ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ದಿರಿಸಿಗೆ ಭಾರತದ ಜವಳಿ ನಂಟು| ಸೊಂಟಕ್ಕೆ ಕಟ್ಟಲಾಗಿದ್ದ ಚಿನ್ನದ ಲೇಪ ಮಿಶ್ರಿತ ಹಸಿರು ಬಣ್ಣದ ರೇಷ್ಮೆ ಶಾಲಿಗೂ ಹಾಗೂ ಭಾರತಕ್ಕೂ ಸಂಬಂಧವಿದೆ
ಅಹಮದಾಬಾದ್[ಫೆ.25]: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಧರಿಸಿದ್ದ ಉಡುಗೆಗೆ ಭಾರತೀಯ ಜವಳಿ ಪರಂಪರೆಯ ಸಂಬಂಧವಿದೆ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ಶ್ವೇತ ವರ್ಣದ ಉಡುಪಿನ ಮೇಲೆ ತಮ್ಮ ಸೊಂಟಕ್ಕೆ ಕಟ್ಟಲಾಗಿದ್ದ ಚಿನ್ನದ ಲೇಪ ಮಿಶ್ರಿತ ಹಸಿರು ಬಣ್ಣದ ರೇಷ್ಮೆ ಶಾಲಿಗೂ ಹಾಗೂ ಭಾರತಕ್ಕೂ ಸಂಬಂಧವಿದೆ ಎಂದು ಪ್ರಸಿದ್ಧ ವಸ್ತ್ರ ವಿನ್ಯಾಸಕರೊಬ್ಬರು ಪ್ರತಿಪಾದಿಸಿದ್ದಾರೆ.
A post shared by Herve Pierre Creative Director (@herve_pierre_creative_director) on Feb 23, 2020 at 10:46pm PST
ಫ್ರೆಂಚ್-ಅಮೆರಿಕದ ವಿನ್ಯಾಸಕಾರ ಹರ್ವೆ ಪೀರ್, ತನ್ನ ಸ್ನೇಹಿತರು ತನಗೆ ನೀಡಿದ 20ನೇ ಶತಮಾನದ ಭಾರತದ ಜವಳಿ ಪರಂಪರೆ ದಾಖಲೆಗಳಲ್ಲಿ ಮೆಲಾನಿಯಾ ಧರಿಸಿದ್ದ ಉಡುಗೆಯ ವಿನ್ಯಾಸವನ್ನು ಕಂಡಿದ್ದೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಕುರಿತಾದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.