
ಪಾಟ್ನಾ (ಸೆಪ್ಟೆಂಬರ್ 17, 2023): ಭಾರತದ ಕೆಲ ಖ್ಯಾತ ಪತ್ರಕರ್ತರು ಮತ್ತು ಸುದ್ದಿ ನಿರೂಪಕರ ಕಾರ್ಯಕ್ರಮಗಳನ್ನು I.N.D.I.A ಒಕ್ಕೂಟ ಬಹಿಷ್ಕರಿಸುವ ನಿರ್ಧಾರವನ್ನು ಇತ್ತೀಚೆಗಷ್ಟೇ ತೆಗೆದುಕೊಂಡಿದೆ. ಆದರೆ, ಈ ನಿರ್ಧಾರಕ್ಕೆ ಬಿಜೆಪಿ ಹಾಗೂ ಜನರು ಮಾತ್ರವಲ್ಲ ಮೈತ್ರಿಕೂಟದಲ್ಲೇ ವಿರೋಧ ವ್ಯಕ್ತವಾಗಿದೆ.
14 ಪತ್ರಕರ್ತರು ಮತ್ತು ಸುದ್ದಿ ನಿರೂಪಕರು ಆಯೋಜಿಸುವ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ I.N.D.I.A ಬ್ಲಾಕ್‌ನ ಇತ್ತೀಚಿನ ನಿರ್ಧಾರವನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಶನಿವಾರ ತಿರಸ್ಕರಿಸಿದ್ದಾರೆ. "ನಾನು ಯಾವುದೇ ಪತ್ರಕರ್ತನ ವಿರೋಧಿಯಲ್ಲ ಮತ್ತು ಬಹಿಷ್ಕಾರ ಮಾಡುವುದು ತಪ್ಪು" ಎಂದು ಅವರು ಹೇಳಿದ್ದಾರೆ. ಅಲ್ಲದೆ, "ನಾನೇಕೆ ಬಹಿಷ್ಕರಿಸಬೇಕು? ನಾನು ಪತ್ರಕರ್ತರ ಪರವಾಗಿದ್ದೇನೆ. ನೋಡಿ, ಪತ್ರಕರ್ತರಿಗೆ ಪೂರ್ಣ ಸ್ವಾತಂತ್ರ್ಯ ಸಿಕ್ಕಾಗ, ಅವರು ಸರಿಯಾದ ಮತ್ತು ಸೂಕ್ತವೆಂದು ಪರಿಗಣಿಸುವದನ್ನು ಬರೆಯುತ್ತಾರೆ. ಪತ್ರಕರ್ತರನ್ನು ಹಿಡಿತದಲ್ಲಿ ಇಡಬಹುದೇ? ಪತ್ರಕರ್ತರ ಮೇಲೆ ನಾನು ಯಾವತ್ತಾದರೂ ಯಾವುದೇ ರೀತಿಯ ನಿಯಂತ್ರಣವನ್ನು ಇಟ್ಟುಕೊಂಡಿದ್ದೇನೆಯೇ?’’ ಎಂದೂ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಬೇರೆ ಧರ್ಮದ ಬಗ್ಗೆ ಮಾತನಾಡಲು ಧೈರ್ಯವಿದೆಯೇ?: ಉದಯನಿಧಿ ಸ್ಟಾಲಿನ್ ವಿರುದ್ಧ ನಿರ್ಮಲಾ ಸೀತಾರಾಮನ್ ಚಾಟಿ
ಹಾಗೆ, ನಾನು ಯಾರ ವಿರುದ್ಧವೂ ಅಲ್ಲ.ಇದೀಗ ಕೇಂದ್ರದಲ್ಲಿರುವ ವ್ಯಕ್ತಿಗಳು ಕೆಲವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಮತ್ತು ಆ ಜನರು ಕೆಲವು ರೀತಿಯ ಪತ್ರಿಕೋದ್ಯಮದಲ್ಲಿನ ತಪ್ಪು ಕೃತ್ಯಗಳನ್ನು ಎಸಗುತ್ತಿದ್ದಾರೆ. ನಿಮಗೆ ಇವೆಲ್ಲವೂ ತಿಳಿದಿಲ್ಲವೇ? ನಾನು ಯಾವಾಗಲೂ ನಿಮ್ಮನ್ನು (ಮಾಧ್ಯಮ) ಗೌರವಿಸುತ್ತೇನೆ’’ ಎಂದೂ ಬಿಹಾರ ಸಿಎಂ ತಿಳಿಸಿದ್ದಾರೆ.
ನಿತೀಶ್ ಅವರು ತಮ್ಮ ಹುಟ್ಟೂರಾದ ಪಾಟ್ನಾದ ಭಕ್ತಿಯಾರ್‌ಪುರದಲ್ಲಿ ತಮ್ಮ ಸಂಗಾತಿ ದಿವಂಗತ ಮಂಜು ಸಿನ್ಹಾ ಅವರ ಹೆಸರಿನಲ್ಲಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯನ್ನು ಉದ್ಘಾಟಿಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲವು ಅಸಂಗತತೆಗಳು ನಡೆಯುತ್ತಿವೆ ಎಂದು I.N.D.I.A ಬ್ಲಾಕ್‌ನ ಜನರು ಮತ್ತು ಪಕ್ಷಗಳು ಭಾವಿಸಿರಬಹುದು ಎಂದು ಅವರು ಹೇಳಿದರು. ಆದರೆ, ನಾನು ಯಾವುದೇ ಸುದ್ದಿ ನಿರೂಪಕರ ವಿರುದ್ಧ ಅಲ್ಲ ಎಂದು ಬಿಹಾರ ಸಿಎಂ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ತನ್ನ ನಿಲುವು ಒಪ್ಪದ ಮಾಧ್ಯಮ ಬಹಿಷ್ಕಾರಕ್ಕೆ ಮುಂದಾದ I.N.DI.A ಒಕ್ಕೂಟ: ಬಿಜೆಪಿ ಟೀಕೆ
ಸುದ್ದಿ ನಿರೂಪಕರನ್ನು ಬಹಿಷ್ಕರಿಸುವ ನಿರ್ಧಾರವನ್ನು ಬಹಿರಂಗವಾಗಿ ತಿರಸ್ಕರಿಸಿದ ಬಣದ ಮೊದಲ ನಾಯಕ ಎನಿಸಿಕೊಂಡಿದ್ದಾರೆ ನಿತೀಶ್ ಕುಮಾರ್. ದೆಹಲಿಯಲ್ಲಿ ನಡೆದ ಬಣದ ಮೊದಲ ಸಮನ್ವಯ ಸಮಿತಿ ಸಭೆಯ ಒಂದು ದಿನದ ನಂತರ ಈ ಪಟ್ಟಿ ಬಂದಿತ್ತು. ಸಮಿತಿಯ ಮಾಧ್ಯಮ ಗುಂಪು ಈ ಪಟ್ಟಿಯನ್ನು ನೀಡಿತ್ತು.
ಇದನ್ನು ಓದಿ: ಸನಾತನ ಧರ್ಮ ನಿರ್ಮೂಲನೆಗೆಂದೇ I.N.D.I.A ಬಣ ರಚಿಸಲಾಗಿದೆ: ಮತ್ತೊಬ್ಬ ಡಿಎಂಕೆ ಸಚಿವನ ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ