ದೇಶದಲ್ಲಿ ಚಿರತೆಗಳ ಸಂಖ್ಯೆ ಶೇ.75-90 ರಷ್ಟು ಕುಸಿತ!

By Kannadaprabha News  |  First Published Feb 9, 2020, 7:49 AM IST

ದೇಶದಲ್ಲಿ ಚಿರತೆಗಳ ಸಂಖ್ಯೆ ಶೇ.75-90ರಷ್ಟುಕುಸಿತ!| ಸೆಂಟರ್‌ ಫಾರ್‌ ವೈಲ್ಡ್‌ ಲೈಫ್‌ ಸ್ಟಡೀಸ್‌ ವರದಿ


ನವದೆಹಲಿ[ಫೆ.09]: ಚಿರತೆಗಳ ಸಂತತಿ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ ಎಂಬ ಆತಂಕಕಾರಿ ಸಂಗತಿ ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ. ಸೆಂಟರ್‌ ಫಾರ್‌ ವೈಲ್ಡ್‌ ಲೈಫ್‌ ಸ್ಟಡೀಸ್‌ ನಡೆಸಿರುವ ಅಧ್ಯಯನದ ಪ್ರಕಾರ ಕಳೆದ 120 ರಿಂದ 200 ವರ್ಷಗಳ ಹಿಂದಿನ ಸಂಖ್ಯೆಗೆ ಹೋಲಿಸಿದರೆ ಚಿರತೆಗಳ ಸಂಖ್ಯೆ ಭಾರತದಲ್ಲಿ ಶೇ.75ರಿಂದ ಶೇ.90ರಷ್ಟುಇಳಿಕೆ ಕಂಡಿದೆ.

ಅದರಲ್ಲೂ ಚಿರತೆಗಳಲ್ಲಿ ಉಪ ಜಾತಿಗಳಾದ ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಚಿರತೆಗಳು, ದಖ್ಖನ್‌ ಪ್ರಸ್ತಭೂಮಿ ಮತ್ತು ಅರೆ ಮಲೆನಾಡು ಪ್ರದೇಶದಲ್ಲಿ ಕಂಡು ಬರುವ ಚಿರತೆಗಳು, ಶಿವಾಲಿಕ್‌ ಬೆಟ್ಟದ ಸಾಲುಗಳಲ್ಲಿ ಕಂಡು ಬರುವ ಚಿರತೆಗಳು ಮತ್ತು ಉತ್ತರ ಭಾರತದ ತೆರಾಯ್‌ ಪ್ರದೇಶದಲ್ಲಿ ಕಂಡು ಬರುವ ಚಿರತೆಗಳ ಸಂತತಿ ಅಪಾಯದಲ್ಲಿದೆ. ಒಂದು ವೇಳೆ ಚಿರತೆಗಳ ಸಂಖ್ಯೆ ಇದೇ ರೀತಿಯಲ್ಲಿ ಇಳಿಕೆ ಕಂಡರೆ ಭಾರತದಲ್ಲಿ ಹುಲಿಗೆ ಬಂದ ಸ್ಥಿತಿಯೇ ಚಿರತೆಗಳಿಗೂ ಬರಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

Tap to resize

Latest Videos

ಭಾರತದೆಲ್ಲೆಡೆಯಿಂದ ಸಂಗ್ರಹಿಸಲಾದ ಚಿರತೆಗಳ ಆನುವಂಶಿಕ ದತ್ತಾಂಶಗಳನ್ನು ಆಧರಿಸಿ ಚಿರತೆಗಳ ಸಂಖ್ಯೆಗಳ ಅನುಪಾತ ಹಾಗೂ ಅವು ಅವಸಾನ ಹೊಂದಿರುತ್ತಿರುವ ಪ್ರಮಾಣವನ್ನು ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.

ಚಿರತೆಗಳು ಪರಿಸರಕ್ಕೆ ಹೊಂದಿಕೊಳ್ಳುವ ಮತ್ತು ಜನವಸತಿ ಪ್ರದೇಶದ ಹತ್ತಿರದಲ್ಲೇ ವಾಸಿಸುವ ಸ್ವಭಾವವನ್ನು ಹೊಂದಿವೆ. ಬಹುಶಃ ಮಾನವ ಪ್ರೇರಿತ ಕಾರಣಗಳಿಂದಾಗಿ ಚಿರತೆಗಳ ಸಂಖ್ಯೆ ಕುಸಿದಿರಬಹುದಾದ ಸಾಧ್ಯತೆ ಇದೆ ಎಂದು ಅಧ್ಯಯನ ವರದಿ ತಿಳಿಸಿದೆ

click me!