
ನವದೆಹಲಿ(ಜು.21) ಮಣಿಪುರದ ಪೈಶಾಚಿಕ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಾನೂನು, ಪೊಲೀಸರು, ಸರ್ಕಾರ, ನಾಗರೀಕ ಸಮಾಜ, ವ್ಯವಸ್ಥೆ ಎಲ್ಲವೂ ಇದ್ದರೂ ಈ ಆಧುನಿಕ ಕಾಲದಲ್ಲಿ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಾ ಬೆತ್ತಲೆ ಮೆರವಣಿ ಮಾಡಿಸಿರುವ ಘಟನೆ ಮಣಿಪುರದಲ್ಲಿ ನಡೆದಿದೆ ಅನ್ನೋದು ಊಹಿಸಲು ಸಾಧ್ಯವಿಲ್ಲ. ಈ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಘಾತ ವ್ಯಕ್ತಪಡಿಸಿದ್ದರು. ದೇಶದ ಬಹುತೇಕ ಎಲ್ಲಾ ಮುಖ್ಯಮಂತ್ರಿಗಳು ಈ ಘಟನೆಯನ್ನು ಖಂಡಿಸಿದ್ದಾರೆ. ಆದರೆ ಮಮತಾ ಬ್ಯಾನರ್ಜಿಯ ತಮ್ಮದೇ ರಾಜ್ಯದಲ್ಲಿ ನಡೆದ ಇದೇ ರೀತಿಯ ನಗ್ನ ಮೆರವಣಿಗೆ ಹಾಗೂ ದೌರ್ಜನ್ಯ ಪ್ರಕರಣ ಬಗ್ಗೆ ಮೌನ ವಹಿಸಿರುವುದು ಬಿಜಿಪೆ ಆಕ್ರೋಶಕ್ಕೆ ಕಾರಣವಾಗಿದೆ.
ಮಮತಾ ಬ್ಯಾನರ್ಜಿ ನಡೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ಬಂಗಾಳದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಣಿಪುರ ಘಟನೆ ಬೆಳಕಿಗೆ ಬಂದ ಎರಡು ವಾರ ಮೊದಲು ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚನಾವಣೆ ನಡೆದಿತ್ತು. ಈ ಚುನಾವಣೆ ಯಾವ ಮಟ್ಟಿಗೆ ಹಿಂಸಾಚಾರದಿಂದ ಕೂಡಿತ್ತು ಅನ್ನೋದು ಜಗಜ್ಜಾಹೀರಾಗಿದೆ. ಮರು ಮತದಾನ ನಡೆದರೂ ಹಿಂಸಾಚಾರ ಮಾತ್ರ ನಿಂತಿರಲಿಲ್ಲ. ಈ ವೇಳೆ ನಡೆದ ಹಿಂಸಾಚಾರದ ಘಟನೆಯನ್ನು ಅಮಿತ್ ಮಾಳವಿಯಾ ವಿವರಿಸಿದ್ದಾರೆ. ಇಷ್ಟೇ ಅಲ್ಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಯಾವುದೇ ನಾಚಿಕೆ ಇಲ್ಲವೆ, ಸಿಎಂ ಆಗಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.
ಮಣಿಪುರ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ, ಓರ್ವನ ಬಂಧನ, ಇತರ ಆರೋಪಿಗಳಿಗೆ ಹುಡುಕಾಟ!
ಜುಲೈ 8ರಂದು ಪಶ್ಚಿಮ ಬಂಗಾಳದ ಗ್ರಾಮ ಪಂಚಾಯಿತ ಚುನಾವಣೆ ನಡೆದಿತ್ತು. ಭಾರಿ ಹಿಂಸಾಚಾರ, ಗಲಭೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿಂಸಾಚಾರದಲ್ಲಿ ಮಹಿಳೆಯೊಬ್ಬರನ್ನು ತೀವ್ರವಾಗಿ ಥಳಿಸಲಾಗಿದೆ. ಬಲಿಕ ಆಕೆಯ ಸೇರೆ, ಒಳಉಡುಪು ಹರಿದು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಲಾಗಿದೆ. ಹೌರಾದ ಪಾಂಚ್ಲಾದ ರಸ್ತೆಯಲ್ಲಿ ಮಹಿಳೆಯನ್ನು ನಗ್ನವಾಗಿ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆ ವೇಳೆ ಮಹಿಳೆ ಮೇಲ ಕಲ್ಲು ತೂರಾಟ ಮಾಡಲಾಗಿದೆ.ಪೊಲೀಸರು ಯಾವುದೇ ಎಫ್ಐಆರ್ ಕೂಡ ದಾಖಲಿಸಲಿಲ್ಲ. ಬಿಜೆಪಿ ಪ್ರತಿಭಟನೆ ಬಳಿಕ ಪೊಲೀಸರು ಕಾಟಾಚಾರಕ್ಕೆ ದೂರು ದಾಖಲಿಸಿಕೊಂಡರು ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.
ಇದೇ ಗ್ರಾಮದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಂಚಾಯಿತ್ ಅಭ್ಯರ್ಥಿ ಹೇಮಂತ ರಾಯ್, ಇತರ ಕ್ರಿಮಿನಲ್ಸ್ ಆಲ್ಫಿ ಎಸ್‌ಕೆ, ಸುಕಮಾಲ್ ಪಂಜಾ, ರಣಬೀರ್ ಪಂಜಾ, ಸಂಜು ದಾಸ್, ನೂರ್್ ಅಲಮ್ ಹಾಗೂ ಇತರ 40 ರಿಂದ 50 ವ್ಯಕ್ತಿಗಳು ಬೆತ್ತಲೆ ಮೆರವಣಿಗೆ ವೇಳೆ ಆಕೆಗೆ ಕಿರುಕುಳ ನೀಡಿದ್ದಾರೆ. ಎದೆಗೆ ಕೈಯಲ್ಲಿ ಹೊಡೆದಿದ್ದಾರೆ. ಓರ್ವ ಮುಖ್ಯಮಂತ್ರಿಯಾಗಿ, ಬಂಗಾಳದ ಗೃಹ ಸಚಿವ ಸ್ಥಾನವನ್ನೂ ಇಟ್ಟುಕೊಂಡಿರುವ ಮಮತಾ ಬ್ಯಾನರ್ಜಿ, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನೋಡಿಕೊಳ್ಳಬೇಕಿತ್ತು. ನಿಮ್ಮ ರಾಜ್ಯದಲ್ಲಿ ನಡೆದ ಘಟನೆ ಮುಚ್ಚಿ ಹಾಕಲು ಪ್ರಯತ್ನಿಸಿದ್ದೀರಿ. ನಿಮ್ಮ ಒಡೆದ ಹೃದಯ ಇಲ್ಲದ ಜಗತ್ತೇ ಉತ್ತಮವಾಗಿದೆ. ಮೊಸಳೆ ಕಣ್ಣೀರು, ನಕಲಿ ಕಾಳಜಿ ಎಲ್ಲವೂ ತೋರ್ಪಡಿಕೆಯಾಗಿದೆ ಎಂದು ಅಮಿತ್ ಮಾಳವಿಯಾ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ