ಬ್ಯೂಟಿ ಪಾರ್ಲರಲ್ಲಿ ಹೇರ್‌ವಾಷ್‌ ವೇಳೆ ಮಹಿಳೆಗೆ ಪಾರ್ಶ್ವವಾಯು..!

By Kannadaprabha News  |  First Published Nov 3, 2022, 6:39 AM IST

ಬ್ಯೂಟಿ ಪಾರ್ಲರ್‌ನಲ್ಲಿ ಕತ್ತನ್ನು ಹಿಂದಕ್ಕೆ ಬಾಗಿಸಿ ಬೇಸಿನ್‌ನಲ್ಲಿಟ್ಟು ತಲೆಗೂದನ್ನು ತೊಳೆಯಲಾಗುತ್ತದೆ. ಕೆಲವೊಮ್ಮೆ ಒತ್ತಡದಿಂದಾಗಿ ಕತ್ತಿನ ಅಪಧಮನಿಗೆ ಏಟು ಬಿದ್ದು, ಅದು ರಕ್ತ ಹೆಪ್ಪುಗಟ್ಟುವಿಕೆ ಅಥವಾ ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ. 


ಹೈದರಾಬಾದ್‌(ನ.03):  ತಲೆಕೂದಲು ತೊಳೆಸಲು ಬ್ಯೂಟಿ ಪಾರ್ಲರ್‌ಗೆ ತೆರಳಿದ್ದ ಮಹಿಳೆಯೊಬ್ಬಳು ಪಾರ್ಶ್ವವಾಯುಗೆ ತುತ್ತಾದ ಆಘಾತಕಾರಿ ಘಟನೆ ಹೈದ್ರಾಬಾದ್‌ನಲ್ಲಿ ಸಂಭವಿಸಿದೆ. ‘ಬ್ಯೂಟಿಪಾರ್ಲರ್‌ ಸ್ಟ್ರೋಕ್‌ ಸಿಂಡ್ರೋಮ್‌’ ಎಂದು ಕರೆಯುವ ಈ ಬೆಳವಣಿಗೆ ಬ್ಯೂಟಿಪಾರ್ಲರ್‌ನಲ್ಲಿ ನೀಡುವ ಸೌಲಭ್ಯಗಳ ಕುರಿತು ಚರ್ಚೆಗೆ ನಾಂದಿ ಹಾಡಿದೆ.

ಏನಿದು ಸಮಸ್ಯೆ?

Latest Videos

undefined

ಬ್ಯೂಟಿ ಪಾರ್ಲರ್‌ನಲ್ಲಿ ಕತ್ತನ್ನು ಹಿಂದಕ್ಕೆ ಬಾಗಿಸಿ ಬೇಸಿನ್‌ನಲ್ಲಿಟ್ಟು ತಲೆಗೂದನ್ನು ತೊಳೆಯಲಾಗುತ್ತದೆ. ಕೆಲವೊಮ್ಮೆ ಒತ್ತಡದಿಂದಾಗಿ ಕತ್ತಿನ ಅಪಧಮನಿಗೆ ಏಟು ಬಿದ್ದು, ಅದು ರಕ್ತ ಹೆಪ್ಪುಗಟ್ಟುವಿಕೆ ಅಥವಾ ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ. ಇದನ್ನೇ ಬ್ಯೂಟಿಪಾರ್ಲರ್‌ ಸ್ಟ್ರೋಕ್‌ ಸಿಂಡ್ರೋಮ್‌ ಎನ್ನಲಾಗುತ್ತದೆ. ಇದರಿಂದಾಗಿ ತಕ್ಷಣ ತಲೆಸುತ್ತುವುದು, ವಾಕರಿಕೆ ಅಥವಾ ವಾಂತಿಯಾಗುವುದು ಮೊದಲಾದ ಆರಂಭಿಕ ಲಕ್ಷಣಗಳು ಕಂಡುಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ.

ಹೆಚ್ಚು ಉಪ್ಪು ತಿನ್ನೋ ಅಭ್ಯಾಸದಿಂದ ಕಾಡುತ್ತೆ ಬ್ರೈನ್ ಸ್ಟ್ರೋಕ್

ಮಹಿಳೆಯು ತಲೆಗೂದನ್ನು ತೊಳೆದುಕೊಂಡ ಬಳಿಕ ಆಕೆಗೂ ಈ ಲಕ್ಷಣಗಳು ಕಂಡುಬಂದಿದ್ದು, ಮರುದಿನ ಆಕೆಗೆ ಪಾರ್ಶ್ವವಾಯುವಿನಿಂದಾಗಿ ನಡೆದಾಡಲು ಕಷ್ಟವಾಗುತ್ತಿತ್ತು. ಇದು ಅತ್ಯಂತ ವಿರಳ ಪ್ರಕರಣಗಳಲ್ಲಿ ಒಂದಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಬ್ಯೂಟಿಪಾರ್ಲರ್‌ ಸಿಂಡ್ರೋಮ್‌ ಎಂಬ ಪದವನ್ನು ಮೊಟ್ಟ ಮೊದಲು ಡಾ.ಮೈಕಲ್‌ ವೈಂಟ್ರಾಬ್‌ 1993ರಲ್ಲಿ ಹುಟ್ಟುಹಾಕಿದ್ದರು.
 

click me!