ಅಂಬಾನಿ ಕುಟುಂಬಸ್ಥರ ಪುಣ್ಯಸ್ನಾನದ ವಿಡಿಯೋ ಮಾಡಿ ಮಹಿಳೆಯ ಹೇಳಿದ ಮಾತು ಕೇಳಿ ಎಲ್ಲರೂ ಶಾಕ್!

Published : Feb 15, 2025, 07:37 PM ISTUpdated : Feb 15, 2025, 07:46 PM IST
ಅಂಬಾನಿ ಕುಟುಂಬಸ್ಥರ ಪುಣ್ಯಸ್ನಾನದ  ವಿಡಿಯೋ ಮಾಡಿ ಮಹಿಳೆಯ ಹೇಳಿದ ಮಾತು ಕೇಳಿ ಎಲ್ಲರೂ ಶಾಕ್!

ಸಾರಾಂಶ

ಮುಕೇಶ್ ಅಂಬಾನಿ ಕುಟುಂಬ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ವಿಡಿಯೋ ವೈರಲ್ ಆಗಿದೆ. ಒಬ್ಬ ಮಹಿಳೆ ದೂರದಿಂದಲೇ ವಿಡಿಯೋ ಮಾಡಿದ್ದು, ಆಕೆ ಹೇಳಿದ ಮಾತುಗಳಿಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಜನರು ಬರುತ್ತಿದ್ದಾರೆ. ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳ  ತ್ರಿವೇಣಿ ಸಂಗಮದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಪಾವನರಾಗುತ್ತಿದ್ದಾರೆ. ದೇಶದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬಸ್ಥರು ಮಹಾಕುಂಭದಲ್ಲಿ ಭಾಗಿಯಾಗಿ ತೀರ್ಥಸ್ನಾನ ಮಾಡಿದ್ದಾರೆ. ಮುಕೇಶ್ ಅಂಬಾನಿ ಕುಟುಂಬಸ್ಥರು ಮಹಾಕುಂಭ ಮೇಳದಲ್ಲಿ ಭಾಯಾಗಿರೋ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಶ್ರೀಮಂತ ಕುಟುಂಬವಾಗಿರುವ ಕಾರಣ ವಿಐಪಿ ಭದ್ರತೆಯನ್ನು ನೀಡಲಾಗಿತ್ತು. ಹಾಗಾಗಿ ಅಂಬಾನಿ ಕುಟುಂಬಸ್ಥರ  ಬಳಿ ತೆರಳಲು ಜನ ಸಾಮಾನ್ಯರಿಗೆ ಅವಕಾಶ ಇರಲಿಲ್ಲ. ಹೀಗಾಗಿ ದೂರದಿಂದಲೇ ಸಾಮಾನ್ಯ ಜನರು ಅಂಬಾನಿ  ಕುಟುಂಬಸ್ಥರ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದುಕೊಂಡಿದ್ದಾರೆ. 

ಮಹಿಳೆಯೊಬ್ಬರು ದೂರದಿಂದಲೇ ಅಂಬಾನಿ ಕುಟುಂಬಸ್ಥರ ತೀರ್ಥಸ್ನಾನದ  ವಿಡಿಯೋ ಸೆರೆಹಿಡಿದುಕೊಂಡಿದ್ದಾರೆ.  ನಂತರ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮುಕೇಶ್ ಅಂಬಾನಿ, ತಾಯಿ ಕೋಕೊಲಾಬೆನ್, ಮಕ್ಕಳಾದ ಆಕಾಶ್, ಅನಂತ್, ಸೊಸೆಯಂದಿರಾದ ಶ್ಲೋಕಾ, ರಾಧಿಕ ಮತ್ತು ಮಕ್ಕಳು ಪೃಥ್ವಿ ಮತ್ತು ವೇದ ಪುಣ್ಯಸ್ನಾನದಲ್ಲಿ ಭಾಗಿಯಾಗಿದ್ದರು. ಇವರ ಜೊತೆಯಲ್ಲಿ ಮುಖೇಶ್ ಅಂಬಾನಿ ಅವರ ಸಹೋದರಿಯರಾದ ದೀಪ್ತಿ ಸಲ್ಗೋಕರ್ ಮತ್ತು ನೀನಾ ಕೊಠಾರಿ, ಅವರ ಅತ್ತೆ ಪೂರ್ಣಿಮಾಬೆನ್ ದಲಾಲ್ ಮತ್ತು ಅವರ ಅತ್ತಿಗೆ ಮಮತಾಬೆನ್ ದಲಾಲ್ ಅವರು ಕುಟುಂಬದೊಂದಿಗೆ ಮಹಾಕುಂಭ ಮೇಳಕ್ಕೆ ಆಗಮಿಸಿದ್ದರು.

ಮಹಾಕುಂಭ ಮೇಳದಲ್ಲಿ ನನಗೆ ಆಶೀರ್ವಾದ ಸಿಕ್ಕಿದೆ. ದೈವಿಕ ಅನುಭವವಾಗಿದೆ. ನಾನು ಅಂಬಾನಿಯವರಂತೆ ಪುಣ್ಯಸ್ನಾನ ಮಾಡಿದ್ದೇನೆ ಎಂದು ಮಹಿಳೆ ವ್ಯಂಗ್ಯ ಮಾಡಿದ್ದಾರೆ. ಅಂಬಾನಿ ಕುಟುಂಬಸ್ಥರು ನದಿಯಲ್ಲಿ ಬಿಟ್ಟ ಹಣ್ಣುಗಳು ನಮ್ಮ ಬಳಿಗೆ ಬಂದಿವೆ ಎಂದು ಅವುಗಳನ್ನು ತೋರಿಸುತ್ತಾರೆ. ಹಾಗಾಗಿ ನಾವು  ಅಂಬಾನಿಯವರಂತೆ ಶ್ರೀಮಂತರಾಗುತ್ತೆ ಎಂದು  ಹೇಳಿ ಮಹಿಳೆ ನಕ್ಕಿದ್ದಾರೆ. ನಂತರ ಸುತ್ತಲೂ ನಿಂತಿರುವ ಜನರಿಗೆ ನಮಸ್ಕರಿಸಿ, ಜೋರಾಹ ಹರಹರ ಮಹಾದೇವ್ ಎಂದು ಮಹಿಳೆ ಕೂಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋಗೆ 1  ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಅಂಬಾನಿ ಕುಟುಂಬ ನದಿಯಲ್ಲಿ ಬಿಟ್ಟ ಹಣ್ಣು ಸಿಕ್ಕಿದ್ದಕ್ಕೆ ಶ್ರೀಮಂತರಾಗುವ ವಿಶ್ವಾಸ ಮಹಿಳೆಯ ಬಗ್ಗೆ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಿಮಗೆ ಕುಬೇರ ದೇವತೆಗಳ ಆಶೀರ್ವಾದ ಸಿಕ್ಕಿದೆ. ಖಂಡಿತ ನೀವು ಶ್ರೀಮಂತೆಯಾಗುವ  ಸಾಧ್ಯತೆ ಇದೆ  ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ದಯವಿಟ್ಟು ಆ  ಹಣ್ಣನನ್ನ ನದಿಗೆ ಎಸೆಯಿರಿ. ಇಲ್ಲವಾದ್ರೆ ನಿಮ್ಮ ಇಡೀ ಆಸ್ತಿ ಅಂಬಾನಿ ಕುಟುಂಬದ ಪಾಲಾಗಬಹುದು  ಎಂದು ತಮಾಷೆ ಮಾಡಿದ್ದಾರೆ.  ಒಮ್ಮೆ ಆಪಲ್ ಕಚ್ಚಿ ನೋಡಿ, ಅದರಲ್ಲಿ ಚಿನ್ನದ  ತುಣುಕು ಸಿಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 3000 ಕೋಟಿ ಸಾಮ್ರಾಜ್ಯ, ಕೋಟಿಗಟ್ಟಲೆ ವಂಚನೆ, 5 ವರ್ಷ ಜೈಲು, ಮಹಾಕುಂಭಮೇಳದಲ್ಲಿ ಸಂತ!

ಬುಧವಾರ 2 ಕೋಟಿ ಭಕ್ತರಿಂದ ಪುಣ್ಯಸ್ನಾನ
ಮಹಾಕುಂಭಮೇಳದಲ್ಲಿ ಮಾಘಿ ಪುಣ್ಯ ನಿಮಿತ್ತ ನಡೆದ ಮಾಘಿ ಪೂರ್ಣಿಮೆ ಪುಣ್ಯ ಸ್ನಾನ ಸಂಪನ್ನಗೊಂಡಿದ್ದು, ಬುಧವಾರ 2 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಬುಧವಾರ ಮುಂಜಾನೆಯಿಂದಲೇ ಪುಣ್ಯಸ್ನಾನ ಆರಂಭವಾಗಿತ್ತು. ಕೋಟ್ಯಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮೌನಿ ಅಮಾವಾಸ್ಯೆಯಿಂದು ನಡೆದ ರೀತಿಯಲ್ಲಿ ಯಾವುದೇ ಗೊಂದಲಗಳು, ಅಹಿತಕರ ಘಟನೆಗಳು ನಡೆಯಕೂಡದು ಎನ್ನುವ ಕಾರಣಕ್ಕೆ ಉತ್ತರ ಪ್ರದೇಶ ಸರ್ಕಾರ ಮುಂಜಾಗ್ರತಾ ಕ್ರಮ ವಹಿಸಿತ್ತು. ಸಿಎಂ ಯೋಗಿ ಆದಿತ್ಯನಾಥ್‌ ಅವರು ಲಖನೌನ ವಾರ್‌ ರೂಂನಿಂದಲೇ ಕಾರ್ಯಕ್ರಮದ ಆಯೋಜನೆ ಪರಿಶೀಲಿಸಿದ್ದರು. ಭಕ್ತರ ಸುರಕ್ಷತೆಗಾಗಿ ಸರ್ಕಾರ ’ಆಪರೇಷನ್ ಚತುರ್ಭುಜ’ ಹೆಸರಿನ ಕಾರ್ಯಾಚರಣೆ ಕೂಡ ಕೈಗೊಂಡಿತು. ಒಟ್ಟಿನಲ್ಲಿ ಯಾವುದೇ ಗೊಂದಲಗಳಿರದೇ ಸುಸೂತ್ರವಾಗಿ ಮಾಘಿ ಪುರ್ಣಿಮೆ ಪುಣ್ಯಸ್ನಾನ ನಡೆದಿದ್ದು, ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ಓಂ ಬಿರ್ಲಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: Gold Silver Price Today - ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?