
ಮುಂಬೈ: ನೈಜ ಪ್ರೀತಿಗೆ ಸಾವಿಲ್ಲ ಎನ್ನುವ ಮಾತಿಗೆ. ಅದಕ್ಕೆ ಸಾಕ್ಷಿ ಎನ್ನುವಂತೆ ಮಹಾರಾಷ್ಟ್ರದ 20 ವರ್ಷದ ಯುವತಿ ತನ್ನ ತಂದೆ ಮತ್ತು ಸಹೋದರನಿಂದ ಹತ್ಯೆಯಾದ ಪ್ರಿಯಕರ ಮೃತದೇಹವನ್ನೇ ಸಿಂದೂರ ಹಚ್ಚಿಕೊಂಡು ಮದುವೆಯಾಗಿದ್ದಾಳೆ. ಮಾತ್ರವಲ್ಲದೇ ಆತನ ಮನೆಯಲ್ಲಿಯೇ ಬದುಕುವ ಪ್ರತಿಜ್ಞೆ ಮಾಡಿದ್ದಾಳೆ.
ಈ ಘಟನೆಗೆ ಸಾಕ್ಷಿಯಾಗಿರುವುದು ನಾಂದೇಡ್ ಜಿಲ್ಲೆ. 20 ವರ್ಷದ ಅಂಚಲ್ ಎನ್ನುವ ಯುವತಿಗೆ ತನ್ನ ಸಹೋದರನ ಮೂಲಕ ಸಕ್ಷಮ್ ಟಾಟೆ ಎಂಬಾತನ ಪರಿಚಯವಾಗಿತ್ತು. ಇಬ್ಬರ ನಡುವೆ ಆತ್ಮೀಯತೆ ಬೆಳೆದು ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಇಬ್ಬರೂ ಬೇರೆ ಬೇರೆ ಜಾತಿಯವರಾದ ಕಾರಣ ಯುವತಿ ಕುಟುಂಬಸ್ಥರು ಇದನ್ನು ವಿರೋಧಿಸಿದ್ದರು. ಆದರೆ ಆಕೆ ಸಕ್ಷಮ್‌ನನ್ನು ಬಿಟ್ಟಿರಲಿಲ್ಲ. ಈ ನಡುವೆ ಅಂಚಲ್ ಆತನನ್ನು ಮದುವೆಯಾಗುವುದಕ್ಕೆ ನಿರ್ಧರಿಸಿದ್ದಾಳೆ ಎಂದು ತಿಳಿದು ಸಿಟ್ಟಿಗೆದ್ದ ಆಕೆಯ ತಂದೆ ಮತ್ತು ಸಹೋದರ ಥಳಿಸಿ, ಗುಂಡು ಹಾರಿಸಿ, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ತನ್ನ ಪ್ರೇಮಿಯ ಸಾವಿನಿಂದ ನೊಂದ ಯುವತಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಅಂಚಲ್ ಅಂತಿಮ ಕಾರ್ಯಕ್ರಮದ ವೇಳೆ ತನ್ನ ಹಣೆಗೆ ಸಿಂದೂರ ಹಚ್ಚಿಕೊಂಡು ಮದುವೆಯಾಗಿದ್ದಾಳೆ. ಮಾತ್ರವಲ್ಲದೇ ಜೀವನಪರ್ಯಂತ ಸಕ್ಷಮ್ ಮನೆಯಲ್ಲಿಯೇ ಆತನ ಪತ್ನಿಯಾಗಿ ಬದುಕುವ ಪ್ರತಿಜ್ಞೆ ಮಾಡಿದ್ದಾಳೆ. ಅಲ್ಲದೇ ಪ್ರಿಯಕರನನ್ನು ಕೊಂದವರಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ