ಬೆಟ್ಟದ ತುದಿಯಲ್ಲಿ ಕಾರ್‌ ರಿವರ್ಸ್‌ ಮಾಡುವ ರೀಲ್‌, 300 ಫೀಟ್‌ ಆಳಕ್ಕೆ ಬಿದ್ದು ಯುವತಿ ಸಾವು ಕಂಡ ವಿಡಿಯೋ ವೈರಲ್‌!

By Santosh NaikFirst Published Jun 18, 2024, 11:36 AM IST
Highlights

ವೀಡಿಯೊದಲ್ಲಿ, 23 ವರ್ಷದ ಶ್ವೇತಾ ದೀಪಕ್ ಸುರ್ವಾಸೆ ಕಾರ್‌ಅನ್ನು ರಿವರ್ಸ್‌ ಮಾಡುತ್ತಿದ್ದರೆ, ಆಕೆಯ ಸ್ನೇಹಿತ 25 ವರ್ಷದ ಸೂರಜ್‌ ಸಂಜೌ ಆಕೆಯ ವಿಡಿಯೋವನ್ನು ರೆಕಾರ್ಡ್‌ ಮಾಡಿದ್ದಾನೆ.

ಸಂಭಾಜಿನಗರ (ಜೂನ್‌ 18): ಸೋಶಿಯಲ್‌ ಮೀಡಿಯಾದಲ್ಲಿನ ರೀಲ್ಸ್‌ ಹುಚ್ಚಿಗೆ 25 ವರ್ಷದ ಯುವತಿಯೊಬ್ಬಳು ದಾರುಣ ಸಾವು ಕಂಡಿದ್ದಾಳೆ. ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಸುಲಿಭಂಜನ್ ಗ್ರಾಮದ ಬೆಟ್ಟದ ಮೇಲೆ ಕಾರ್‌ಅನ್ನು ರಿವರ್ಸ್‌ ಮಾಡುವ ಯತ್ನದಲ್ಲಿ ಎಡವಿದ ಯುವತಿ, 300 ಅಡಿ ಆಳದ ಕಂದಕಕ್ಕೆ ಬಿದ್ದು ಸಾವು ಕಂಡಿದ್ದಾಳೆ. ಈ ಎಲ್ಲಾ ಘಟನೆಯು ಯುವತಿಯ ಸ್ನೇಹಿತನ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಟ್ಟದ ಮೇಲೆ ಆಕೆ ಕಾರ್‌ ರಿವರ್ಸ್‌ ಮಾಡೋದನ್ನ ಯುವಕ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿದ್ದ. ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಸುಲಿಭಂಜನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ಪ್ರವಾಸಕ್ಕೆ ಮೂವರು ಸ್ನೇಹಿತರು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬೆಟ್ಟದ ತುದಿ ಮೇಲೆ ಕಾರು ನಿಲ್ಲಿಸಿ ರೀಲ್ಸ್ ಮಾಡುವ ಪ್ರಯತ್ನ ಮಾಡಿದ್ದರು. ಈ ವೇಳೆ ಕಾರ್‌ನಲ್ಲಿ ಕುಳಿದ ಶ್ವೇತಾ ದೀಪಕ್‌ ಸುರ್ವಾಸೆ ಕಾರ್‌ಅನ್ನು ರಿವರ್ಸ್‌ ತೆಗೆದುಕೊಳ್ಳುವ ಸಾಹಸ ಮಾಡಿದ್ದರು. ಆಕೆ ಯಾವ ರೀತಿಯಲ್ಲಿ ಕಾರ್‌ ರಿವರ್ಸ್ ತೆಗೆದುಕೊಳ್ಳುತ್ತಾರೆ ಅನ್ನೋದನ್ನ ಆಕೆಯ ಸ್ನೇಹಿತ ಸೂರಜ್‌ ಸಂಜೌ ರೆಕಾರ್ಡ್‌ ಮಾಡುತ್ತಿದ್ದ.

ಆದರೆ, ತನ್ನ ಹಿಂದಿದ್ದ ಜಾಗವನ್ನು ಅಂದಾಜು ಮಾಡಲು ವಿಫಲವಾದ ಶ್ವೇತಾ ಇದ್ದ ಕಾರು 300 ಅಡಿ ಆಳವಿದ್ದ ಪ್ರಪಾತಕ್ಕೆ ಬಿದ್ದಿದೆ. ಬರೀ 15 ಸೆಕೆಂಡ್‌ನಲ್ಲೇ ಯುವತಿಯ ಪ್ರಾಣಪಕ್ಷಿ ಹಾರಿಹೋಗಿದೆ. ಲೈವ್ ಆ್ಯಕ್ಸಿಡೆಂಟ್ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Latest Videos

ಸೋಮವಾರ ಮಧ್ಯಾಹ್ನದ ವೇಳೆಗೆ ಮೂವರು ಸ್ನೇಹಿತರು ದತ್ತ ಮಂದಿರಕ್ಕೆ ಪ್ರವಾಸಕ್ಕೆ ಬಂದಿದ್ದರು. 2 ಗಂಟೆಯ ವೇಳೆ ಕಾರ್‌ ಏರಿದ್ದ ಶ್ವೇತಾ, ಕಾರ್‌ಅನ್ನು ನಿಧಾನವಾಗಿ ರಿವರ್ಸ್‌ ಮಾಡುವ ಪ್ರಯತ್ನ ಮಾಡಿದ್ದರು.  ಇನ್ನೇನು ಪ್ರಪಾತದಿಂದ 50 ಮೀಟರ್‌ ದೂರವಿದ್ದರೂ, ಶ್ವೇತಾ ಕಾರ್‌ಅನ್ನು ರಿವರ್ಸ್‌ ಮಾಡುತ್ತಿರುವುದನ್ನು ಗಮನಿಸಿದ. ಶ್ವೇತಾ ಕಾರ್‌ನ ವೇಗವನ್ನು ಹೆಚ್ಚಳ ಮಾಡುವಾಗ, ಕಾರ್‌ನ ವೇಗ ಕಡಿಮೆ ಮಾಡುವಂತೆ ಸ್ನೇಹಿತ ಕೂಗಾಡುತ್ತಿದ್ದ. ಕಾರ್‌ ಹಿಂದಕ್ಕೆ ಹೋಗುವಾಗ 'ಕ್ಲಚ್‌... ಕ್ಲಚ್‌... ಕ್ಲಚ್‌..' ಎಂದು ಕೂಗುತ್ತಾ ಸ್ನೇಹಿತ ಕಾರ್‌ನ ಬಳಿ ಓಡಿ ಬಂದು ಆಕೆಯನ್ನು ತಡೆಯುವ ಹಂತದಲ್ಲಿಯೇ ಕಾರ್‌ ಪ್ರಪಾತಕ್ಕೆ ಬಿದ್ದಿದ್ದು, ಸ್ಥಳದಲ್ಲಿಯೇ ಶ್ವೇತಾ ದೀಪಕ್‌ ಸಾವು ಕಂಡಿದ್ದಾರೆ.

ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಕಸ್ಟಡಿ ಇಂದು ಅಂತ್ಯ!

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು 300 ಅಡಿ ಎತ್ತರದ ಬಂಡೆಯ ಕೆಳಗೆ ಉರುಳಿ ಕಮರಿಗೆ ಬಿದ್ದಿದೆ. ದೃಶ್ಯಗಳು ಕಂದಕದಲ್ಲಿ ವಾಹನದ ಅವಶೇಷಗಳನ್ನು ಬಿದ್ದಿದ್ದು ದಾಖಲಾಗಿದೆ. ಸ್ನೇಹಿತರು ಸುಲಿಭಂಜನದ ದತ್ತಾತ್ರೇಯ ದೇವಸ್ಥಾನದ ಪ್ರದೇಶಕ್ಕೆ ಭೇಟಿ ನೀಡಿದ್ದರು ಮಳೆಗಾಲದಲ್ಲಿ, ಸುಲಿಭಂಜನ ಬೆಟ್ಟಗಳು ಸುಂದರವಾಗಿ ಕಾಣುತ್ತವೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಣೆ ಮಾಡಲು ಸಾಕಷ್ಟು ಮಂದಿ ಪ್ರವಾಸಿಗರು ಆಗಮಿಸುತ್ತಾರೆ.

ಹೆತ್ತ ಮೂವರು ಗಂಡು ಮಕ್ಕಳನ್ನ ಬೀದಿಪಾಲು ಮಾಡಿ 25 ವರ್ಷದ ಯುವಕನೊಂದಿಗೆ ತಾಯಿ ಜೂಟ್‌!

रील्स बनविताना सावधानी बाळगा. रीलच्या नादात कार रिव्हर्स घेताना ब्रेक ऐवजी पाय एक्स्लेटरवर पडल्याने कार थेट दरीत कोसळून तरुणीचा मृत्यू! छत्रपती संभाजीनगर जवळील शुलीभंजन येथील घटना. pic.twitter.com/rkzbFY6kL4

— Nandkishor Patil (@Nandupatil67)

 

click me!