ಭೋಪಾಲ್(ಜು.15): ಪ್ರೀತಿ ಎಲ್ಲವೂ ಹ್ಯಾಪಿ ಎಂಡಿಂಗ್ ಆಗೋಕೆ ಸಾಧ್ಯವೇ ಇಲ್ಲ.. ಒಂದಾ ಹುಡುಗ ಕೈಕೊಡುತ್ತಾನೆ, ಇಲ್ಲ ಹುಡುಗಿ ಕೈಕೊಡುತ್ತಾಳೆ. ಇಬ್ಬರೂ ಜೊತೆಯಾಗಿದ್ದರೆ ದೇವರು ಮೋಸ ಮಾಡುತ್ತಾನೆ. ಪ್ರೀತಯಲ್ಲಿ ಎಲ್ಲವೂ ಕಾಮನ್.
ತಾನು ಪ್ರೀತಿಸಿದ ಹುಡುಗ ತನ್ನ ಕಣ್ಮುಂದೆಯೇ ಮತ್ತೊಬ್ಬ ಯುವತಿಯನ್ನು ಮದುವೆಯಾಗಿ ಸಂಸಾರ ಆರಂಭಿಸೋಕೆ ಹೊರಟಾಗ ಆತನ ಪ್ರೇಮಿ ನೋವಿನಲ್ಲಿ ಮುಳುಗಿದ್ದಾಳೆ.
ಬಿಜೆಪಿ ನಾಯಕನ ಕಾರಿನ ಮೇಲೆ ದಾಳಿ: 100 ರೈತರ ವಿರುದ್ಧ ದೇಶದ್ರೋಹದ ಕೇಸ್!
ಕೊರೋನಾ ಮಧ್ಯೆಯೂ ಮಾಸ್ಕ್ ಹಾಕಿಕೊಂಡು ಕಲ್ಯಾಣ ಮಂಟಪದ ಗೇಟಿನ ಮುಂದೆ ನಿಂತು ಅಸಹಾಕಳಾಗಿ ಕೂಗಿದ್ದಾಳೆ. ಒಮ್ಮೆ ಮಾತಾಡು ಎಂದು ಗೋಗರೆದಿದ್ದಾಳೆ. ತನಗಿಂತ ಎತ್ತರದ ಗೇಟು ದಾಟಲೂ ಆಗದೆ, ಒಳಗೂ ಹೋಗಲಾಗದೆ ಅಳುತ್ತಿದ್ದ ಯುವತಿಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ಸೆರೆಹಿಡಿಯಲಾದ ವೀಡಿಯೊ ಯುವತಿಯೊಬ್ಬಳು ಮದುವೆ ಮಂಟಪದ ಹೊರಗೆ ಅಳುತ್ತಿರುವುದನ್ನು ತೋರಿಸುತ್ತದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರೋ ವೀಡಿಯೊದಲ್ಲಿ, ಮಹಿಳೆ “ಬಾಬು… ಬಾಬು” ಎಂದು ಕೂಗುತ್ತಿರುವುದನ್ನು ಕಾಣಬಹುದು. ತನ್ನ ಪ್ರೇಮಿಯೊಂದಿಗೆ ಮಾತನಾಡಲು ಅವಕಾಶವನ್ನು ಪಡೆಯಲು ಹತಾಶವಾಗಿ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
“ಏಕ್ ಬಾರ್ ಬಾತ್ ಕಾರ್ಲೊ, ಬಾಬು (ದಯವಿಟ್ಟು ಒಮ್ಮೆ ನನ್ನೊಂದಿಗೆ ಮಾತನಾಡಿ),” ಎಂದು ಯುವತಿ ಗೋಗರೆಯುತ್ತಾಳೆ. ಯುವತಿ ಮದುವೆ ಮಂಟಪಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿ ಅವಳನ್ನು ಯಾರೂ ಪ್ರವೇಶದ್ವಾರದಿಂದ ಎಳೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಕೊಟ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಅವಳನ್ನು ಕರೆದೊಯ್ಯುವ ತನಕ ಸುಮಾರು ಅರ್ಧ ಗಂಟೆಯವರೆಗೆ ಗದ್ದಲ ಮುಂದುವರೆಯಿತು. ವರ ತನ್ನೊಂದಿಗೆ ಮೂರು ವರ್ಷಗಳಿಂದ "ಗಂಡ ಮತ್ತು ಹೆಂಡತಿಯಂತೆ" ವಾಸಿಸುತ್ತಿದ್ದಾನೆ. ಈಗ ನನಗೆ ತಿಳಿಸದೆ ಮದುವೆಯಾಗಿದ್ದಾನೆ ಎಂದು ಮಹಿಳೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.