ಖಾದಿ ಬಟ್ಟೆ ಉತ್ಪಾದನೆಗೆ ಬೆಂಬಲ ಅಗತ್ಯ: ಮನ್ ಕೀ ಬಾತ್‌ನಲ್ಲಿ ಮೋದಿ ಮಾತು!

By Suvarna NewsFirst Published Oct 25, 2020, 1:18 PM IST
Highlights

ಪ್ರಧಾನಿ ಮೋದಿ ಮನ್ ಕೀ ಬಾತ್​​​| ದೇಶದ ಜನರನ್ನುದ್ದೇಶಿಸಿ ಮೋದಿ ಮಾತು| ದಸರಾ ಹಬ್ಬದ ಶುಭಾಶಯ ತಿಳಿಸಿದ ಮೋದಿ| ಕೊರೊನಾ ಸಂಕಷ್ಟದಲ್ಲೂ ಹಬ್ಬಗಳು ಬಂದಿವೆ| ರಾಮ್​ಲೀಲಾ ತುಂಬಾ ಆಕರ್ಷಣೀಯವಾಗಿದೆ| ಸ್ವದೇಶಿ ವಸ್ತುಗಳನ್ನೇ ಖರೀದಿಸಿ ಹಬ್ಬ ಆಚರಿಸಿ

ನವದೆಹಲಿ(ಅ.25): ದೇಶವನ್ನುದ್ದೇಶಿಸಿ ತಮ್ಮ 70ನೇ ಮನ್‌ ಕೀ ಬಾತ್‌ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿ ದೇಶವಾಸಿಗಳಿಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ಖಾದಿ ಬಟ್ಟೆ ಉತ್ಪಾದನೆಗೆ ಬೆಂಬಲ ನೀಡುವಂತೆ ಆಗ್ರಹಿಸಿದ್ದಾರೆ.

ಖಾದಿ ಉತ್ಪಾದನೆ ಹಾಗೂ ಬಳಕೆ ಸಂಬಂಧ ಮಾತನಾಡಿದ ಪಿಎಂ ಮೋದಿ 'ಸ್ವದೇಶಿ ವಸ್ತುಗಳನ್ನೇ ಖರೀದಿಸಿ ಹಬ್ಬ ಆಚರಿಸಿ. ಖಾದಿ ಬಟ್ಟೆ ಉತ್ಪಾದನೆಗೆ ಬೆಂಬಲ ಅಗತ್ಯ. ಖಾದಿ ಬಟ್ಟೆ ಸ್ವದೇಶಿ ಬ್ರ್ಯಾಂಡ್​ ಆಗಿದೆ. ಖಾದಿ ಕೇವಲ ಬಟ್ಟೆಯಲ್ಲ, ಅದು ನಮ್ಮ ಪದ್ಧತಿ. ಕೊರೊನಾ ಸಮಯದಲ್ಲಿ ಖಾದಿ ಮಾಸ್ಕ್​ ಬಳಕೆ ಮಾಡಿ, ಸಾವಿರಾರು ಖಾದಿ ಮಾಸ್ಕ್​ ಮಾರಾಟ ಆಗ್ತಿದೆ. ಮಾರ್ಕೆಟ್​ಗಳಲ್ಲಿ ಖಾದಿ ಬಟ್ಟೆ ಖರೀದಿ ಜೋರಾಗಿದೆ. ಮೆಕ್ಸಿಕೋದಲ್ಲಿ ಈಗಲೂ ಖಾದಿ ಉದ್ಯಮ ಇದೆ ಎಂದು ಈ ಉದ್ಯಮ ಬೆಂಬಲಿಸುವಂತೆ ಮೋದಿ ಮತ್ತೆ ನೆನಪಿಸಿದ್ದಾರೆ. 

click me!