
ನವದೆಹಲಿ (ಮಾ.5): ಜನರಿಗೆ ನೀಡಿರುವ ಭರವಸೆಗಳು ಹೋಗಲಿ, ಕನಿಷ್ಠ ದೇಶದ ಗಡಿ ಕಾಯುವ ಸೈನಿಕ ಭಯೋತ್ಪಾದಕ ದಾಳಿಯಲ್ಲಿ ಮೃತನಾದಾಗ ಆತನ ಕುಟುಂಬಕ್ಕೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ರಾಜಸ್ಥಾನದ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗ್ಲೆಹೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ವೀರಮರಣವನ್ನಪ್ಪಿದ್ದ ರೋಹಿತೇಶ್ ಲಾಂಬಾ ಅವರ ಪತ್ನಿಯ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ನಡೆಸಿದೆ. ರೋಹಿತೇಶ್ ಲಾಂಬಾ ಮೃತರಾದಾಗ ರಾಜಸ್ಥಾನ ಸರ್ಕಾರ ಬೇಕಾದಷ್ಟು ಭರವಸೆಗಳನ್ನು ನೀಡಿತ್ತು. ಆದರೆ, ಇದರಲ್ಲಿ ಬಹುತೇಕ ಭರವಸೆಗಳು ಈಡೇರಿಲ್ಲ. ಈ ಕುರಿತಾಗಿ ರೋಹಿತೇಶ್ ಲಾಂಬಾ ಅವರ ಪತ್ನಿ ಹಾಗೂ ಇತರ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯ ಮೇಲೆ ಹಾಗೂ ಇತರ ಮಹಿಳಾ ಪ್ರತಿಭಟನಾಕಾರರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿದ್ದ ಲಾಂಬಾ ಅವರ ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಳುತ್ತಲೇ ಆಕೆ ಘಟನೆಯನ್ನು ವಿವರಿಸಿದ ವಿಡಿಯೋ ಟ್ವಿಟರ್‌ನಲ್ಲಿ ಬಿತ್ತರವಾಗಿದೆ. 'ನಮ್ಮ ಮೇಲೆ ಹಲ್ಲೆ ಮಾಡಿದ್ದು ಏಕೆ? ನಮಗೆ ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ನಾವು ಪ್ರತಿಭಟನೆ ಮಾಡಿದ್ದೆವು' ಎಂದು ಅಳುತ್ತಲೇ ಹೇಳಿದ್ದಾರೆ.
ಪ್ರತಿಭಟನಾಕಾರರೊಂದಿಗೆ ಬಂದಿದ್ದ ಬಿಜೆಪಿ ಸಂಸದ ಕಿರೋರಿಲಾಲ್ ಮೀನಾ ಅವರು ಘಟನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ನಿನ್ನೆ ಪ್ರತಿಭಟನಾಕಾರರೊಂದಿಗೆ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದರು. ಮೆಮೊ ಹಸ್ತಾಂತರಿಸಿದ ನಂತರ, ಪುಲ್ವಾಮಾ ಹುತಾತ್ಮರ ಪತ್ನಿಯರು ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ನಿವಾಸಕ್ಕೆ ಬಂದಾಗ, ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದಾಳಿಯ ನಂತರ ರಾಜ್ಯ ಸರ್ಕಾರವು ತಮಗೆ ನೀಡಿದ ಭರವಸೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಮೂವರು ಪುಲ್ವಾಮಾ ಹುತಾತ್ಮರ ಪತ್ನಿಯರು ಶಾಹಿದ್ ಸ್ಮಾರಕದಲ್ಲಿ ಈ ಹಿಂದೆ ಧರಣಿ ನಡೆಸಿದ್ದರು. ರಾಜಸ್ಥಾನದ ಸೈನಿಕ ಕಲ್ಯಾಣ್ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ಬುಧವಾರ ಮಹಿಳೆಯರೊಂದಿಗೆ ಮಾತುಕತೆ ನಡೆಸಿದ್ದರು.
Pulwama attack ವ್ಯವಸ್ಥಿತ ಪಿತೂರಿ ಎಂದ ಮುಖ್ಯ ಶಿಕ್ಷಕ; ಬಿಜೆಪಿ ಕೆಂಡಾಮಂಡಲ
“ನನ್ನ ಪತಿ ಹುತಾತ್ಮನಾದಾಗ ನಮ್ಮನ್ನು ಭೇಟಿ ಮಾಡಿದ ಮಂತ್ರಿಗಳು, ಮಾಧ್ಯಮದವರು, ನಾವೆಲ್ಲರೂ ಅವರನ್ನು ಹೊಗಳುವುದನ್ನು ನೋಡಿದ್ದೇವೆ. ದೇಶಕ್ಕಾಗಿ ಹೋರಾಡಲು ನಮ್ಮ ಮಕ್ಕಳನ್ನೂ ಕಳುಹಿಸಬೇಕು ಎಂದು ಯೋಚನೆ ಮಾಡಿದ್ದೆವ. ಆದರೆ, ಈಗ ನಿಮ್ಮ ಕೈಜೋಡಿಸಿ ಹೇಳುತ್ತಿದ್ದೇವೆ. ನಮ್ಮ ಮಕ್ಕಳನ್ನು ನಾವು ಎಂದಿಗೂ ಸೇನೆಗೆ ಕಳಿಸೋದಿಲ್ಲ. ಯಾಕೆಂದರೆ. ಇಂದು ನಮ್ಮೊಂದಿಗೆ ಯಾರೂ ಇಲ್ಲ. ಸರ್ಕಾರ ನಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ. ನಮ್ಮ ಹೋರಾಟವನ್ನು ಹತ್ತಿಕ್ಕಲು ಪೊಲೀಸರನ್ನು ಕಳಿಸುತ್ತದೆ. ನಮ್ಮ ದನಿಯನ್ನೇ ಕೇಳದಿರುವಾಗ, ಸರ್ಕಾರ ನಮ್ಮನ್ನು ವೀರಾಂಗನೆಯರು ಎಂದು ಕರೆದರೆ ಏನು ಪ್ರಯೋಜನ' ಎಂದು ಹುತಾತ್ಮ ಸೈನಿಕರ ಪತ್ನಿ ಮಂಜು ತಿಳಿಸಿದ್ದಾರೆ.
ಪುಲ್ವಾಮಾದಲ್ಲಿ ಗುಂಡಿನ ದಾಳಿ: ಉಗ್ರರ ಗುಂಡಿಗೆ ಮತ್ತೊಬ್ಬರು ಕಾಶ್ಮೀರಿ ಪಂಡಿತರ ಬಲಿ
ಈ ತಿಂಗಳ ಆರಂಭದಲ್ಲಿ ಗಲ್ವಾನ್ ಕಣಿವೆಯ ಹುತಾತ್ಮರ ತಂದೆಯನ್ನು ವೈಶಾಲಿ ಜಿಲ್ಲೆಯ ಜಂಡಾಹ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅವರ ಹಳ್ಳಿಯ ಚಕ್ಫತಾದಲ್ಲಿ ಸರ್ಕಾರಿ ಜಮೀನಿನಲ್ಲಿ ತನ್ನ ಮಗನ ಸ್ಮಾರಕವನ್ನು ನಿರ್ಮಿಸುವ ಮೂಲಕ "ಗ್ರಾಮ ರಸ್ತೆಯನ್ನು ಅತಿಕ್ರಮಿಸಿದ" ಆರೋಪದ ಮೇಲೆ ಥಳಿಸಿ, ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಬಳಿಕ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಆದರೂ ಈ ಘಟನೆ ವ್ಯಾಪಕ ಖಂಡನೆಗೆ ಗುರಿಯಾಗಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ