ಉತ್ತರಖಂಡದಲ್ಲಿ ಹೆದ್ದಾರಿ ಸುರಂಗ ಕುಸಿದು 40 ಕಾರ್ಮಿಕರು ಸಿಲುಕಿದ್ದಾರೆ. ರಕ್ಷಣಾ ಕಾರ್ಯಕ್ಕೆ ಇನ್ನೂ 2 ದಿನ ಬೇಕಾಗಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದರೆ ಈ ದುರ್ಘಟನೆಗೆ ದೇವಿ ಶಾಪ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಉತ್ತರಕಾಶಿ(ನ.16)ಯಮನೋತ್ರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಸುರಂಗ ಕುಸಿತ ದುರಂತದಲ್ಲಿ ಸಿಲಿಕಿರುವ 40 ಕಾರ್ಮಿಕರ ರಕ್ಷಣೆಗೆ ಸತತ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇನ್ನು 2 ರಿಂದ 3 ದಿನದ ಅವಶ್ಯಕತೆ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಿಲ್‌ಕ್ಯಾರಾ ಮತ್ತು ದಾಂಡಲ್‌ಗಾಂವ್ ಮಧ್ಯೆ ನಿರ್ಮಾಣ ಹಂತದಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯ ಸುರಂಗದ ಒಂದು ಭಾಗ ಕುಸಿದಿದೆ. ಈ ದುರಂತಕ್ಕೆ ಭೌಖ್ನಾಗ್ ದೇವತಾ ಮಂದಿರದ ದೇವಿ ಶಾಪ ಕಾರಣ ಎಂದು ಸ್ಥಳೀಯ ಆಕ್ರೋಶ ಹೊರಹಾಕಿದ್ದಾರೆ. ಭೌಖ್ನಾಗ್ ದೇವತಾ ದೇವತಾ ಮಂದಿರ ನೆಲಸಮ ಮಾಡಿ ಸುರಂಗ ಕಾಮಾಗಾರಿ ಆರಂಭಿಸಲಾಗಿತ್ತು. ಈ ಸುರಂಗ ಮತ್ತಷ್ಟು ಅಪಾಯ ಎದುರಿಸಲಿದೆ ಎಂದು ಮಂದಿರದ ಭಕ್ತರು ಎಚ್ಚರಿಕೆ ನೀಡಿದ್ದಾರೆ.
ಸಿಲ್‌ಕ್ಯಾರಾ ಗ್ರಾಮದ 40 ವರ್ಷದ ದನ್ವೀರ್ ಚಾಂದ್ ರಮೋಲ, 45 ವರ್ಷದ ರಾಕೇಶ್ ನೌತಿಯಾಲ್ ದುರ್ಘಟನೆ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಕಾಮಗಾರಿ ಆರಂಭಿಸುವ ಮೊದಲು ಉದ್ದೇಶಿತ ಸುರಂಗದ ಪಕ್ಕದಲ್ಲೇ ಭೌಖ್ನಾಗ್ ದೇವತಾ ಮಂದಿರವಿತ್ತು. ಈ ಮಂದಿರವನ್ನು ಒಡೆದು ಕಾಮಗಾರಿ ಆರಂಭಿಸುವ ನೀಲ ನಕ್ಷೆ ತಯಾರಾಗಿತ್ತು. ಈ ವೇಳೆ ಸ್ಥಳೀಯರು, ಮಂದಿರದ ಭಕ್ತರು ಪ್ರತಿಭಟಿಸಿದ್ದರು. ಮಂದಿರ ಕೆಡವದಂತೆ ಕಾಮಗಾರಿ ಮುಂದುವರಿಸಲು ಮನವಿ ಮಾಡಲಾಗಿತ್ತು ಎಂದಿದ್ದಾರೆ.
ಸುರಂಗದಲ್ಲಿ ಸಿಲುಕಿರುವ ರಕ್ಷಣೆಗೆ 60 ಗಂಟೆ ಕಾರ್ಯಾಚರಣೆ, ಪೈಪ್ ಮೂಲಕ ಮಗನ ಜೊತೆ ಮಾತನಾಡಿದ ಕಾರ್ಮಿಕ!
ಸ್ಥಳೀಯರ ಮನವಿಯನ್ನು ಕಡೆಗಣಿಸಲಾಗಿತ್ತು. ಕೊನೆಯದಾಗಿ ಸದ್ಯ ಇರುವ ಮಂದಿರವನ್ನು ಒಡೆಯುವುದೇ ಆದರೆ, ಪಕ್ಕದಲ್ಲೇ ಸಣ್ಣ ಮಂದಿರ ನಿರ್ಮಿಸಿಕೊಡಿ ಅನ್ನೋ ಮನವಿಯನ್ನು ಸ್ಥಳೀಯರು ಇಟ್ಟಿದ್ದರು. ಆದರೆ ಇದ್ಯಾವುದಕ್ಕೂ ಪ್ರತಿಕ್ರಿಯೆ ಸಿಗಲಿಲ್ಲ. ಅಧಿಕಾರಿಗಳು, ಪೊಲೀಸರು ಎಲ್ಲರೂ ಸೇರಿ ಮಂದಿರ ಕಡೆವಿ ಕಾಮಗಾರಿ ಆರಂಭಿಸಿದರು. ಕಾಮಗಾರಿ ಆರಂಭಗೊಂಡ ಬಳಿಕ ಭೌಖ್ನಾಗ್ ದೇವತೆ ಪೂಜೆಗಳು ಸ್ಥಗಿತಗೊಂಡಿತು. ಪವಿತ್ರ ಸ್ಥಳ ನೆಲಸಮಗೊಂಡಿತ್ತು. ಈ ಶಾಪದಿಂದ ಸುರಂದ ಕುಸಿತಗೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಉತ್ತರ ಪ್ರದೇಶ ದೇವರ ನಾಡು. ಮಹಾಪುರುಷರು ತಪಸ್ಸ ಮಾಡಿ ಸಿದ್ದಿ ಪಡೆದುಕೊಂಡ ಜಾಗ. ಪವಿತ್ರ ಜಾಗದಲ್ಲಿನ ಸ್ಥಳೀಯ ಶಕ್ತಿಗಳಿಗೆ ವಂದಿಸಿದರೆ ಶುಭಕಾರ್ಯವಾಗುತ್ತದೆ. ಆದರೆ ಮಂದಿರವನ್ನೇ ನೆಲಸ ಮಾಡಿದ ಕಾರಣ, ಪೂಜಾ ಕೈಂಕರ್ಯಗಳು ನಿಂತು ಹೋಯಿತು. ಸ್ಥಳೀಯರ ನಂಬಿಕೆಯನ್ನು ಕಡೆಗಣಿಸಲಾಯಿತು. ಮತ್ತೊಂದು ಮಂದಿರ ನಿರ್ಮಾಣ ಮಾಡದೇ, ಎಲ್ಲವನ್ನೂ ನೆಲಸಮ ಮಾಡಲಾಯಿತು. ಇದರ ಪರಿಣಾಮ ನಾವೀಗ ನೋಡುತ್ತಿದ್ದೇವೆ ಎಂದು ಭೌಖ್ನಾಗ್ ದೇವತಾ ಮಂದಿರದ ಅರ್ಚಕ 55 ವರ್ಷದ ಗಣೇಶ್ ಪ್ರಸಾದ್ ಬಿಜಲ್ವಾನ್ ಹೇಳಿದ್ದಾರೆ.
ಸುರಂಗ ಕುಸಿದು ಒಳಗೆ ಸಿಲುಕಿದ 40 ಕಾರ್ಮಿಕರು: ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ ಸುರಂಗ