ವಿಶ್ವದ ಟಾಪ್ 10 ಅತೀ ಮಾಲಿನ್ಯ ನಗರದ ಪಟ್ಟಿ ಪ್ರಕಟ, ದೆಹಲಿ ಅಲ್ಲ, ಈ ನಗರಕ್ಕೆ ನಂ.1 ಪಟ್ಟ

Published : Oct 24, 2026, 12:17 PM IST
Delhi-NCR Pollution

ಸಾರಾಂಶ

ವಿಶ್ವದ ಅತೀ ಹೆಚ್ಚು ಮಾಲಿನ್ಯ ನಗರದ ಪಟ್ಟಿಯಲ್ಲಿ ದೆಹಲಿ ಸ್ಥಾನ ಪಡೆದಿಲ್ಲ. ದುರಂತ ಅಂದರೆ ಟಾಪ್ 10 ಪಟ್ಟಿಯಲ್ಲಿ ಭಾರತದ 7 ನಗರಗಳಿವೆ. ಹಾಗಾದರೆ ನಂಬರ್ 1 ಯಾವ ನಗರ? ಈ ಪಟ್ಟಿಯಲ್ಲಿ ಭಾರತದ ಯಾವ ನಗರಗಳಿವೆ.

ನವದೆಹಲಿ (ಅ.24) ದಸರಾ ಹಬ್ಬದ ಬೆನ್ನಲ್ಲೇ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಳ್ಳುತ್ತಿದೆ. ಈಗಾಗಲೇ ಹಲವು ನಿರ್ಬಂಧಗಳು ಜಾರಿಯಾಗಿದೆ. ಇದೀಗ ಅಕ್ಟೋಬರ್ 24ರಂದು ವಿಶ್ವದಲ್ಲಿ ಅತೀ ಹೆಚ್ಚು ಮಾಲಿನ್ಯಕ್ಕೊಳಗಾಗಿರುವ ನಗರಳ ಪಟ್ಟಿ ಪ್ರಕಟಗೊಂಡಿದೆ. ಇಂದು ಅತೀ ಮಾಲಿನ್ಯ ನಗರ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಇಂಡೋನೇಷಿಯಾದ ಸಂಪಿತ್ ನಗರವಿದೆ. ಅತೀ ಹೆಚ್ಚು ಮಾಲಿನ್ಯ ನಗರ ಎಂದೇ ಗುರುತಿಸಿಕೊಂಡಿರುವ ದೆಹಲಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ಭಾರತದ 7 ನಗರಗಳು ಪಟ್ಟಿಯಲ್ಲಿದೆ.

ವಿಶೇಷ ಅಂದರೆ ಟಾಪ್ 25ರ ಪಟ್ಟಿಯಲ್ಲಿ ದೆಹಲಿ ಸ್ಥಾನ ಪಡೆದಿಲ್ಲ. ದೆಹಲಿಯಲ್ಲಿ ಹಲವು ಕಟ್ಟು ನಿಟ್ಟಿನ ಕ್ರಮಗಳು ಇದಕ್ಕೆ ಕಾರಣವಾಗಿದೆ. ಇನ್ನು ಮಂಬೈ 17 ಸ್ಥಾನದಲ್ಲಿದ್ದರೆ, ನವಿ ಮುಂಬೈ 22ನೇ ಸ್ಥಾನದಲ್ಲಿದೆ. ಅದೃಷ್ಠ ಎಂದರೆ ಟಾಪ್ 25 ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ನಗರ ಸ್ಥಾನ ಪಡೆದಿಲ್ಲ.

ಅತೀ ಹೆಚ್ಚು ಮಾಲಿನ್ಯ ನಗರ ಪಟ್ಟಿಯಲ್ಲಿ ಆರಂಭಿಕ ಮೂರು ಸ್ಥಾನಗಳು ಇಂಡೋನೇಷಿಯಾದ ನಗರದ ಪಾಲಾಗಿದೆ. ಸಂಪಿತ್, ಪೊಂತಿಯಾಂಕ್, ಪಲಂಗಕರಾಯ ನಗರ ಟಾಪ್ 3 ವಿಶ್ವದ ಮಾಲಿನ್ಯ ನಗರ ಪಟ್ಟಿಯಲ್ಲಿದೆ. ಟಾಪ್ 10 ಪಟ್ಟಿಯ ಆರಂಭಿಕ 3 ಸ್ಥಾನ ಇಂಡೋನೇಷಿಯಾ ನಗರವಿದ್ದರೆ, ಇನ್ನುಳಿದ 7 ನಗರ ಭಾರತದ್ದಾಗಿದೆ. ದುರಂತ ಅಂದರೆ ಟಾಪ್ 25 ಪಟ್ಟಿಯಲ್ಲೂ ಆರಂಭಿಕ 3 ಸ್ಥಾನ ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ನಗರ ಭಾರತದ್ದಾಗಿದೆ.

ಅತೀ ಹೆಚ್ಚು ಮಾಲಿನ್ಯದ ಟಾಪ್ 10 ಪಟ್ಟಿ

  1. ಸಂಪಿತ್, ಇಂಡೋನೇಷಿಯಾ
  2. ಪೊಂತಿಯಾಂಕ, ಇಂಡೋನೇಷಿಯಾ
  3. ಪಲಂಗಕರಾಯ, ಇಂಡೋನೇಷಿಯಾ
  4. ಗಾಝಿಯಾಬಾದ್, ಉತ್ತರ ಪ್ರದೇಶ, ಭಾರತ
  5. ಪಾನಿಪತ್, ಹರ್ಯಾಣ, ಭಾರತ
  6. ಮೀರತ್, ಉತ್ತರ ಪ್ರದೇಶ, ಭಾರತ
  7. ಫರೀದ್‌ಕೋಟ್, ಪಂಜಾಬ್, ಭಾರತ
  8. ಬತಿಂದಾ, ಪಂಜಾಬ್, ಭಾರತ
  9. ಹಾಪುರ್, ಉತ್ತರ ಪ್ರದೇಶ, ಭಾರತ
  10. ಭೀವಂಡಿ, ಮಹಾರಾಷ್ಟ್ರ, ಭಾರತ

ವಿಶ್ವದಲ್ಲೇ ಹಲವು ನಗರಗಳು ಮಾಲಿನ್ಯ ನಗರಗಳಾಗಿ ಗುರುತಿಸಿಕೊಂಡಿದೆ. ಆದರೆ ಅತೀ ಹೆಚ್ಚು ಮಾಲಿನ್ಯ ನಗರದಲ್ಲಿ ಭಾರತದ ಪ್ರಮುಖ ನಗರಗಳೇ ಸ್ಥಾನ ಪಡೆದಿದೆ. ದೆಹಲಿಯಲ್ಲಿ ಕಠಿಣ ನಿರ್ಬಂಧಗಳು ಜಾರಿಯಾಗಿರುವ ಕಾರಣ ದೆಹಲಿಯಲ್ಲಿ ನಿಧನಾವಾಗಿ ಮಾಲಿನ್ಯ ತಗ್ಗುತ್ತಿದೆ. ಆದರೆ ಇದೀಗ ಆತಂಕ ಹೆಚ್ಚಾಗಲು ಮತ್ತೊಂದು ಕಾರಣವಿದೆ. ದೀಪಾವಳಿ ಹಬ್ಬ ಸಮೀಪಿಸುತ್ತಿದೆ, ಇತ್ತ ಪಂಜಾಬ್ ಹಾಗೂ ಹರಿಯಾಣದಲ್ಲಿ ಬೆಳೆ ಕಟಾವು ಸಮಯವೂ ಹತ್ತಿರಬರುತ್ತಿದೆ. ಹೀಗಾಗಿ ಸಮೀಪದಲ್ಲಿರುವ ದೆಹಲಿಯಲ್ಲಿ ಮತ್ತೆ ಮಾಲಿನ್ಯ ವಿಪರೀತ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

5 ವರ್ಷದ ಬಾಲಕನ ಐಕ್ಯೂ 141! ಈಗಾಗಲೇ 3,000 ಪುಸ್ತಕ ಓದಿ ಮೆನ್ಸಾ, ಇಂಟರ್‌ಟೆಲ್ ಸೇರಿದ ಈ ಪುಟ್ಟ ಜೀನಿಯಸ್ ಯಾರು?
‘ನಮ್ಮೆಲ್ಲರ ಕಣ್ಣಲ್ಲೂ ನೀರು ತುಂಬಿತ್ತು’.. 16 ವರ್ಷಗಳ ಹಿಂದಿನ ಬೆಂಗಳೂರಿನ ನೆನಪನ್ನು ಬಿಚ್ಚಿಟ್ಟ ಪೋಲೆಂಡ್ ಪ್ರಧಾನಿ!