಬಗ್ಗೆ ವಿಡಿಯೋ ಮಾಡಿದ್ದು, ವೀಕ್ಷಕರನ್ನು ಸೆಳೆಯುವ ಸಲುವಾಗಿ ಸಂಸ್ಥೆಯ ಘನತೆಗೆ ಧಕ್ಕೆ ತರುವಂತಹ ಶೀರ್ಷಿಕೆ ನೀಡಿದ್ದರು’ ಎಂದ ನ್ಯಾ। ಸುಬ್ರಮಣಿಯಂ ಪ್ರಸಾದ್‌, ಆ ವಿಡಿಯೋವನ್ನು ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ಆದೇಶಿಸಿದ್ದಾರೆ. ಜೊತೆಗೆ, ಮೇನಲ್ಲಿ ನಡೆಯಲಿರುವ ಮುಂದಿನ ವಿಚಾರಣೆಯ ವರೆಗೆ ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದಂತೆ ನಿರ್ದೇಶಿಸಿದ್ದಾರೆ. ಅಂತೆಯೇ, ಈಶ ವಿರುದ್ಧದ ಮಾನಹಾನಿಕರ ಕಂಟೆಂಟ್‌ಗಳನ್ನು ತೆಗೆದುಹಾಕುವಂತೆ ಮೆಟಾ ಹಾಗೂ ಗೂಗಲ್‌ಗೆ ಆದೇಶಿಸಲಾಗಿದೆ. ಫೆ.24ರಂದು ಅಪ್‌ಲೋಡ್‌ ಮಾಡಲಾದ ಸಿಂಗ್‌ ಅವರ ವಿಡಿಯೋದಲ್ಲಿ, ಮಕ್ಕಳ ಮೇಲೆ ಲೈಂಗಿಕ ಶೋಷಣೆ ಸೇರಿ ಸುಳ್ಳು, ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ಸಂಸ್ಥೆಯ ಸಲಹೆಗಾರ ಆರೋಪಿಸಿದ್ದರು.

ಇನ್ಮುಂದೆ ಉತ್ತರ ಪ್ರದೇಶದಲ್ಲಿ ಚಿಪ್ ಮಾದರಿಯಲ್ಲಿ RC

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..